Advertisement

ಗೋವಾ ಸಚಿವ ಸಂಪುಟ ಶನಿವಾರ ವಿಸ್ತರಣೆ : ಆಕಾಂಕ್ಷಿಗಳಲ್ಲಿ ತಳಮಳ

06:25 PM Apr 08, 2022 | Team Udayavani |

ಪಣಜಿ: ಗೋವಾ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಶನಿವಾರ ನಡೆಯಲಿದ್ದು, ರಾಜಭವನದ ರಾಜ್‍ದರ್ಬಾರ್ ಹಾಲ್‍ನಲ್ಲಿ ಮೂವರು  ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯಾವ ಮೂವರು ಶಾಸಕರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

Advertisement

ಗೋವಾದ ಕ್ಯಾಬಿನೆಟ್ ಗರಿಷ್ಠ 11 ಜನ ಸಚಿವರನ್ನು ಹೊಂದಬಹುದಾಗಿದ್ದು, ಮುಖ್ಯಮಂತ್ರಿ ಪ್ರಮೋದ ಸಾವಂತ್ ಸಂಪುಟದಲ್ಲಿ ಸದ್ಯ ಮೂರು ಸ್ಥಾನಗಳು ಖಾಲಿ ಇವೆ. ಬಿಜೆಪಿಗೆ ಬೆಂಬಲಿಸಿರುವ ಪಕ್ಷೇತರ ಶಾಸಕ ಅಲೆಕ್ಸ ರೆಜಿನಾಲ್ಡ್ ಲಾರೆನ್ಸ್, ಎಂಜಿಪಿ ನಾಯಕ ಸುದೀನ್ ಧವಳೀಕರ್, ರವರಿಗೆ ಸಚಿವ ಸ್ಥಾನ ಪಕ್ಕಾ ಎಂದೇ ಹೇಳಲಾಗುತ್ತಿದೆ. ಇನ್ನೊಂದು ಸ್ಥಾನ ಶಾಸಕ ನೀಲಕಂಠ ಹಳರ್ಣಕರ್ ಅಥವಾ ಪಕ್ಷೇತರ ಶಾಸಕ ಚಂದ್ರಕಾಂತ ಶೇಟ್ಯೇ ರವರ ಹೆಸರು ಕೇಳಿಬರುತ್ತಿದೆ.

ಪ್ರಮೋದ ಸಾವಂತ್ ರವರು ಈಗಾಗಲೇ ಪ್ರಮುಖ ಖಾತೆಗಳನ್ನು 8 ಸಚಿವರಿಗೆ ಹಂಚಿಕೆ ಮಾಡಿರುವುದರಿಂದ ಹೊಸ ಸಚಿವರಿಗೆ ಯಾವ ಖಾತೆ ನೀಡಲಿದ್ದಾರೆ ಎಂಬುದು ಕೂಡ ಚರ್ಚೆಗೆ ಕಾರಣವಾಗಿದೆ.

ಅಪರಾಧ ತಡೆಗೆ ಕಾರ್ಯತಂತ್ರ

ಗೋವಾದಲ್ಲಿ ಅಪರಾಧ ತಡೆಗೆ ಕಾರ್ಯತಂತ್ರ ಗಳನ್ನು ರೂಪಿಸಲಾಗುವುದು ಎಂದು ಗೋವಾ ಡಿಜಿಪಿ ಜಸ್ಪಾಲ್ ಸಿಂಗ್ ಹೇಳಿದ್ದಾರೆ.

Advertisement

ಗೋವಾ ಪೋಲಿಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಗೋವಾ ಪೋಲಿಸರು ಅತ್ಯುನ್ನತ ವೃತ್ತಿಪರತೆಯನ್ನು ಹೊಂದಿದ್ದಾರೆ, ಇವರನ್ನು ದೇಶದ ಅತ್ಯುತ್ತಮ ಪೋಲಿಸ್ ಪಡೆಗೆ ಹೋಲಿಸಬಹುದು ಎಂದರು.
ಗೋವಾದ ಪೋಲಿಸ್ ಮಹಾನಿರ್ದೇಶಕರಾಗಿದ್ದ ಐ.ಡಿ.ಶುಕ್ಲಾ ಮಾರ್ಚ್ 31 ರಂದು ನಿವೃತ್ತರಾಗಿದ್ದರು.

ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ

ರಾಜ್ಯ ಪ್ರವಾಸೋದ್ಯಮ ಸುಧಾರಣೆಗಳ ಅಗತ್ಯವಿದ್ದು ಪ್ರವಾಸೋದ್ಯಮ ಖಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸಮನ್ವಯದಿಂದ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಹೇಳಿದ್ದಾರೆ.

ಪಣಜಿಯಲ್ಲಿ  ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ, ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಹೆಚ್ಚಾಗಿ ಪ್ರಭಾವ ಬೀರಿರುವ ಪ್ರವಾಸೋದ್ಯಮ ಅಭಿವೃದ್ಧಿಗೆ ಒಳನಾಡು ಮತ್ತು ಹಿನ್ನೀರಿನ ಪ್ರವಾಸೋದ್ಯಮ ಕೇಂದ್ರೀಕರಿಸಲು ನಿರ್ಧರಿಸಲಾಗಿದೆ. ಕೋವಿಡ್ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿರುವುದರಿಂದ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದರು.

ಭವಿಷ್ಯದಲ್ಲಿ ಒಳನಾಡು ಮತ್ತು ಹಿನ್ನೀರಿನ ಪ್ರವಾಸೋದ್ಯಮಕ್ಕೆ ಚಟುವಟಿಕೆಗಳಿಗೆ ಒತ್ತು ನೀಡಿ ಇಲಾಖೆಯು ಪ್ರವಾಸೋದ್ಯಮಕ್ಕೆ ಮಾರ್ಗಸೂಚಿಯನ್ನು ರಚಿಸಬೇಕಾಗಿದೆ. ಗೋವಾದಲ್ಲಿ ಪ್ರವಾಸೋದ್ಯಮ ಉದ್ಯಮಕ್ಕೆ ಪ್ರಮಾಣಕ್ಕಿಂತ ಗುಣಮಟ್ಟದ ಮೇಲೆ ಕೇಂದ್ರೀಕರಿಸುವ ಉತ್ತಮ ಮಾರ್ಗಸೂಚಿಯನ್ನು ರಚಿಸಬೇಕಾಗಿದೆ ಎಂದರು.  ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next