Advertisement

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

05:37 PM Jan 27, 2022 | Team Udayavani |

ಪಣಜಿ: ರಾಜ್ಯ ಜಲಸಂಪನ್ಮೂಲ ಸಚಿವ ಹಾಗೂ ಬಿಜೆಪಿ ಶಾಸಕ ಫಿಲಿಪ್ ನೇರಿ ರೋಡ್ರಿಗಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಫಿಲಿಪ್ ನೇರಿ ರೋಡ್ರಿಗಸ್ ರವರಿಗೆ ಸ್ಥಾನ ಲಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ತ್ಯಜಿಸಿ ಇದೀಗ ರಾಷ್ಟ್ರವಾಧಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ತಮ್ಮ ಮುಂದಿನ ನಿಲುವಿನ ಬಗ್ಗೆ ಚರ್ಚಿಸಲು ಕಳೆದ ಎರಡು ದಿನಗಳ ಹಿಂದೆ ತಮ್ಮ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಒಂದು ದಿನ ಬಾಕಿ ಉಳಿದಿರುವಾಗ ಫಿಲಿಪ್ ನೇರಿ ರವರು ಬಿಜೆಪಿ ತೊರೆದಿದ್ದಾರೆ.

ರೋಡ್ರಿಗಸ್ ಅವರು ಬಿಜೆಪಿ ತೊರೆದ ಆರನೇ ಹಾಲಿ ಶಾಸಕರಾಗಿದ್ದಾರೆ ಮತ್ತು ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರದಲ್ಲಿ ಚುನಾವಣೆಗೆ ಮುಂಚಿತವಾಗಿ ರಾಜೀನಾಮೆ ನೀಡಿದ ಮೂರನೇ ಕ್ಯಾಬಿನೆಟ್ ಸಚಿವರಾಗಿದ್ದಾರೆ.

ದಕ್ಷಿಣ ಗೋವಾದ ವೆಲಿಮ್ ಅಸೆಂಬ್ಲಿ ಕ್ಷೇತ್ರದ ಹಾಲಿ ನಾಲ್ಕನೇ ಅವಧಿಯ ಶಾಸಕರಾಗಿದ್ದ ರೋಡ್ರಿಗಸ್ ಅವರನ್ನು ಬಿಜೆಪಿಯು ಪತ್ರಕರ್ತ ಸವಿಯೋ ರೋಡ್ರಿಗಸ್ ಗೆ ಟಿಕೆಟ್ ನೀಡುವ ಮೂಲಕ ಕೈಬಿಟ್ಟಿದೆ.

Advertisement

ಜುಲೈ 2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ 10 ಕಾಂಗ್ರೆಸ್ ಶಾಸಕರಲ್ಲಿ ರೋಡ್ರಿಗಸ್ ಒಬ್ಬರಾಗಿದ್ದರು ಮತ್ತು 1999 ರಿಂದ ಕಾಂಗ್ರೆಸ್‌ ಶಾಸಕರಾಗಿ ವೆಲಿಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next