ಪಣಜಿ : ಮಹಾರಾಷ್ಟ್ರವಾಧಿ ಗೋಮಂತಕ ಪಕ್ಷದ ಅಧ್ಯಕ್ಷ ದೀಪಕ್ ಧವಳೀಕರ್ ಮತ್ತು ಶಾಸಕ ಸುದೀನ ಧವಳೀಕರ್ ರವರೊಂದಿಗೆ ಕೇಜ್ರಿವಾಲ್, ಪಣಜಿಯ ಖಾಸಗಿ ಹೋಟೆಲ್ ನಲ್ಲಿ ಮಾತುಕತೆ ನಡೆಸಿರುವುದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರವಾಧಿ ಗೋಮಂತಕ ಪಕ್ಷದ ಅಧ್ಯಕ್ಷ ದೀಪಕ್ ಧವಳೀಕರ್, ಇದು ಸೌಹಾರ್ದಯುತವಾದ ಭೇಟಿ ಚುನಾವಣಾ ಪೂರ್ವ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೆ ಮಾತುಕತೆ ನಡೆದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : “ಸಮಾಜ ಬಾಂಧವರಿಗೆ ಅಸೋಸಿಯೇಶನ್ ವಿವಿಧ ರೀತಿಯಲಿ ಸಹಕರಿಸುತ್ತದೆ’
ದೆಹಲಿ ಮುಖ್ಯಮಂತ್ರಿ ದೆಹಲಿಯಲ್ಲಿ ಆನ್‍ಲೈನ್ ಶಿಕ್ಷಣ ವಿಷಯದಲ್ಲಿ ಹಲವು ಪ್ರಯೋಗ ನಡೆಸಿದ್ದಾರೆ, ಈ ಕುರಿತು ಅವರಿಂದ ಮಾಹಿತಿ ಪಡೆದಿದ್ದೇನೆ. ಕೇಜ್ರಿವಾಲ್ ರವರು ನನ್ನನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ದೀಪಕ್ ಧವಳೀಕರ್ ಮಾಹಿತಿ ನೀಡಿದ್ದಾರೆ.
ಇನ್ನು, 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಣಜಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಗೋಳಿಸಿದ ಅವರು, ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ದಿನದ 24 ಘಂಟೆಯೂ ವಿದ್ಯುತ್ ಉಚಿತ ಪೂರೈಕೆ, ಬಾಕಿಯಿರುವ ಹಳೇಯ ವಿದ್ಯುತ್ ಬಿಲ್ ನನ್ನು ಮನ್ನಾ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿದರು.
ಇದನ್ನೂ ಓದಿ : “ಸಮಾಜ ಬಾಂಧವರಿಗೆ ಅಸೋಸಿಯೇಶನ್ ವಿವಿಧ ರೀತಿಯಲಿ ಸಹಕರಿಸುತ್ತದೆ’