Advertisement

Goa: 37 ನೇ ರಾಷ್ಟ್ರೀಯ ಕ್ರೀಡಾಕೂಟ- ಆಟಗಾರರಿಗಾಗಿ ವಿಶೇಷ ಪ್ಯಾಕೇಜ್

04:33 PM Nov 04, 2023 | Team Udayavani |

ಪಣಜಿ: ಗೋವಾದಲ್ಲಿ ನಡೆಯುತ್ತಿರುವ 37 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶಾದ್ಯಂತದ 10,000 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ ಮತ್ತು ಈ ಸ್ಪರ್ಧೆಯ ಆಟಗಾರರಿಗಾಗಿ ಸಂಘಟಕರು ವಿಶೇಷ ಪ್ಯಾಕೇಜ್ ಅನ್ನು ಸಿದ್ಧಪಡಿಸಿದ್ದಾರೆ. ಕ್ರೀಡಾಪಟುಗಳಿಗೆ ಸಮತೋಲಿತ ಆಹಾರ ಸಿಗುವಂತೆ ಮಾಡಲು ಸಾವಿರಾರು ಕೈಗಳು ಹಗಲಿರುಳು ಶ್ರಮಿಸುತ್ತಿವೆ.

Advertisement

ರಾಷ್ಟ್ರೀಯ ಕ್ರೀಡಾ ಸ್ಫರ್ಧೆಯಲ್ಲಿ ಪಾಲ್ಗೊಂಡಿರುವ ಕ್ರೀಡಾ ಪಟುಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ‘ಬಿಸಿ ಚಹಾ’ ಮತ್ತು ಎರಡು ಹೊತ್ತು ಊಟವನ್ನು ನೀಡಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಅಡುಗೆ ಮಾಡಲು 900 ಕೆಜಿ ಪನೀರ್, 750 ಕೆಜಿ ಚಿಕನ್ ಮತ್ತು 800 ಕೆಜಿ ಮೀನು, 1000 ಲೀಟರ್ ಹಾಲು, 15000 ಬಾಳೆಹಣ್ಣು, 1,250 ಕೆಜಿ ಸೇಬು ಮತ್ತು ಇತರ ತರಕಾರಿಗಳನ್ನು ಅಡುಗೆಗೆ ಬಳಸಲಾಗುತ್ತದೆ.ಪ್ರಮುಖವಾಗಿ, ಎಂದು ಕುಕ್‍ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು, ಎಲ್ಲಾ ತರಕಾರಿಗಳನ್ನು ಗೋವಾ ರಾಜ್ಯದ ಸ್ಥಳೀಯ ರೈತರ ಮುಖಾಂತರ ಪಡೆಯಲಾಗಿದೆ ಮತ್ತು ನೇರವಾಗಿ 42 ರೈತರು ಸರಬರಾಜು ಮಾಡುತ್ತಾರೆ ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ: World Cup 2023; ಪಾಕ್ ವಿರುದ್ಧದ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಚಿನ್

ಶುಚಿತ್ವ ಮತ್ತು ‘ಬಯೋಡಿಗ್ರೇಡಬಲ್’ ಪ್ಲೇಟ್‍ಗಳು: ಕ್ರೀಡಾಪಟುಗಳಿಗೆ ಆಹಾರಕ್ರಮವು ತುಂಬಾ ಮುಖ್ಯವಾಗಿದೆ. ಆದ್ದರಿಂದ, ಗೋವಾ ಸರ್ಕಾರವು ಆಟಗಾರರ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಪ್ರತಿ ದಿನವೂ ವಿಭಿನ್ನ ‘ಮೆನು’ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಎಲ್ಲ ರಾಜ್ಯಗಳ ಆಹಾರ ಸಂಸ್ಕøತಿಯೂ ಸೇರಿದೆ. ಇದಲ್ಲದೇ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಕ್ರೀಡಾಪಟುಗಳು, ತಾಂತ್ರಿಕ ಅಧಿಕಾರಿಗಳು ಮತ್ತು ಗಣ್ಯರ ಊಟಕ್ಕೆ ‘ಪರಿಸರ ಸ್ನೇಹಿ ಪ್ಲೇಟ್’ (ಡಿಗ್ರೇಡಬಲ್) ಬಳಸಲಾಗುತ್ತಿದೆ. ಅವು ಆರೋಗ್ಯಕ್ಕೆ ಹಾನಿಕಾರಕವಲ್ಲ, ಸಾಂಕ್ರಾಮಿಕವೂ ಅಲ್ಲ.
ಅಕ್ಟೋಬರ್ 26 ರಿಂದ ಗೋವಾದಲ್ಲಿ ನಡೆಯುತ್ತಿರುವ 37 ನೇಯ ರಾಷ್ಟ್ರೀಯ ಕ್ರೀಡಾ ಸ್ಫರ್ಧೆ ನೊವೆಂಬರ್ 9 ರಂದು ಸಮಾರೋಪ ಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next