Advertisement

ಗುಜರಾತ್‌ನಲ್ಲಿ ಗೋ ಸ್ಟಾರ್ಟಪ್‌ಗೆ ಉತ್ತೇಜನ

06:42 AM Apr 12, 2017 | Team Udayavani |

ಗಾಂಧಿನಗರ: ಗೋ ರಕ್ಷಣೆಗೆ ಸಮರ್ಥ ಕಾನೂನು ಜಾರಿ ಗೊಳಿಸಿದ ಬೆನ್ನಲ್ಲೇ ಗುಜರಾತ್‌ ಸರಕಾರ, ರಾಜ್ಯದಲ್ಲಿ ಗೋವು ಆಧರಿತ ಉದ್ಯಮವನ್ನು ಬೆಳೇಸುವ ಉದ್ದೇಶದೊಂದಿಗೆ ಗೋ- ಸಂಬಂಧಿ ಸ್ಟಾರ್ಟಪ್‌ಗ್ಳಿಗೆ ಉತ್ತೇಜನ ನೀಡಲು ನಿರ್ಧರಿಸಿದೆ.

Advertisement

ವೃತ್ತಿಪರ ಹಸು ಸಾಕಣೆ ಸೇರಿದಂತೆ ಹಸುವಿನ ಹಾಲು, ತುಪ್ಪ, ಗೋ ಮೂತ್ರ,  ಅರ್ಕಾ, ಔಷಧ‌ಗಳು, ಸೌಂದರ್ಯ ವರ್ಧಕ ಕ್ರೀಮ್‌ ರೀತಿಯ ಗೋಜನ್ಯ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಹಮ್ಮಿ ಕೊಳ್ಳಲಿದೆ. ಹೊಸ ವಿಧಾನಗಳ ಮೂಲಕ ಗೋ ಉತ್ಪನ್ನಗಳ ಬ್ರಾಂಡಿಂಗ್‌ ಮಾಡುವತ್ತ ಈ ಸ್ಟಾರ್ಟಪ್‌ಗ್ಳು ಗಮನಹರಿ ಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ವಿವಿಧ ವಾಣಿಜ್ಯ ಮಂಡಳಿಗಳು, ಕೈಗಾರಿಕಾ ಒಕ್ಕೂಟಗಳು ,ಪ್ರಮುಖ ಕಂಪನಿಗಳ ಸಹಯೋಗದೊಂದಿಗೆ ಗೋ ಸೇವಾ ಆಯೋಗವು ಸಮಾಲೋಚನೆ ನಡೆಸಲಿದೆ.

“ಹಸುಗಳ ಸಾಕಣೆ ಮತ್ತು ಗೋ ಉತ್ಪನ್ನಗಳನ್ನು ವಾಣಿಜ್ಯವಾಗಿ ಯಶಸ್ವಿಯಾಗಿಸಲು ಸಾಕಷ್ಟು ಅವಕಾಶಗಳಿವೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಕೂಡ ಸಿಗಲಿದ್ದು, “ಮೇಕ್‌ ಇನ್‌ ಇಂಡಿಯಾ’ ಯೋಜನೆ ಅಡಿ ಗೋ-ಸಂಬಂಧಿ ಸ್ಟಾರ್ಟಪ್‌ಗ್ಳಿಗೆ ಉತ್ತೇಜನ ನೀಡಲು ನಿರ್ಧರಿಸಿದ್ದೇವೆ,’ ಎಂದು ಗೋ ಸೇವಾ ಆಯೋಗದ ಅಧ್ಯಕ್ಷ ಡಾ| ವಲ್ಲಭ್‌ ಕಥಿರಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next