Advertisement

ಗೋ ರಕ್ಷಣೆಯಿಂದ ಪರಿಸರ,ಕೃಷಿಗೆ ಉತ್ತೇಜನ: ಪಿ. ಜಯರಾಂ ಭಟ್‌

03:45 AM Jan 29, 2017 | Team Udayavani |

ಕೂಳೂರು: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಅಭೂತ ಪೂರ್ವ ಮಂಗಲಗೋಯಾತ್ರೆ ಹಾಗೂ ಮಹಾಮಂಗಲ ಕಾರ್ಯಕ್ರಮದಿಂದ ಗೋವುಗಳ ರಕ್ಷಣೆಗೆ ಉತ್ತೇಜನ ಸಿಗುವುದರ ಜತೆಗೆ ಪರಿಸರ ಹಾಗೂ ಕೃಷಿಗೆ ಹೆಚ್ಚಿನ ಪ್ರಯೋಜನಕಾರಿ ಆಗುವುದರಲ್ಲಿ ಸಂಶಯವಿಲ್ಲ ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್‌ ಹೇಳಿದರು.

Advertisement

ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ಪರಿಕಲ್ಪನೆಯಲ್ಲಿ ನಾಡಿನ ಮಠಾಧೀಶರ ನೇತೃ
ತ್ವದಲ್ಲಿ ಅಳಿವಿನ ಅಂಚಿನಲ್ಲಿರುವ ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಗೆ ನಡೆಯುತ್ತಿರುವ ಮಹಾಭಿಯಾನ “ಮಂಗಲಗೋ ಯಾತ್ರೆ’ಯ ವೈಶಿಷ್ಟ Âಪೂರ್ಣ ಮಹಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಪಂಚಗವ್ಯ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಭಾರತೀಯ ಪರಂಪರೆ ಗಮನಿಸಿದಾಗ ಹಿಂದೆ ಪ್ರತೀ ಮನೆಯಲ್ಲಿಯೂ ಗೋವು ಸಾಕುತ್ತಿದ್ದರು. ಇದಕ್ಕೆ ನಮ್ಮ ಕುಟುಂಬವೂ ಹೊರತಾಗಿರಲಿಲ್ಲ. ಗೋವಿನ ಪ್ರತೀ ಅಂಶದಲ್ಲಿಯೂ ಔಷಧೀಯ ಗುಣವಿದ್ದು ಅನಾರೋಗ್ಯ ದೂರಮಾಡುವ ಸಾಮರ್ಥಯ ಹೊಂದಿದೆ ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ ಎಂದು ಅವರು ಹೇಳಿದರು.
 
ಉಪಕಾರಿ ಆಗಲಿ
ಗೋ ಮಾತೆಯಲ್ಲಿ ದೇವಾದಿದೇವತೆಗಳ ಅಂಶವಿದ್ದು ನಾವು ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಅನ್ನಸಂತರ್ಪಣೆಯ ಮುನ್ನ ಗೋಗ್ರಾಸ ತೆಗೆದಿಡುವ ಪದ್ಧತಿ ಅನಾದಿಕಾಲದಿಂದಲೂ ಬಂದಿದೆ. ಇದೀಗ ನಮ್ಮ ದೈವಾಂಶ ಸಂಭೂತ ಗೋವುಗಳ ರಕ್ಷಣೆಗೆ ಮಹಾಯಜ್ಞ ಇಲ್ಲಿ ಆರಂಭವಾಗಿದೆ. ಗೋವಧೆ ನಿಂತು ಮನುಕುಲ, ಕೃಷಿಗೆ, ಪರಿಸರಕ್ಕೆ ಬಹು ಉಪಕಾರಿ ಆಗಲಿ ಎಂದರು.

ನಮ್ಮದೇ ನಿಜವಾದ ಸಂಸತ್ತು
ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ನಿಜವಾದ ಸಂಸತ್ತು ಕೂಳೂರಿನ ಮಹಾಮಂಗಲ ಭೂಮಿಯಲ್ಲಿ ಜರಗುತ್ತಿದೆ. ಜ್ಞಾ ನಿಗಳು ಇಲ್ಲಿದ್ದಾರೆ. ಗೋವಿನ ರಕ್ಷಣೆಗೆ ಸಾವಿರ ಸಂತರು, ಲಕ್ಷ ಲಕ್ಷ ಗೋ ಪ್ರೇಮಿಗಳು ಆಗಮಿಸಲಿದ್ದಾರೆ. ನಿಜವಾದ ಸಂಸತ್ತು ಇದು. ಇಲ್ಲಿನ ನಿರ್ಣಯವನ್ನು ದಿಲ್ಲಿ ಸಂಸತ್ತು ಅಂಗೀಕರಿಸಿ ಗೋ ಹತ್ಯೆ ತಡೆಯಬೇಕಾಗಿದೆ. ಗೋವುಗಳ ಬಗ್ಗೆ ತಿಳಿಯಲು ಒಂದು ವಿಶ್ವ ವಿದ್ಯಾಲಯವನ್ನೇ ಸ್ಥಾಪಿಸಬೇಕಾಗಬಹುದು. ಗೋವಿನಲ್ಲಿ ಯಾವುದೇ ಕೊರತೆಯಿಲ್ಲ ಕೊರತೆಯಿರುವುದು ನಮ್ಮ ಜ್ಞಾನದಲ್ಲಿ. ಪಂಚಗವ್ಯದಂತಹ ಅಮೂಲ್ಯ ಅಮೃತವನ್ನು ನಾವು ಗೋವಿನಿಂದ ಪಡೆದು ಸೇವಿಸಿದರೆ ಚರ್ಮದಿಂದ ಎಲುಬಿನವರೆಗಿನ ರೋಗವನ್ನು ಗುಣಪಡಿಸಬಹುದು. ಇಂತಹ ಪವಿತ್ರ ಗೋತಳಿ ರಕ್ಷಿಸುವ ಮೂಲಕ ನಾವು ಗೋ ಮಾತೆ ಸೇವೆಗೆ ಮುಂದಾಗಬೇಕು ಎಂದರು.

ಸಲಹಾ ಮಂಡಳಿಯ ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಸ್ವಾಗತ ಸಮಿತಿ ಗೌರವಾಧ್ಯಕ್ಷ ನಿಟ್ಟೆ ವಿನಯ್‌ ಹೆಗ್ಡೆ, ವಿಚಾರ ಸಂಕಿರಣ
ದಲ್ಲಿ ವಿಶೇಷ ಉಪಾನ್ಯಾಸ ನೀಡಲು ಆಗಮಿಸಿದ ವಿಜ್ಞಾನಿಗಳಾದ ಡಾ| ಕೆ.ಪಿ. ರಮೇಶ್‌, ಡಾ| ಸದಾನ ಕರ್ನಲ್‌, ಡಾ| ವಡಿವೇಲ್‌ ಕೊಯಂಬತ್ತೂರ್‌, ಪ್ರೊ| ಅಲೆಕ್ಸ್‌ ಹಾಂಕಿ, ಲಂಡನ್‌ ಉಪಸ್ಥಿತರಿದ್ದರು. ಈ ಸಂದರ್ಭ ಗೋ ವಿಶ್ವ ಕೋಶ ಪ್ರದರ್ಶಿನಿಯ ಬಿಡುಗಡೆ ಸಮಾರಂಭ ಜರಗಿತು.

Advertisement

ಬೆಳಗ್ಗಿನಿಂದ ಮಹಾತ್ರಿವೇಣಿ
ರವಿವಾರ ಬೆಳಗ್ಗೆ 10ರಿಂದ ಮಹಾತ್ರಿವೇಣಿ ಸಂಗಮ (ಸಂತರು, ಗೋವು, ಗೋಭಕ್ತರು) ಜರಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ಒಂದೂವರೆ ಲಕ್ಷ ಚಪಾತಿ
ಎರಡು ದಿನದ ಕಾರ್ಯಕ್ರಮದ ಸಂದರ್ಭ ಉಪಾಹಾರ ಮತ್ತು ಊಟಕ್ಕಾಗಿ 1,47,500 ಚಪಾತಿ ತಯಾರಿಸಿ  ಕೂಳೂರು ಮಂಗಲ ಭೂಮಿಗೆ ಬಂದಿದೆ. ಇದನ್ನು ಗೋಕರ್ಣಮಂಡಲದಾದ್ಯಂತ ಮಹಿಳೆಯರು ಅವ ರವರ ಮನೆಯಲ್ಲಿ ತಯಾರಿಸಿ ಇಲ್ಲಿಗೆ ತಂದಿದ್ದಾರೆ. ಒಂದು ಮನೆಯಿಂದ ‌ನಿಷ್ಠ 20 ಹಾಗೂ ಗರಿಷ್ಠ 150 ಚಪಾತಿವರೆಗೂ ತಯಾರಿಸಿ ತರಲಾಗಿದೆ. ಬೆಂಗಳೂರಿನಲ್ಲಿ 105 ಮಹಿಳೆಯರು ಒಟ್ಟಿಗೆ ಕುಳಿತು 9,500 ಚಪಾತಿ ತಯಾರಿಸಿ ತಂದಿದ್ದಾರೆ.

1,500 ಸಂತರು, 1.5 ಲಕ್ಷ ಜನ  ನಿರೀಕ್ಷೆ
ಗೋಮಂಗಲ ಯಾತ್ರೆಯ ಮಹಾಮಂಗಲ ರವಿವಾರ ನಡೆಯಲಿದ್ದು, ಇದರಲ್ಲಿ 1,500 ಸಂತರು ಹಾಗೂ 1.5 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದೂವರೆ ಲಕ್ಷ ಮಂದಿಗೆ ಅನ್ನದಾನಕ್ಕೂ ವ್ಯವಸ್ಥೆಗಳಾಗಿವೆ. 

ಮಹಾಮಂಗಲದ ವೈಶಿಷ್ಟÂತೆಗಳು
ಶನಿವಾರ ಸುಮಾರು 50,000 ಮಂದಿ ಭೇಟಿ

ಮಧ್ಯಾಹ್ನ ಮತ್ತು ರಾತ್ರಿಗೆ ತಲಾ 20,000 ಮಂದಿಗೆ ಭೋಜನ ವ್ಯವಸ್ಥೆ

ಹೊಸನಗರ ಶ್ರೀ ರಾಮ ಚಂದ್ರಾಪುರ ಮಠದ ಗೋಶಾಲೆಯ ಅಪರೂಪದ 30 ಗೋತಳಿಗಳ ಪ್ರದರ್ಶನ

ಲಕ್ಷ ಬೆರಣಿಯಿಂದ ನಿರ್ಮಿಸಿದ ಗೋವರ್ಧನಗಿರಿ ಹಾಗೂ ಗೋಪಾಲ ಕೃಷ್ಣನಿಗೆ ವಿಶೇಷ ಪೂಜೆ

ಗವ್ಯ ಉತ್ಪನ್ನಗಳ ತಯಾರಿ, ಮಾರಾಟ, ಗೋ ತುಲಾಭಾರ

ಹಾಲು-ಮೊಸರು-ತುಪ್ಪದಿಂದ ತಯಾರಾದ ವಿಶೇಷ ತಿನಿಸುಗಳು

ಗೋ ಉತ್ಪನ್ನದಿಂದ ತಯಾರಿಸಿದ ವಸ್ತುಗಳ ಪ್ರದರ್ಶನ, ಮಾರಾಟ

ವಿಶೇಷ ಪೊಲೀಸ್‌ ಭದ್ರತಾ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್‌ ನಿಯಂತ್ರಣ

Advertisement

Udayavani is now on Telegram. Click here to join our channel and stay updated with the latest news.

Next