ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಗೋ ಫಸ್ಟ್ ಏರ್‌ಲೈನ್ಸ್ ಮೇ 15 ರ ತನಕ ತನ್ನ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಸದ್ಯಕ್ಕೆ ಇರುವ ಬುಕ್ಕಿಂಗ್‌ಗಳ ರದ್ದು ಮತ್ತು ಮುಂದಿನ ದಿನಾಂಕಕ್ಕೆ ಮರು ಹೊಂದಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿದೆ ಎಂದು ನಾಗರಿಕ ವಿಮಾನಯಾನ ಸಂಸ್ಥೆ ಮಹಾನಿರ್ದೇಶನಾಲಯ (DGCA) ಮಾಹಿತಿ ನೀಡಿದೆ.
ಈ ಹಿಂದೆ ಮೇ 3 ರಿಂದ 3 ದಿನಗಳ ಕಾಲ ಏಕಾಏಕಿ ತನ್ನ ಹಾರಾಟ ಸ್ಥಗಿತಗೊಳಿಸಿದ್ದಕ್ಕಾಗಿ ಡಿಜಿಸಿಎ ಗೋ ಫಸ್ಟ್ ಏರ್‌ಲೈನ್ಸ್‌ಗೆ ಶೋಕಾಸ್ ನೋಟಿಸ್ ನೀಡಿತ್ತು.
ಈ ನೋಟಿಸ್‌ಗೆ ಗೋ ಫಸ್ಟ್ ಏರ್‌ಲೈನ್ಸ್ ರೆಸ್ಪಾನ್ಸ್ ಮಾಡಿದ ಕೂಡಲೇ ಸದ್ಯದ ವಿಮಾನಯಾನ ನಿಯಮಗಳ ಅಡಿ ನಿಗದಿತ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡುವಂತೆ ಡಿಜಿಸಿಎ ಸೂಚನೆ ನೀಡಿದೆ.
ವಿವಿಧ ಕಾರಣಗಳಿಂದಾಗಿ ಮೇ 9 ರ ವರೆಗೆ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಗೋ ಫಸ್ಟ್ ಹೇಳಿಕೊಂಡಿದೆ.
ಇದನ್ನೂ ಓದಿ: UP ಮತ್ತೊಂದು ಎನ್‌ಕೌಂಟರ್; ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ