Advertisement
ದೇಗುಲವನ್ನು ಧ್ವಂಸಗೊಳಿಸಿ, ಮಸೀದಿ ಯನ್ನು ನಿರ್ಮಿಸಲಾಗಿದೆ ಎಂದು ಎಎಸ್‌ಐ ವರದಿಯಿಂದ ಬಹಿರಂಗವಾದ ಬೆನ್ನಲ್ಲೇ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೂಂದು ಅರ್ಜಿ ಸಲ್ಲಿಕೆಯಾಗಿದೆ.ಜ್ಞಾನವಾಪಿ ಮಸೀದಿಯ ವಾಜೂ ಕಾನ ಪ್ರದೇಶದ ನಿರ್ಬಂಧವನ್ನು ತೆರವು ಗೊಳಿಸಬೇಕು. ಜತೆಗೆ ಮಸೀದಿ ಆವರಣ ದಲ್ಲಿ ದೊರೆತಿರುವ ಶಿವಲಿಂಗಕ್ಕೆ ಯಾವುದೇ ಹಾನಿಯಾಗದಂತೆ ಎಎಸ್‌ಐ, ವಾಜೂಕಾನ ಪ್ರದೇಶದ ಸಮಗ್ರ ವೈಜ್ಞಾನಿಕ ಸರ್ವೆ ನಡೆಸಲು ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಜ್ಞಾನವ್ಯಾಪಿ ಮಸೀದಿ ಪ್ರವೇಶಿಸಲು ತಮ್ಮ ಶಿಷ್ಯರೊಂದಿಗೆ ಹೊರಟಿದ್ದ ಶಂಕರಾಚಾರ್ಯ ಜ್ಯೋತಿಷ ಪೀಠದ ಅವಿಮುಕ್ತೇಶ್ವರಾನಂದ ಅವರನ್ನು ಪೊಲೀಸರು ತಡೆದರು. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ವಾರಾ ಣಸಿಯ ಅವರ ಮಠದಲ್ಲೇ ಅವರನ್ನು, ಅವರ ಶಿಷ್ಯರನ್ನು ಮತ್ತು ಇತರೆ ಸನ್ಯಾಸಿಗಳನ್ನು ಪೊಲೀಸರು ತಡೆದರು.