Advertisement

ಸ್ಮಾರ್ಟ್‌ ಗ್ಯಾಲರಿ: ಜಿ ಮೇಲ್ ಪರ್ಮಿಷನ್‌

10:08 AM Jul 29, 2019 | keerthan |

ಜಿ ಮೇಲ್ನಲ್ಲಿ ಅಟ್ಯಾಚ್ ಮಾಡಲ್ಪಡುವ ಫೈಲ್ಗಳ ಗಾತ್ರಕ್ಕೆ ಮಿತಿ ಇದೆ. ಅದು 25 ಎಂ.ಬಿ. ಅದಕ್ಕಿಂತ ಹೆಚ್ಚಿನ ಗಾತ್ರದ ಫೈಲನ್ನು ಅಟ್ಯಾಚ್ ಮಾಡುವ ಸಂದರ್ಭದಲ್ಲಿ ಜಿಮೇಲ್ ಒಂದು ಸಂದೇಶವನ್ನು ಬಳಕೆದಾರನಿಗೆ ತೋರಿಸುತ್ತದೆ. ಆ ಸಂದೇಶ ಏನೆಂದರೆ ‘ನೀವು ಅಟ್ಯಾಚ್ ಮಾಡುತ್ತಿರುವ ಫೈಲ್ನ ಗಾತ್ರ 25 ಎಂ.ಬಿ.ಗಿಂತ ಮೇಲಿರುವುದರಿಂದ ಗೂಗಲ್ ಡ್ರೈವ್‌ನ ಸಹಾಯದೊಂದಿಗೆ ಕಳಿಸಲ್ಪಡುತ್ತಿದೆ’.

Advertisement

ಗೂಗಲ್ ಡ್ರೈವ್‌ ಎನ್ನುವುದು ಅಂತರ್ಜಾಲದಲ್ಲಿ ಮಾಹಿತಿ ಕಡತಗಳನ್ನು ಸಂಗ್ರಹಿಸಿಡುವ (ಆನ್‌ಲೈನ್‌ ಸ್ಟೋರೇಜ್‌) ತಾಣ. ಗೂಗಲ್ ಡ್ರೈವ್‌ ಎನ್ನುವುದು ಗೂಗಲ್ನದೇ ಇನ್ನೊಂದು ಸೇವೆ. ಇಲ್ಲಿ ಎಷ್ಟು ಗಾತ್ರದ ಫೈಲನ್ನಾದರೂ ಅಟ್ಯಾಚ್ ಮಾಡಬಹುದು. ಆದರೆ ಆ ಫೈಲನ್ನು ತೆರೆಯಲು ಅನುವಾಗುವಂತೆ ಪರ್ಮೀಷನ್‌ ನೀಡುವುದನ್ನು ಕಳಿಸುವಾತ ಮರೆಯಬಾರದು. ಫೈಲ್ ಅಪ್‌ಲೋಡ್‌ ಆದಮೇಲೆ ಸೆಂಡ್‌ ಬಟನ್‌ ಒತ್ತಿದಾಗ ಗೂಗಲ್ ಒಂದು ಸಂದೇಶವನ್ನು ತೆರೆ ಮೇಲೆ ತೋರಿಸುತ್ತದೆ. ಅದರಲ್ಲಿ ಪರ್ಮೀಷನ್‌ ಆಯ್ಕೆ ಇರುತ್ತದೆ. ಅಂದರೆ ಆ ಫೈಲನ್ನು ಯಾರ್ಯಾರು ನೋಡಬಹುದು? ಕೇವಲ ಒಬ್ಬರಿಗೇ ಮಾತ್ರ ತೆರೆಯುವಂತೆ ಮಾಡುವುದು, ಮುಂತಾದ ಆಯ್ಕೆ ಇರುತ್ತವೆ. ಅವನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next