Advertisement
ಇದನ್ನೂ ಓದಿ:ಮಲ್ಪೆ : ಆರಂಭಗೊಳ್ಳದ ಸೈಂಟ್‌ಮೇರಿ ದ್ವೀಪಯಾನ ; ಪ್ರವಾಸಿಗರಿಗೆ ನಿರಾಸೆ
ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು. ಆಮಂತ್ರಣ ಪತ್ರಿಕೆ ಯನ್ನು ಅವರಿಗೆ ಕಳುಹಿಸಿ ಕೊಟ್ಟು ಸ್ವತಃ ನಾನೇ ಆಹ್ವಾನಿ ಸುತ್ತೇನೆ. ಅವರ ಸಮಯ ವನ್ನು ಗೊತ್ತುಪಡಿಸಿ ಉದ್ಘಾಟನೆ ಸಮಯ ನಿಗದಿಪಡಿಸಲಾಗುವುದು ಎಂದರು.
Related Articles
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ಮಾತನಾಡಿ, “ಮಂಗಳೂರು ದಸರಾ’ದ ಶಾರದೆಗೆ ಈ ಬಾರಿ 12 ಲಕ್ಷ ರೂ. ವೆಚ್ಚದಲ್ಲಿ 12 ಕೆ.ಜಿ. ತೂಕದ ರಜತ ಪೀಠವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ ಮತ್ತು ಭಕ್ತರ ಸೇವೆಯಾಗಿ ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ. ಸೆ. 24ರಂದು ಸಮರ್ಪಣೆ ನಡೆಯಲಿದೆ. ಭಕ್ತರೊಬ್ಬರು ಬೆಳ್ಳಿಯ ವೀಣೆಯನ್ನು ಕಾಣಿಕೆಯಾಗಿ ನೀಡಲಿದ್ದಾರೆ ಎಂದರು. ಭಕ್ತರ ಅನುಕೂಲ ಕ್ಕಾಗಿ ಮೆರವಣಿಗೆಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಿರುವುದಾಗಿ ಅವರು ತಿಳಿಸಿದರು.
Advertisement
ಮೇಯರ್ ಜಯಾನಂದ ಅಂಚನ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಮಾನಾಥ್ ಕಾರಂದೂರು, ಶೈಲೇಂದ್ರ ವೈ. ಸುವರ್ಣ, ಎಚ್.ಎಸ್. ಜಯರಾಜ್, ಕೃತಿನ್ ಡಿ. ಅಮೀನ್, ಚಂದನ್‌ದಾಸ್ ಮೊದಲಾದವರು ಸಭೆಯಲ್ಲಿದ್ದರು.