Advertisement

ವುಹಾನ್‌ನಲ್ಲಿ ಲಕ್ಷಾಂತರ ಜನರಿಗೆ ಮತ್ತೆ ಸೋಂಕು ಪರೀಕ್ಷೆ

10:42 AM May 13, 2020 | sudhir |

ವುಹಾನ್‌ : ಕಳೆದ 35 ದಿನಗಳಿಂದ ಯಾವುದೇ ಹೊಸ ಸೋಂಕು ಪ್ರಕರಣ ದಾಖಲಾದ ಕಾರಣ ನಿಶ್ಚಿಂತೆಯಿಂದ ಇದ್ದ ಚೀನದ ವುಹಾನ್‌ನಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ವಾರಂತ್ಯದಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆ. ಅಚ್ಚರಿ ಎಂದರೆ ಸದ್ಯ ಪತ್ತೆಯಾಗಿರುವ ಅಷ್ಟು ಸೋಂಕು ಪ್ರಕರಣಗಳು ದೇಶಿಯ ಮೂಲದೇ ಆಗಿವೆ.

Advertisement

ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮತ್ತೆ ಸೋಂಕು ಹರಡುವ ಭೀತಿ ಶುರುವಾಗಿದ್ದು, ಸ್ಥಳೀಯ ಅಧಿಕಾರಿಗಳು ಮುಂಬರುವ ಹತ್ತು ದಿನಗಳ ಕಾಲ ನಗರಾದ್ಯಂತ ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆಯನ್ನು ನಡೆಸಲು ಯೋಜನೆ ರೂಪಿಸಿದ್ದಾರೆ. ನಿತ್ಯ ಸುಮಾರು 11 ಲಕ್ಷಕ್ಕೂ ಹೆಚ್ಚು ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next