Advertisement
ಒಂದು ವೇಳೆ ಪೇಟೆಂಟ್ ಸಿಕ್ಕರೆ, ಕೊಲ್ಲಾಪುರ ಪಾದರಕ್ಷೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಲಿದೆ. ಇದರಿಂದ ತನ್ನದೇ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ಕೊಲ್ಲಾಪುರ ಪಾದರಕ್ಷೆಗಳನ್ನು ನಕಲು ಮಾಡುವುದು, ಸ್ಥಳೀಯವಾಗಿ ಎಲ್ಲೆಂದರಲ್ಲಿ ಮಾರಾಟ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಜತೆಗೆ ಕೊಲ್ಲಾಪುರ ಪಾದರಕ್ಷೆಗೆ ಹಾಗೂ ಅವುಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಲಿದೆ.
Related Articles
Advertisement
ಯಾವುದೇ ಒಂದು ವಸ್ತು ಸ್ಥಳೀಯವಾಗಿ ವಿಶಿಷ್ಟ ಗುಣಮಟ್ಟ ಹೊಂದಿದ್ದರೆ, ಅದರ ಪೇಟೆಂಟ್ ಪಡೆಯಲು ಅವಕಾಶ ಇದೆ.ಕೊಲ್ಲಾಪುರ ಪಾದರಕ್ಷೆ ಆ ಅರ್ಹತೆ ಹೊಂದಿದೆ. ಇದನ್ನು ಉಳಿಸಿ, ಬೆಳೆಸಲು ಪೇಟೆಂಟ್ ಅನುಕೂಲ ಆಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್ ತಿಳಿಸಿದರು. ಎಂ.ಜಿ.ರಸ್ತೆಯಲ್ಲಿ
ಕೊಲ್ಲಾಪುರ ಪಾದರಕ್ಷೆ!
ಕಾವೇರಿ ಎಂಪೋರಿಯಂ ಮಾದರಿಯಲ್ಲೇ ಎಂ.ಜಿ.ರಸ್ತೆಯಲ್ಲಿ ಕೊಲ್ಲಾಪುರ ಪಾದರಕ್ಷೆಗಳ ಮಾರಾಟಕ್ಕಾಗಿಯೇ ಪ್ರತ್ಯೇಕ ಮಳಿಗೆ
ತೆರೆಯಲು ಉದ್ದೇಶಿಸಲಾಗಿದೆ ಎಂದು ಡಾ.ನಟರಾಜ್ ತಿಳಿಸಿದರು. ಸದ್ಯ ರಾಜಾಜಿನಗರ, ಮೆಜೆಸ್ಟಿಕ್ ಸುತ್ತ ಕೊಲ್ಲಾಪುರ ಪಾದರಕ್ಷೆಗಳು ಸಿಗುತ್ತವೆ. ಆದರೆ, ಈ ಪಾದರಕ್ಷೆಗಳಿಗಾಗಿಯೇ ಪ್ರತ್ಯೇಕ ಮಳಿಗೆ ಎಲ್ಲಿಯೂ ಇಲ್ಲ. ಮೈಸೂರು ಮತ್ತು ನಗರದ ಎಂ.ಜಿ.ರಸ್ತೆಯಲ್ಲಿ ಪ್ರತ್ಯೇಕ ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಾಗದ ಹುಡುಕಾಟ ಸೇರಿದಂತೆ ಪೂರಕ ಪ್ರಕ್ರಿಯೆಗಳಿಗೆ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.