ಮಣಿಪಾಲ: ಫೋಟೊಮಾಡ್ಯುಲೇಶನ್ ಥೆರಪಿ (ಪಿಬಿಎಂ) ಕ್ಷೇತ್ರದ ಮಹತ್ವಪೂರ್ಣ ಸಾಧನೆಗಾಗಿ ಫೋಟೊಮಾಡ್ಯುಲೇಶನ್ ಥೆರಪಿಯ ಜಾಗತಿಕ ಸಂಘಟನೆ (ಡಬ್ಲೂéಎಎಲ್‌ಟಿ)ಯು ಮಾಹೆ ವಿ.ವಿ.ಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಸಂಸ್ಥೆಯಾಗಿ ಮಾನ್ಯ ಮಾಡಿದೆ.
ಡಬ್ಲೂಎಎಲ್‌ಟಿಯ (ವಾಲ್ಟ್) ಸದಸ್ಯ ನಿರ್ದೇಶಕ ಡಾ| ಜಿ. ಅರುಣ್ ಮಯ್ಯ ಅವರು ಈ ಕ್ಷೇತ್ರದ ಮುಂಚೂಣಿ ಸಾಧಕರಾಗಿದ್ದು ಜಾಗತಿಕ ಮಾನ್ಯತೆ ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಡಾ| ಮಯ್ಯ ಅವರ ಸಹಭಾಗಿತ್ವದ ಸಂಶೋಧನೆ, ವೈಜ್ಞಾನಿಕ ಸಂವಾದಗಳಿಗೆ ನೀಡಲಾದ ಮಹತ್ವದ ಕೊಡುಗೆಗಳು, ನೋವಿನ ನಿಭಾವಣೆ ಮತ್ತು ಕಾಯಿಲೆಯ ಸ್ಥಿತಿಗನುಗುಣವಾಗಿ ಅಂಗಾಂಶ ಚಿಕಿತ್ಸೆಗೆ ಸಂಬಂಧಿಸಿದ ಫೋಟೊಮಾಡ್ಯುಲೇಶನ್ ಥೆರಪಿಯಲ್ಲಿ ವಿಶೇಷ ಸುಧಾರಣೆಯನ್ನು ದಾಖಲಿಸಿವೆ. ಡಬ್ಲೂಎಎಲ್‌ಟಿಯ ಅಧ್ಯಕ್ಷ ಡಾ| ರೇನ್‌ಜಿàನ್ ಬೆನ್ಸಾಡೌನ್ ಅವರು ಮಾಹೆಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಫೋಟೊಮಾಡ್ಯುಲೇಶನ್ ಥೆರಪಿಯ ಕೇಂದ್ರವಾಗಿ ಅನುಮೋದಿಸಿದ್ದಾರೆ ಮತ್ತು ಡಾ| ಜಿ. ಅರುಣ್ ಮಯ್ಯ ಅವರನ್ನು ವಿಶೇಷ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು, ಕೇಂದ್ರದ ಸಾಧನೆಯನ್ನು ಶ್ಲಾ ಸಿ, ಪ್ರಸ್ತುತ ಲಭಿಸಿರುವ ಜಾಗತಿಕ ಮಾನ್ಯತೆಯು ಸಾಮಾಜಿಕ ಸ್ವಾಸ್ಥ್ಯಪಾಲನೆಯಲ್ಲಿ ಸಂಸ್ಥೆಯ ಬದ್ಧತೆ ಮತ್ತು ಪ್ರಾಧ್ಯಾಪಕರ ನಿರಂತರ ಸಂಶೋಧನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು, ಕರ್ತವ್ಯದ ಬದ್ಧತೆಯಿಂದ ಜಾಗತಿಕ ಮಾನ್ಯತೆ ಪಡೆಯಲು ಸಾಧ್ಯವಾಗಿದೆ. ಮಾಹೆ ಘಟಕಕ್ಕೆ ದೊರೆತಿರುವ ಜಾಗತಿಕ ಮಾನ್ಯತೆಯು ಜನರ ಆರೋಗ್ಯಪಾಲನೆ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯಸಾಧನೆಗೆ ಪ್ರೋತ್ಸಾಹವಾಗಿದೆ ಎಂದರು.
ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್, ಕುಲಸಚಿವ ಡಾ| ಗಿರಿಧರ ಕಿಣಿ, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಮಾಹೆ ಸಿಒಒ ಡಾ| ಆನಂದ್ ವೇಣುಗೋಪಾಲ್, ಯುಎಸ್‌ಎ ವಾಲ್ಟ್ ಮಾಜಿ ಅಧ್ಯಕ್ಷ ಡಾ| ಪ್ರವೀಣ್ ಆರ್. ಅರನ್ಯ, ಡಾ| ಅರುಣ್ ಮಯ್ಯ, ಮಾಹೆ ಪಬ್ಲಿಕ್ ರಿಲೇಶನ್ ಡೆಪ್ಯೂಟಿ ಡೈರೆಕ್ಟರ್ ಸಚಿನ್ ಕಾರಂತ ಉಪಸ್ಥಿತರಿದ್ದರು.