Advertisement

ಶಿವರಾಮ ಕೆ. ಭಂಡಾರಿ ಅವರಿಗೆ ಗ್ಲೋಬಲ್‌ ಲೀಡರ್ ಆವಾರ್ಡ್‌

08:28 PM Mar 24, 2019 | Team Udayavani |

ಮುಂಬಯಿ: ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಮೂಲದ ಮುಂಬಯಿ ಮಹಾನಗರದಲ್ಲಿ ಹೇರ್‌ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿಕೊಂಡಿರುವ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾಸ್‌ ಹೇರ್‌ ಡಿಝೈನರ್ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಡಾ| ಶಿವರಾಮ್‌ ಕೆ. ಭಂಡಾರಿ ಇವರಿಗೆ ಗ್ಲೋಬಲ್‌ ಲೀಡರ್ ಸಂಸ್ಥೆಯು ವರ್ಷದ ಮೋಸ್ಟ್‌ ಇನೋವೇಟಿವ್‌ ಹೇರ್‌ ಸ್ಟೈಲ್‌ ಆಫ್‌ ದಿ ಈಯರ್‌ ಗ್ಲೋಬಲ್‌ ಲೀಡರ್ ಆವಾರ್ಡ್‌ ಎಂಟರ್‌ಪ್ರೈಸ್‌ ಎಡಿಶನ್‌-2019′ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.

Advertisement

ಮಾ. 16ರಂದು ದುಬೈಯ ಜೆ.ಡಬ್ಲೂ$Â ಮಾರಿಯೆಟ್‌ ಹೊಟೇಲ್‌ ಸ‌ಭಾಗೃಹದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಾಲಿವುಡ್‌ ಚಿತ್ರ ನಿರ್ಮಾಪಕ ಮಧುರ್‌ ಭಂಡಾರ್ಕರ್‌ ಅವರು ಶಿವರಾಮ್‌ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು.

ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಕಾರ್ಯಾಚರಿಸುತ್ತಾ ವ್ಯಕ್ತಿತ್ವದಲ್ಲಿ ಬಾಲಿವುಡ್‌ ವ್ಯಕ್ತಿಯಂತೆಯೇ ಪ್ರಜ್ವಲಿಸುತ್ತಾ ಸದಾತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವರಾಮ ಅವರು ತುಳುನಾಡ ಹಳ್ಳಿ ಹುಡುಗನೋರ್ವ ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಭಂಡಾರಿ ಸಮಾಜದ ಮಿನುಗುತಾರೆ ಆಗಿರುವ ಶಿವರಾಮ ಭಂಡಾರಿ ಅವರ ಸಾಧನೆ ಪ್ರಸಕ್ತ ಪೀಳಿಗೆಗೆ ಮಾದರಿಯಾಗಿದೆ. ಹೇರ್‌ ಕಟ್ಟಿಂಗ್‌ ಸಲೂನ್‌ಗೆ ಹೊಸ ಆಯಾಮ ನೀಡಿ ತನ್ನ ûೌರ ಉದ್ಯಮವನ್ನು ಪ್ರೈವೇಟ್‌ ಲಿಮಿಟೆಡ್‌ ಮೂಲಕ ಶಿವಾಸ್‌ ಹೇರ್‌ ಸ್ಟೈಲೋ ಡಿಸೈನರ್‌ ಹೆಸರಿನೊಂದಿಗೆ ಮುನ್ನಡೆಸುತ್ತಿರುವುದು ಅಭಿನಂದನೀಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಮಧುರ್‌ ಭಂಡಾರ್ಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next