Advertisement
ಅವರು ಮೂಲ್ಕಿ ಕೊಲಾ°ಡಿನ ರಾಮಕೃಷ್ಣ ಪೂಂಜ ವೇದಿಕೆಯಲ್ಲಿ ಕೃಷಿ ಸಿರಿ -2022ರ ಉದ್ಘಾಟನೆ ಮತ್ತು ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉನ್ನತ ಶಿಕ್ಷಣ ಪಡೆದ ಯುವಕರು ಕೃಷಿಗೆ ಇಳಿಯುವುದಿಲ್ಲ. ಆದರೆ ಆದರೆ ಕೃಷಿಯ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಅವಕಾಶ ಇದೆ ಎಂದಾಗ ಮುಂದೆ ಬರುತ್ತಾರೆ. ಇದು ಕೇಂದ್ರ ಸರಕಾರ ಕೃಷಿ ಪೂರಕ ಯೋಜನೆಗಳಿಗೆ ಬೆಂಬಲ ನೀಡಿರುವುದರ ಫಲ. ದೇಶ ಕೃಷ್ಯುತ್ಪನ್ನಗಳ ರಫ್ತಿನಲ್ಲಿ ಜಗತ್ತಿನಲ್ಲಿ 9ನೇ ಸ್ಥಾನಕ್ಕೆ ಏರಿರುವುದು ಸಾಧನೆ ಎಂದರು.
ಎರಡು ತಿಂಗಳು ಕೆಲಸ ಮಾಡಿ ವರ್ಷವಿಡೀ ಹೊಟ್ಟೆ ತುಂಬಾ ಊಟ ಮಾಡಲು ಸಿಗುವುದು ಕೃಷಿಯಿಂದ ಮಾತ್ರ. ಇದು ನಷ್ಟದ ಉದ್ಯಮ ಅಲ್ಲ, ಹೆಮ್ಮೆಯ ವಿಷಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹೇಳಿದರು.
ರೈತನಿಗೆ ಸೋಲು, ಕಷ್ಟ ಎಂಬುದಿಲ್ಲ. ಕೃಷಿಕರ ಮನೆಮಕ್ಕಳು ಬಹಳಷ್ಟು ಸಾಧನೆ ಮಾಡಿದ್ದಾರೆ, ಅವರು ಕೃಷಿಯ ಜತೆಗೇ ಬೆಳೆದವರು ಎಂಬುದನ್ನು ಮರೆಯಲಾಗದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.
Related Articles
Advertisement
ಸಾಧಕರಿಗೆ ಸಮ್ಮಾನಕೃಷಿ ಸಾಧಕರಾದ ಅಬೂಬಕ್ಕರ್ ಸಿದ್ದಿಕ್, ರಘುರಾಮ ಕುಲಾಲ್, ವಿಶೇಶ್ವರ ಸಜ್ಜನ, ನಿತ್ಯಾನಂದ ಕರ್ಕೆರಾ ಮತ್ತು ಶ್ರೀನಿವಾಸ್ ಗಾಣಿಗ ಅವರನ್ನು ಸಮ್ಮಾನಿಸಲಾಯಿತು. ವಿನಯ ಕೃಷಿ ಬೆಳೆಗಾರರ ಸಂಘಕ್ಕೆ ಕೃಷಿ ಇಲಾಖೆಯ 8 ಲಕ್ಷ ರೂ. ಸಹಾಯಧನದ ಟ್ರ್ಯಾಕ್ಟರ್ ಹಸ್ತಾಂತರಿಸಲಾಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ್ ಶೆಟ್ಟಿ, ಶ್ರೀನಿವಾಸ್ ವಿ.ವಿ.ಯ ಉಪಕುಲಪತಿ ಪಿ. ರಮಣ್ ಐತಾಳ್, ಪಟ್ಲ ಫೌಂಡೇಶನ್‌ನ ಸತೀಶ್ ಶೆಟ್ಟಿ ಪಟ್ಲ, ಉಧ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ, ಸಮಿತಿಯ ಅಧ್ಯಕ್ಷ ವಿಜಯ ಶೆಟ್ಟಿ ಕೊಲಾ°ಡ್, ಸಂಚಾಲಕರಾದ ಕೃಷ್ಣ ಶೆಟ್ಟಿ ತಾರೆಮಾರ್, ಡಾ| ಅಣ್ಣಯ್ಯ ಕುಲಾಲ್, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸುಮಿತ್ರಾ ವಿಜಯ್ ಶೆಟ್ಟಿ ಉಪಸ್ಥಿರಿದ್ದರು. ಸಂಚಾಲಕ ಪ್ರಶಾಂತ್ ಪೈ ಸ್ವಾಗತಿಸಿದರು. ದಾಮೋದರ್ ಶರ್ಮಾ ನಿರೂಪಿಸಿದರು. ಸಂತೋಷ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.