Advertisement

ಗೌರಿಶಂಕರಕ್ಕೆ ಕಸದ ಅವಮಾನ

11:52 AM Jun 18, 2018 | Harsha Rao |

ವರ್ಷದಿಂದ ವರ್ಷಕ್ಕೆ ವಿಶ್ವದ ಅತ್ಯುನ್ನತ ಶಿಖರ ಎವರೆಸ್ಟ್‌ (ಗೌರಿಶಂಕರ) ಅನ್ನು ಏರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ, ಪರ್ವತದ ಹಿಮದ ಹಾದಿಗಳು ಮಲಿನಗೊಳ್ಳುತ್ತಿವೆ. ಪರ್ವತಾರೋಹಣ ವೇಳೆ ತಿನ್ನುವ ಆಹಾರದಿಂದ ಹಿಡಿದು, ಬಿಸಾಕುವ ಕಸ, ತ್ಯಾಜ್ಯಗಳು ಈಗ ಪರ್ವತದ ಒಡಲನ್ನು ತುಂಬಿಕೊಂಡಿವೆ. 

Advertisement

ಸರಕಾರದ ಕ್ರಮಗಳೇನು? 

ನೇಪಾಲ 
– ಪರ್ವತದ ನೇಪಾಲ ಪಾರ್ಶ್ವ ಏರಲು ಬಯಸುವ ಚಾರಣಿಗರಿಗೆ 2.70 ಲಕ್ಷ ರೂ. ಠೇವಣಿ
– ಪರ್ವತದಿಂದ ಇಳಿಯುವಾಗ ಕನಿಷ್ಠ 8 ಕೆ.ಜಿ. ಕಸ ತರಲೇಬೇಕು.
– ನಿಗದಿತ ಕಸ ತಂದರೆ ಮಾತ್ರ ಠೇವಣಿ ಹಣ ಸಂಪೂರ್ಣ ವಾಪಸ್‌

ಟಿಬೆಟ್‌
– ಟಿಬೆಟ್‌ ಕಡೆಯ ಪಾರ್ಶ್ವವನ್ನು ಹತ್ತ ಬಯಸುವವರಿಗೆ ಡೆಪಾಸಿಟ್‌ ಇಲ್ಲ.
– ಪರ್ವತದಿಂದ ಕನಿಷ್ಠ 8 ಕೆಜಿ ಕಸ ತರಲೇಬೇಕು
– ನಿಗದಿತ ಕಸಕ್ಕಿಂತ ಕಡಿಮೆ ಕಸ ತಂದರೆ ಪ್ರತಿ ಕೆಜಿಗೆ ಅಂದಾಜು 7,000 ರೂ. ದಂಡ

1953 
ತೇನ್‌ ಸಿಂಗ್‌, ಹಿಲೇರಿ ಮೊದಲ ಬಾರಿಗೆ ಪರ್ವತ ಏರಿದ ವರ್ಷ.

Advertisement

4,000 
ಕಳೆದ 65 ವರ್ಷಗಳಲ್ಲಿ ಎವರೆಸ್ಟ್‌ ಏರಿದವರ ಸಂಖ್ಯೆ.

600 
ಈ ವರ್ಷ ಶಿಖರ ಏರಿದ ಪರ್ವತಾರೋಹಿಗಳು.

12,000ಕೆಜಿ
ಪರ್ವತಾರೋಹಿಗಳಿಂದ ಪ್ರತಿ ವರ್ಷ ಬೀಳುವ ತ್ಯಾಜ್ಯ

ಕಸದ ರಾಶಿಯಲ್ಲಿ ಏನಿದೆ?
– ಟೆಂಟ್‌ಗಳ ಅವಶೇಷಗಳು
– ಬೆಟ್ಟ ಹತ್ತಲು ಬಳಸುವ ಸಾಧನಗಳು
– ಖಾಲಿಯಾದ ಆಮ್ಲಜನಕ ಕ್ಯಾನಿಸ್ಟರ್‌ಗಳು 
– ಆಹಾರ ಪೊಟ್ಟಣಗಳು
– ಕಸ, ಕಡ್ಡಿ, ಚಪ್ಪಲಿ, ಬಟ್ಟೆಗಳು

Advertisement

Udayavani is now on Telegram. Click here to join our channel and stay updated with the latest news.

Next