Advertisement

ಲಾಲ್‌ಬಾಗ್‌ನಲ್ಲಿ ತಾರಾ ಮೆರುಗು

12:11 PM Aug 12, 2018 | Team Udayavani |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ‌ಲಪುಷ್ಪ ಪ್ರದರ್ಶನದಲ್ಲಿ ಶನಿವಾರ ಚಿತ್ರ ರಂಗದ ಗಣ್ಯರಿಗಾಗಿಯೇ ವಿಶೇಷ ಆಹ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಟ ದೊಡ್ಡಣ್ಣ, ರಾಜ್‌ಲೈನ್‌ ವೆಂಕಟೇಶ್‌, ವಿ.ಮನೋಹರ್‌, ಟಿ.ಎಸ್‌.ನಾಗಾಭರಣ, ಚಂದನ್‌ ಶೆಟ್ಟಿ, ನಟಿ ರೂಪಿಣಿ ಸೇರಿ ಹಲವು ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ಆಗಮಿಸಿದ್ದರು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಕೂಡ ಪಾಲ್ಗೊಂಡಿದ್ದರು. ಶನಿವಾರ ಸುಮಾರು 30 ಸಾವಿರಕ್ಕೂ ಹೆಚ್ಚು ವಯಸ್ಕರು ಹಾಗೂ 5 ಸಾವಿರ ಮಕ್ಕಳು ಭೇಟಿ ನೀಡಿದ್ದು, ಸುಮಾರು 22.9 ಲಕ್ಷ ರೂ. ಹಣ ಸಂಗ್ರಹವಾಗಿದೆ. ಒಟ್ಟಾರೆ ಆಗಸ್ಟ್‌ 4ರಿಂದ 11ರ ವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು ಒಟ್ಟು 95 ಲಕ್ಷ ರೂ. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next