Advertisement
Related Articles
Advertisement
ಇದರ ಒಳಗೆ ನಿಂತರೆ ಮನಸ್ಸು ಸಂಭ್ರಮದಲ್ಲಿ ತೇಲುತ್ತದೆ. ಗಾಜಿನ ಮನೆಯ ಮಹಿಮೆಯೇ ಅಂಥದ್ದು. ಇದು ಕೇವಲ ಮನೆಯಂತೆ ಭಾಸವಾಗುವುದಿಲ್ಲ. ಬದಲಾಗಿ, ಯಾವುದೇ ಅರಮನೆಯಂತೆ ಅನಿಸುತ್ತದೆ. ಗೋಡೆ ಸಿಕ್ಕರೂ ಅದೂ ಕೂಡ ಗಾಜೇ ಆದ್ದರಿಂದ ಬಯಲಲ್ಲಿ ನಿಂತಂತೆ ಆಗುತ್ತದೆ.
ಗಾಜಿನ ಮನೆ ವಿಸ್ತೀರ್ಣ 75 ಸಾವಿರ ಚದುರ ಅಡಿ ಇದೆ. ಪೂರ್ವ-ಪಶ್ಚಿಮ 258 ಮೀಟರ್ ಉದ್ದ, ಉತ್ತರ-ದಕ್ಷಿಣ 63 ಮೀಟರ್ ಅಗಲವಿದೆ. 17 ಮೀಟರ್ ಎತ್ತರದ ಸೆಂಟ್ರಲ್ ಡ್ನೂಮ್ ಹಾಗೂ 14 ಮೀಟರ್‌ನ ಸೈಡ್ ವಿಂಗ್ಸ್ ಹೊಂದಿದೆ.
5 ಕೋಟಿ ರೂ. ಅಂದಾಜಿನಲ್ಲಿ ಆರಂಭಿಸಿದ ಗಾಜಿನ ಮನೆ ನಿರ್ಮಾಣದ ವೆಚ್ಚ ಸದ್ಯ 26.28 ಕೋಟಿ ರೂ. ತಲುಪಿದೆ. ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಈ ಗಾಜಿನ ಮನೆ ಅತ್ಯದ್ಭುತವಾಗಿ ಮೂಡಿ ಬರಲು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಲ್ಪನೆ, ದೃಷ್ಟಿಕೋನ ಕಾರಣ. ಜೊತೆಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿದ್ದ ಎಸ್.ಟಿ.ವೇದಮೂರ್ತಿ ಮತ್ತವರ ತಂಡದ ಪರಿಶ್ರಮವೂ ಇದೆ.
ಈ ಗ್ಲಾಸ್ ಹೌಸ್‌ನಿಂದಾಗಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಶೈಕ್ಷಣಿಕ-ವಾಣಿಜ್ಯ ನಗರಿ ದಾವಣಗೆರೆ ಇನ್ನು ಮುಂದೆ ಮತ್ತಷ್ಟು ಜನಪ್ರಿಯವಾಗಲಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ.
ಹೆಮ್ಮೆಯ ಸಂಗತಿ ಎಂದರೆ ದಾವಣಗೆರೆ ಗಾಜಿನ ಮನೆ ಆಕರ್ಷಕ ವಿನ್ಯಾಸಕ್ಕೆ ಝಾಕ್ ಗ್ರೂಪ್ ಪ್ರಶಸ್ತಿ ಲಭಿಸಿದೆ. ಆ ಮೂಲಕ ಗಾಜಿನ ಮನೆಗೆ ಅಂತಾರಾಷ್ಟೀಯ ಮನ್ನಣೆ ಸಿಕ್ಕಂತಾಗಿದೆ.
ವಿದೇಶಿ ಮರಗಳು..ಪೈನಾಪಲ್ ಪಾಲ್ಮ್, ಇಟಾಲಿಯನ್ ಸೈಪ್ರಸ್, ಪೆರೆÕ$çನ್ ಸೈಪ್ರಸ್, ಇಟಾಲಿಯನ್ ಸೈಪ್ರಸ್ ಸ್ಟ್ರಿಕ್ಟ, ರೆಡ್ ನೆಕ್ ಪಾಲ್ಮ್, ಆಲಿವ್, ಮೆಕ್ಸಿಕಾನ್ ಫ್ಯಾನ್ ಪಾಲ್ಮ್, ಬಾಟಲ್ ಟ್ರಿ, ಡ್ರಾಗನ್, ಟರ್ಮಿನಲಿಯಾ ಮಸೊcಟ, ಫಿಕಸ್ ಸೇರಿ ವಿವಿಧ ವಿದೇಶಿ ಗಿಡ-ಮರಗಳನ್ನು ಗಾಜಿನ ಮನೆ ಉದ್ಯಾನ ವನದಲ್ಲಿ ನಾಟಿ ಮಾಡಲಾಗಿದೆ. ಜಿಮ್-ಆಟಿಕೆ
ವಿಶಾಲವಾದ ಜಾಗದಲ್ಲಿ ಬರೀ ಗಾಜಿನ ಮನೆಯೊಂದೇ ಇಲ್ಲ. ಆವರಣದಲ್ಲಿ ಕಂಗೊಳಿಸುತ್ತಿರುವ ಉದ್ಯಾನವನ, ಮಕ್ಕಳ ಆಟಿಕೆ, ವಯಸ್ಕರಿಗೆ ಜಿಮ್ ಇವೆ. ಪಾದಚಾರಿಗಳಿಗೆ ವಾಕಿಂಗ್ ಪಾಥ್ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಶೌಚಾಲಯ. ಕ್ಯಾಂಟೀನ್ ವ್ಯವಸ್ಥೆ ಯೋಜನೆ ರೂಪಿಸಲಾಗಿದೆ.
ಗ್ಲಾಸ್ ಬಳಕೆ
ಈ ಗಾಜಿನ ಮನೆ ನಿರ್ಮಾಣದಲ್ಲಿ 6+6 ಎಂ.ಎಂನ ಪೇಂಟ್ ಗ್ಲೋಬಿಂಗ್ ಗಾಜನ್ನು ಬಳಸಿದ್ದಾರೆ. ಹೈದರಾಬಾದ್, ಚೆನ್ನೈಯಿಂದ ಗಾಜನ್ನು ತರಿಸಿದ್ದಾರೆ. ವಿಶೇಷ ಸಂದರ್ಭದಲ್ಲಿ ಮೈಸೂರು ಅರಮನೆಯಂತೆ ಕಂಗೊಳಿಸಲು ವಿಶೇಷವಾದ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಎನ್.ಆರ್.ನಟರಾಜ್