Advertisement

ಮನಮೋಹಕ ರಂಗಸಿರಿ ವಿದ್ಯಾರ್ಥಿಗಳ ಯಕ್ಷಗಾನ 

06:00 AM Sep 21, 2018 | Team Udayavani |

ಕಾಸರಗೋಡಿನ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬದಿಯಡ್ಕ ರಂಗಸಿರಿ ವೇದಿಕೆಯ ವಿದ್ಯಾರ್ಥಿಗಳಿಂದ “ಶಕಟಧೇನುಕ ವಧೆ- ಕಾಳಿಂಗ ಮರ್ದನ- ಶ್ರೀಹರಿ ದರ್ಶನ’ಬಯಲಾಟ ಪ್ರದರ್ಶನಗೊಂಡಿತು. 

Advertisement

    ಪಾತ್ರವರ್ಗದಲ್ಲಿ ಕಿಶನ್‌ ಅಗ್ಗಿತ್ತಾಯ ಮತ್ತು ಉಪಾಸನಾ ಕೃಷ್ಣನಾಗಿ, ಶಶಾಂಕ್‌ ಮೈರ್ಕಳ ವಿಜಯನಾಗಿ,ಆಕಾಶ್‌ ಶಕಟನಾಗಿ , ಶ್ರೀಜಾ ಧೇನುಕನಾಗಿ , ಮನೀಶ್‌ ವಾತಾಸುರನಾಗಿ, ಸಂದೇಶ್‌ ಪುಲಂಬಾಸುರನಾಗಿ ,ನಂದಕಿಶೋರ ಕಾಳಿಂಗನಾಗಿ , ಗರುಡನಾಗಿ ಅಭಿಜ್ಞಾ ಪಾತ್ರಗಳಿಗೆ ಜೀವ ತುಂಬಿದರು. 

    ಶ್ರೀಹರಿದರ್ಶನದಲ್ಲಿ ಗಂಧರ್ವನಾಗಿ ವಿದ್ಯಾ, ರಾಣಿಯಾಗಿ ಸುಪ್ರೀತಾ ಹಾಗೂ ಗಾಯತ್ರಿ, ಋಷಿಯಾಗಿ ಹರ್ಷ ಪ್ರಸಾದ್‌, ಇಂದ್ರದ್ಯುಮ್ನನಾಗಿ ರಾಕೇಶ್‌, ಅಗಸ್ತ್ಯ ಋಷಿಯಾಗಿ ಶ್ರೀಹರಿ, ಗಜೇಂದ್ರನಾಗಿ ಶ್ರೀಷ ಪಂಜಿತ್ತಡ್ಕ, ಮಕರನಾಗಿ ರಾಜೇಂದ್ರ ವಾಂತಿಚ್ಚಾಲು ಪಾತ್ರಗಳಿಗೆ ತಕ್ಕಂತೆ ಅಭಿನಯಿಸಿದರು.ಭಾಗವತರಾದ ರಮೇಶ್‌ ಭಟ್‌ ಪುತ್ತೂರು ಮತ್ತು ವಾಸುದೇವ ಕಲ್ಲೂರಾಯ ಸಿರಿಕಂಠದಿಂದ ಸಮ್ಮೊಹನಗೊಳಿಸಿದರು. ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ, ಚೆಂಡೆಯಲ್ಲಿ ಲಕ್ಷ್ಮೀನಾರಾಯಣ ಅಡೂರು, ಚಕ್ರತಾಳದಲ್ಲಿ ಉದನೇಶ್‌ ಕುಂಬ್ಲೆ ಸಾಥ್‌ ನೀಡಿದರು. ಯಕ್ಷಗಾನ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರ ನಿರ್ದೇಶನದಲ್ಲಿ ಸೊಗಸಾಗಿ ಕಾರ್ಯಕ್ರಮ ಮೂಡಿಬಂತು. 

 ಪ್ರಸಾದ್‌ ಮೈರ್ಕಳ 

Advertisement

Udayavani is now on Telegram. Click here to join our channel and stay updated with the latest news.

Next