Advertisement

ಕೇಂದ್ರ ಸರಕಾರದಿಂದ ಜಿಲೆಗೆ ಗರಿಷ್ಠ ಅನುದಾನ: ನಳಿನ್‌

02:40 PM Mar 17, 2019 | Team Udayavani |

ಬಂಟ್ವಾಳ: ಕೇಂದ್ರ ಸರಕಾರ ದಿಂದ ಜಿಲ್ಲೆಗೆ ಗರಿಷ್ಠ ಅನುದಾನ ಬಂದಿದೆ. ಪ್ರತಿ ಪಂ. ರಸ್ತೆ ಅಭಿವೃದ್ಧಿಗೆ 60 ಕೋ. ರೂ. ಒದಗಿಸಲಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ಪ್ರತೀ ದಿನ 35 ಕಿ.ಮೀ. ರಸ್ತೆ ನಿರ್ಮಾಣ ಆಗುತ್ತಿದೆ. ಮೋದಿ ಸರಕಾರದಿಂದ ಬಡವರಿಗಾಗಿ 12 ಕೋಟಿ ಶೌಚಾಲಯ ನಿರ್ಮಾಣ ಆಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಮಾ. 3ರಂದು ಮಂಗಳೂರು ವಿಧಾನಸಭಾ ಕ್ಷೇತ್ರ ಪುದು ಗ್ರಾಮ ಪುಂಚಮೆ ಗಾರ್ಡನ್‌ ವಠಾರದಲ್ಲಿ ಕಾರ್ಯಾಲಯ ಉದ್ಘಾಟಿಸಿ, ಮೋದಿ ಗಾಗಿ ವಿಜಯ ಸಂಕಲ್ಪ ಯಾತ್ರೆ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
 
ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಬೋಳಿಯಾರ್‌ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಬಗ್ಗೆ ಮಾತನಾಡುತ್ತಾರೆ. ಆದರೆ ಕ್ಷೇತ್ರದಲ್ಲಿ ಯಾವ ಸೌಲಭ್ಯಗಳು ಇವೆ ಎಂದು ಪ್ರಶ್ನಿಸಿದರು. ಮುಂದಿನ ಸಂಸದರಾಗಿ ನಳಿನ್‌ ಕುಮಾರ್‌ ಕಟೀಲು ಗರಿಷ್ಠ ಮತಗಳಿಂದ ಆಯ್ಕೆಯಾಗಲು ಕಾರ್ಯಕರ್ತರು ದುಡಿಯ ಬೇಕು ಎಂದು ಕರೆ ನೀಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣ ಪ್ರಭಾರಿ ರಾಧಾಕೃಷ್ಣ ಬೂಡಿ ಯರ್‌ ಪ್ರಸ್ತಾವಿಸಿದರು. ಲೋಕಸಭಾ ಚುನಾವಣ ಸಂಚಾಲಕ ಚಂದ್ರಶೇಖರ್‌ ಉಚ್ಚಿಲ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ತುಂಬೆ ತಾ.ಪಂ. ಸದಸ್ಯ ಗಣೇಶ್‌ ಸುವರ್ಣ, ಜಿ.ಪಂ. ಸದಸ್ಯ
ರವೀಂದ್ರ ಕಂಬಳಿ, ತುಂಬೆ ಗ್ರಾ.ಪಂ. ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಉಪಾಧ್ಯಕ್ಷ ಪ್ರವೀಣ್‌ ಬಿ. ತುಂಬೆ, ಮೇರ ಮಜಲು ಗ್ರಾ.ಪಂ. ಉಪಾಧ್ಯಕ್ಷ ಸತೀಶ್‌ ನಾಯ್ಗ,  ಸಚಿವ ಯು.ಟಿ. ಖಾದರ್‌ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಬಗ್ಗೆ ಮಾತನಾಡುತ್ತಾರೆ. ಆದರೆ ಕ್ಷೇತ್ರದಲ್ಲಿ ಯಾವ ಸೌಲಭ್ಯಗಳು ಇವೆ ಎಂದು ಪ್ರಶ್ನಿಸಿದರು. ಮುಂದಿನ ಸಂಸದರಾಗಿ ನಳಿನ್‌ ಕುಮಾರ್‌ ಕಟೀಲು ಗರಿಷ್ಠ ಮತಗಳಿಂದ ಆಯ್ಕೆಯಾಗಲು ಕಾರ್ಯಕರ್ತರು ದುಡಿಯ ಬೇಕು ಎಂದು ಕರೆ ನೀಡಿದರು.
 
ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣ ಪ್ರಭಾರಿ ರಾಧಾಕೃಷ್ಣ ಬೂಡಿ ಯರ್‌ ಪ್ರಸ್ತಾವಿಸಿದರು. ಲೋಕಸಭಾ ಚುನಾ ವಣ ಸಂಚಾಲಕ ಚಂದ್ರಶೇಖರ್‌ ಉಚ್ಚಿಲ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ತುಂಬೆ ತಾ.ಪಂ. ಸದಸ್ಯ ಗಣೇಶ್‌ ಸುವರ್ಣ, ಜಿ.ಪಂ. ಸದಸ್ಯ
ರವೀಂದ್ರ ಕಂಬಳಿ, ತುಂಬೆ ಗ್ರಾ.ಪಂ. ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಉಪಾಧ್ಯಕ್ಷ ಪ್ರವೀಣ್‌ ಬಿ. ತುಂಬೆ, ಮೇರ ಮಜಲು
ಗ್ರಾ.ಪಂ. ಉಪಾಧ್ಯಕ್ಷ ಸತೀಶ್‌ ನಾಯ್ಗ,  

ಪ್ರಮುಖರಾದ ಎಸ್‌ಸಿ ಮೋರ್ಚಾ ಅಧ್ಯಕ್ಷ ವಿಟ್ಠಲ ಸಾಲ್ಯಾನ್‌, ಬಿಜೆಪಿ ಮುಖಂಡ ನಿತಿನ್‌ ಕುಮಾರ್‌, ಪ್ರವೀಣ್‌ ಶೆಟ್ಟಿ ಸುಜೀರು, ಪುದು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮನೋಹರ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಕೊಟ್ಟಿಂಜ, ಮನೋಹರ ತುಂಬೆ, ಧೀರಜ್‌ ಮಾರಿಪಳ್ಳ, ಪ್ರಮೋದ್‌ ಸುಜೀರ್‌ ಮತ್ತಿತರರಿದ್ದರು.

ಹಿರಿಯ ಕಾರ್ಯಕರ್ತರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ನೆತ್ತರಕೆರೆ ಪೊಳಲಿ ದ್ವಾರದಿಂದ ಮೆರವಣಿಗೆ ಜರಗಿತು. ಮಂಡಲ ಕಾರ್ಯದರ್ಶಿ ಮನೋಜ್‌ ಆಚಾರ್ಯ ನಾಣ್ಯ ಸ್ವಾಗತಿಸಿ, ಜಯಶ್ರೀ ಕರ್ಕೇರ, ವಂದಿಸಿದರು. ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

Advertisement

ಜನಸಾಮಾನ್ಯರಿಗೆ ವಿವಿಧ ಯೋಜನೆ ಜನಸಾಮಾನ್ಯರಿಗೆ ಉಜ್ವಲ ಅನಿಲ ಭಾಗ್ಯ, ದೀನದಯಾಳ್‌ ವಿದ್ಯುದೀಕರಣ, 2020ಕ್ಕೆ 2 ಕೋಟಿ ಮನೆ ನಿರ್ಮಾಣ ಯೋಜನೆ, ಉದ್ಯೋಗ ಸೃಷ್ಟಿಗಾಗಿ 136 ಸಾವಿರ ಕೋಟಿ ರೂ. ಮುದ್ರಾ ಸಾಲ ಯೋಜನೆ ನೀಡಲಾಗಿದೆ.
– ನಳಿನ್‌ ಕುಮಾರ್‌ ಕಟೀಲು, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next