Advertisement

ರೂಪಕ್‌ಕುಮಾರ್‌ ದತ್ತ ನೂತನ ಡಿಜಿಪಿ?

03:45 AM Jan 27, 2017 | |

ಬೆಂಗಳೂರು:ಕೇಂದ್ರ ಸೇವೆಯಲ್ಲಿರುವ ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿ ರೂಪಕ್‌ಕುಮಾರ್‌ ದತ್ತಾ  ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ)ರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

Advertisement

ರೂಪಕ್‌ ಕುಮಾರ್‌ ದತ್ತಾ ಆಯ್ಕೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸಕ್ತಿ ವಹಿಸಿದ್ದು, ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯ ಸೇವೆಗೆ ಕಳುಹಿಸಿ ಕೊಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾ ಓಂ ಪ್ರಕಾಶ್‌ ಅವರು ಇದೇ ತಿಂಗಳ ಜನವರಿ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಓಂ ಪ್ರಕಾಶ್‌ ಅವರ ನಂತರ ಸ್ಥಾನದಲ್ಲಿ 1981ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ರೂಪಕ್‌ ಕುಮಾರ್‌ ದತ್ತಾ ಅವರು ಮಂಚೂಣಿಯಲ್ಲಿದ್ದಾರೆ.

ಡಿಜಿಪಿ ಹುದ್ದೆಯ ರೇಸ್‌ನಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಗಳಾದ ನೀಲಮಣಿ ಎನ್‌.ರಾಜು, ಸಿ.ಎಚ್‌.ಕಿಶೋರ್‌ಚಂದ್ರ ಹಾಗೂ ಎಂ.ಎನ್‌.ರೆಡ್ಡಿ ಅವರು ಹೆಸರು ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next