Advertisement

ಬೇಸಿಗೆಯಲ್ಲಿ ಜಾನುವಾರುಗಳ ದಾಹ ತೀರಿಸಿ

04:09 PM Mar 13, 2021 | Team Udayavani |

ರೋಣ: ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಆಡಳಿತಚುಕ್ಕಾಣಿ ಹಿಡಿದಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂಪಿಡಿಒಗಳು ತಮ್ಮ ವ್ಯಾಪ್ತಿಯ ಹಳ್ಳಿಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕಿದೆ.

Advertisement

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಒಟ್ಟು 34000 ಎಮ್ಮಿ, 28000 ಆಕಳು(ಹಸು), 80000 ಕುರಿ, 60000 ಆಡು ಹೀಗೆ ಒಟ್ಟು 2 ಲಕ್ಷಕ್ಕೂ ಅಧಿ ಕ ಜಾನುವಾರುಗಳಿವೆ.ಇವು ಮನೆಯಲ್ಲಿದ್ದಾಗ ಮಾಲಿಕರು ನೀರಿನಲ್ಲಿ ಕುಡಿಸುತ್ತಾರೆ. ಆದರೆ ಮೇಯಲು  ಹೊಲಗಳಿಗೆ ತೆರಳಿದಾಗ ಅಲ್ಲಿ ಯಾವುದೇ ದೊಡ್ಡ ಪ್ರಮಾಣದ ಕೆರೆ-ಕಟ್ಟೆ-ತೊಟ್ಟಿಗಳಿಲ್ಲದಕಾರಣ ದನಕರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಕುರಿಗಾಹಿಗಳು, ದನ ಕಾಯುವವರ ಪಾಡು ಅಷ್ಟಿಷ್ಟಲ್ಲ. ಈ ನಿಟ್ಟಿನಲ್ಲಿ ಗ್ರಾಪಂ ಆಡಳಿತ, ಜನಪ್ರತಿನಿಧಿ ಗಳು ಹೊಂಡ-ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ.

ಕೆರೆ-ಚೆಕ್‌ ಡ್ಯಾಂ ನಿರ್ಮಿಸಿ: ನರೇಗಾ ಯೋಜನೆಯಡಿ ಜಾನುವಾರುಗಳಿಗೆನೀರಿನ ತೊಟ್ಟಿ ನಿರ್ಮಿಸಿ ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಜನತೆಯ ಆಶಯವಾಗಿದೆ. ಹೆಚ್ಚು ಹೆಚ್ಚು ಕೆರೆ,ಹಳ್ಳಗಳ ಬಳಿ ಚೆಕ್‌ಡ್ಯಾಂ ನಿರ್ಮಿಸುವುದರಿಂದ ದನಕರುಗಳು, ಕುರಿ-ಮೇಕೆಗಳ ನೀರಿನ ಸಮಸ್ಯೆ ಬಗೆಹರಿಸಬಹುದು. ಜತೆಗೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಬಹುದು.

ಬ್ಯಾಸಗಿ ಶುರು ಆಗೇತಿ. ಕುಡಿಯುವ ನೀರಿನ  ಸಮಸ್ಯೆ ಆಗೈತಿ. ಇದಕ್ಕ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹೆಚ್ಚು ಕಾಳಜಿ ವಹಿಸಿ ಹಳ್ಳಿಗಳಲ್ಲಿಜನರು ಹಾಗೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗುಡ್ಡಕ್ಕ ಬೆಂಕಿ ಹತ್ತಿದಾಗಬಾವಿ ತೋಡುವುದಕ್ಕಿಂತ ಮೊದಲ ತಯಾರಿ ಮಾಡಿಕೊಂಡಿದ್ದರ ಬಹಳ ಚೋಲೋ ಆಗ್ತದೆ ನೋಡ್ರಿ. –ಹನಮಂತಪ್ಪ ಕುರಿ, ಕುರಿಗಾಹಿ

ನೀರಿನ ಮೂಲ ಇರುವಲ್ಲಿ ತಕ್ಷಣವೇ ನೀರಿನ ತೊಟ್ಟಿಗಳನ್ನು ನಿರ್ಮಿಸಲು ರೋಣ-ಗಜೇಂದ್ರಗಡತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅಲದೇ ಈಗಾಗಲೇ ಕೆಲವು ಗ್ರಾಪಂಗಳಲ್ಲಿನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಿದ್ದಾರೆ. ಉಳಿದಗ್ರಾಪಂಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. – ಸಂತೋಷ ಪಾಟೀಲ, ತಾಪಂ ಇಒ

Advertisement

 

-ಯಚ್ಚರಗೌಡ ಗೋವಿಂದಗೌಡ

Advertisement

Udayavani is now on Telegram. Click here to join our channel and stay updated with the latest news.

Next