Advertisement
ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ವೀರರಾಣಿ ಅಬ್ಬಕ್ಕಳನ್ನು ಚಾರಿತ್ರಿಕವಾಗಿ ಗುರುತಿಸಲು ಹಲವು ಠರಾವುಗಳನ್ನು ಮಂಡಿಸಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕನ ಹೆಸರಿಡುವುದು. ಉಲ್ಲಾಳದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಯನ್ನು ನಗರದ ಮುಖ್ಯ ಸ್ಥಳದಲ್ಲಿ ಸ್ಥಾಪನೆ ಮಾಡುವುದು. ಸರಕಾರ ಲಕ್ಕುಂಡಿ ಉತ್ಸವ ಹಾಗೂ ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಅಬ್ಬಕ್ಕ ರಾಣಿ ಉತ್ಸವವನ್ನು ಆಚರಿಸುವುದು. ಅತ್ತಿಮಬ್ಬೆ ಪ್ರಶಸ್ತಿ ಮಾದರಿಯಲ್ಲಿ ಪ್ರತಿ ವರ್ಷರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವತಿಯಿಂದ ನೀಡುವುದು. ಮಂಗಳೂರು ರೈಲ್ವೇ ನಿಲ್ದಾಣದಿಂದ ಹೊರಡುವ ಯಾವುದಾದರೂ ರೈಲಿಗೆ ವೀರರಾಣಿ ಅಬ್ಬಕ್ಕನ ಹೆಸರಿಡುವುದು. ಮಂಗಳೂರು ವಿಶ್ವವಿದ್ಯಾಲಯಕ್ಕೆ ವೀರರಾಣಿ ಅಬ್ಬಕ್ಕರಾಣಿ ಹೆಸರಿಡುವುದು, ಪಠ್ಯ ಪುಸ್ತಕದಲ್ಲಿ ವೀರರಾಣಿ ಅಬ್ಬಕ್ಕಳ ಚರಿತ್ರೆಯನ್ನು ಸೇರಿಸುವುದು ಇನ್ನಿತರ ವಿಷಯಗಳನ್ನು ತಿಳಿಸಿದರು.
Related Articles
Advertisement
ಖ್ಯಾತಿ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಪ್ರೊ| ಎ. ವಿ. ನಾವಡ ಅವರು ಮಾತನಾಡಿ, ಕರಾವಳಿಯಲ್ಲಿ ಜೈನ ಅರಸು ಮನೆತನದ ಪ್ರಭಾವವೇ ಹೆಚ್ಚಾಗಿತ್ತು. 12 ರಾಣಿಯಂದಿರು ಕರಾವಳಿಯಲ್ಲಿ ರಾಜ್ಯಭಾರ ಮಾಡಿದ್ದರು. ಹಾಗಾಗಿ ಅಬ್ಬಕ್ಕನ ಅಧ್ಯಯನದ ಜೊತೆಗೆ ಕರಾವಳಿಯನ್ನು ಆಳಿದ ರಾಣಿಯಂದಿರ ಅಧ್ಯಯನವನ್ನು ನಡೆಸಬೇಕು. ಇದೇ ಸಂದರ್ಭದಲ್ಲಿ ಅಬ್ಬಕ್ಕ ಉತ್ಸವವು ಅಕಾಡೆಮಿಯಾಗಿ ನಡೆಯಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ಸ್ವಾಗತಿಸಿದರು. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ಉಳ್ಳಾಲದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಾಣಿ ವಿ. ಆಳ್ವ ಅವರು ವಂದಿಸಿದರು.
ಇದೇ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ವತಿಯಿಂದ ಈ ಬಾರಿ ಐಎಎಸ್‌ನಲ್ಲಿ ಪ್ರಥಮ ರ್‍ಯಾಂಕ್ ಪಡೆದ ಕು| ನಂದಿನಿ ಕೆ. ಆರ್. ಹಾಗೂ ದೆಹಲಿ ಕರ್ನಾಟಕದ ಸಂಘದಲ್ಲಿ ಸಕ್ರಿಯವಾಗಿ ಸಾಂಸ್ಕೃತಿಕ, ರಂಗ ಸಂಘಟನೆಯಲ್ಲಿ ತೊಡಗಿಸಿಕೊಂಡ ನೂರಕ್ಕೂ ಹೆಚ್ಚು ಮಹಿಳೆಯರನ್ನು ಅನಿತಾ ಸುರೇಂದ್ರ ಕುಮಾರ್, ಸುರೇಂದ್ರ ಕುಮಾರ್, ಉಳ್ಳಾಲ ನಗರ ಸಭೆಯ ಆಯುಕ್ತರಾದ ವಾಣಿ ವಿ. ಆಳ್ವ ಅವರು ಗೌರವಿಸಿದರು.
ಸಮಾರೋಪ ಸಮಾರಂಭದ ನಂತರ ಮಂಗಳೂರಿನ ನೃತ್ಯಲಹರಿ, ಬನ್ನಂಜೆ ಮಹಿಳಾ ಕಲಾ ಬಳಗ ಮತ್ತು ಬೀದರಿನ ನೂಪುರ ನೃತ್ಯ ಅಕಾಡೆಮಿಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.