Advertisement

ರೈತರಿಗೆ 10 ಸಾವಿರ ರೂ. ಪ್ಯಾಕೇಜ್‌ ನೀಡಿ

06:59 PM Jun 17, 2021 | Team Udayavani |

ಮೈಸೂರು: ಕೊರೊನಾ ವೇಳೆ ರೈತರಿಗೆ ಆಗಿರುವನಷ್ಟವನ್ನು ಅಂದಾಜಿಸಲುಸಮಿತಿ ರಚಿಸುವಂತೆಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ರಾಜ್ಯ ರೈತ ಸಂಘಮನವಿ ಸಲ್ಲಿಸಿತು.

Advertisement

ಜಿಪಂ ಸಭಾಂಗಣದಲ್ಲಿ ಕೃಷಿ ಸಚಿವರನ್ನು ಭೇಟಿಮಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರನಾಗೇಂದ್ರ, ಕೃಷಿ ಪರಿಕರಗಳ ಮೇಲೆ ವಿಧಿಸಿರುವಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಟಿ ಸಂಪೂರ್ಣ ಕೈಬಿಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನುಎಲ್ಲ ಕೃಷಿ ಚಟುವಟಕೆಗಳಿಗೂ ವಿಸ್ತರಿಸಬೇಕು. ರೈತಕುಟುಂಬದ ಇಬ್ಬರನ್ನು ಈ ವ್ಯಾಪ್ತಿಯೊಳಗೆಸೇರಿಸಬೇಕು. ರೈತ ಕುಟುಂಬಗಳಿಗೆ ಕನಿಷ್ಠ 10ಸಾವಿರ ರೂ. ಪ್ಯಾಕೇಜ್‌ ಘೋಷಿಸಬೇಕು ಎಂದುಕೋರಿದರು

ಖರೀದಿ ಕೇಂದ್ರದ ಮೂಲಕ ಖರೀದಿಸಲಾದಭತ್ತ ಮತ್ತು ರಾಗಿ ಬಾಕಿಯನ್ನು ಪಾವತಿಸಬೇಕು.ಕಬ್ಬಿನ ಕಾರ್ಖಾನೆಗಳು ರೈತರಿಗೆ ನೀಡಬೇಕಾದಬಾಕಿಯನ್ನು ಪಾವತಿಸÛಬೇಕು. ಬಿಮಾ ಯೋಜನೆ ಪರಿಹಾರದ ಬಾಕಿ ಮತ್ತು ಬರ ಹಾಗೂಅತಿವೃಷ್ಟಿಯ ಪರಿಹಾರದ ಬಾಕಿಯನ್ನು ರೈತರಖಾತೆಗೆ ಜಮೆ ಮಾಡಬೇಕು. ಭತ್ತ ಖರೀದಿ ಕೇಂದ್ರತೆರೆಯಬೇಕು ಎಂದರು.

ಮನವಿ ಸ್ವೀಕರಿಸಿದಸಚಿವರು, ಈ ಸಂಬಂಧ ಸಿಎಂ ಜತೆ ಚರ್ಚಿಸಿಬೇಡಿಕೆ ಈಡೇರಿಸುವ ಪ್ರಯತ್ನ ನಡೆಸುವುದಾಗಿಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹೊಸುರು ಕುಮಾರ್‌,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆಬಸವರಾಜು, ತಾ.ಅಧ್ಯಕ್ಷ ಪಿ.ಮರಂಕಯ್ಯ, ರೈತಮುಖಂಡ ಎನ್‌.ಪ್ರಸನ್ನಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next