Advertisement

ರೈತನಿಗೆ ನೀರು, ವಿದ್ಯುತ್‌ ನೀಡಿ

09:48 PM Jan 20, 2020 | Lakshmi GovindaRaj |

ಶಿರಾ: ಜನರಿಗೆ ಅನ್ನ ನೀಡುವ ಅನ್ನದಾತನಿಗೆ ಬೇಕಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವಂತ ಕಿಸಾನ್‌ ಸಮ್ಮಾನ್‌ ಯೋಜನೆ 2 ಸಾವಿರ ರೂ., ಕಳಪೆ ಬೀಜ, ರಸಗೊಬ್ಬರ, ಸಬ್ಸಿಡಿ ರೂಪದಲ್ಲಿ ನೀಡುವಂತ ಕೃಷಿ ಚಟುವಟಿಕೆ ಸಲಕರಣೆಗಳಲ್ಲ. ರೈತನಿಗೆ ಶಾಶ್ವತವಾಗಿ ಆರ್ಥಿಕ ಭದ್ರತೆ ನೀಡುವಂತ ನೀರು ಮತ್ತು ವಿದ್ಯುತ್‌ ಸಮರ್ಪಕವಾಗಿ ನೀಡಬೇಕು ಎಂದು ಮಾಜಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಹೇಳಿದರು.

Advertisement

ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಸೋಮವಾರ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಮೇಳ ಹಾಗೂ ಜಿಲ್ಲೆಯ 10 ತಾಲೂಕಿನ ರೈತರ ಸಮಾವೇಶ, ಸಮಗ್ರ ಕೃಷಿ ಪದ್ಧತಿಗಳು ಹಾಗೂ ನೈಸರ್ಗಿಕ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲಾ ಆಧುನೀಕರಣಕ್ಕೆ ಮಾಡಿ: ಉತ್ತಮ ಮಳೆಯಾಗಿ ಹೇಮಾವತಿ ಜಲಾಶಯ ಭರ್ತಿಯಾಗಿ 6 ತಿಂಗಳು ಜಿಲ್ಲೆಯ ಕೆರೆಗಳಿಗೆ ನೀರು ಹರಿದಿದ್ದರೂ, ಓಟ್‌ ಬ್ಯಾಂಕ್‌ ಸ್ವಾರ್ಥ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿನ ಕೆರೆಗಳು ತುಂಬಿಸುವಲ್ಲಿ ವಿಫ‌ಲವಾಗಿದ್ದೇವೆ. ಹೇಮಾವತಿ ಕಾಲುವೆ ಆಗಲೀಕರಣವಾಗದ ಕಾರಣ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಪಾಲಾಗಿದೆ. ತುಮಕೂರು ಜಿಲ್ಲೆಯ ಸಮಗ್ರ ಆಭಿವೃದ್ಧಿ ದೃಷ್ಟಿಯಿಂದ 115 ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಸರ್ಕಾರ ಹೇಮಾವತಿ ನಾಲಾ ಆಧುನೀಕರಣಕ್ಕೆ ಕಾಳಜಿ ವಹಿಸುವ ಅಗತ್ಯವಿದೆ ಎಂದರು.

ಸಮಗ್ರ ಕೃಷಿ ಪದ್ಧತಿಗಳು ಹಾಗೂ ನೈಸರ್ಗಿಕ ಕೃಷಿ ಬಗ್ಗೆ ಜಿಕೆ ವಿಕೆ ಕೃಷಿ ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಅಂದಾನಿಗೌಡ ಉಪನ್ಯಾಸ ನೀಡಿದರು. ಮಧುಗಿರಿ ವಿಭಾಗ ಉಪ ಕೃಷಿ ನಿರ್ದೇಶಕ ಟಿ.ಎಸ್‌.ಅಶೋಕ್‌, ಸಹಾಯಕ ಕೃಷಿ ನಿರ್ದೇಶಕರಾದ ಆರ್‌.ರಂಗನಾಥ್‌, ಡಾ.ಎಚ್‌.ನಾಗರಾಜು, ಕೃಷಿ ಅಧಿಕಾರಿಗಳಾದ ಎಂ.ರಾಹುಲ್‌, ಸುರೇಶ್‌ ನಲ್ಲೂರು, ಮಂಜುನಾಥ್‌, ಗೋವಿಂದಪ್ಪ ಸೇರಿ ಜಿಲ್ಲೆ 10 ತಾಲೂಕುಗಳ ನೂರಾರು ರೈತರು ಉಪಸ್ಥಿತರಿದ್ದರು.

ದುಡ್ಡು ಗಳಿಸುವುದೇ ಕೃಷಿಯಲ್ಲ – ಸ್ವಾಮೀಜಿ: ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ದುಡ್ಡು ಗಳಿಸುವುದೇ ಕೃಷಿಯಾಗಬಾರದು. ವ್ಯವಸಾಯ ಮಾಡುವಂತ ಇಚ್ಛಾಶಕ್ತಿ ಇದ್ದರೆ ನೆಮ್ಮದಿ ಬದುಕು ಸಿಗುತ್ತದೆ. ರೈತ ಕೃಷಿಗಾಗಿ ಸಾಲ ಮಾಡದಂತೆ ಸರ್ಕಾರ ಯೋಜನೆ ರೂಪಿಸಿ ದುಡಿಯುವ ಕೈಗೆ ಕೆಲಸ ಕೊಟ್ಟು, ಬೆಳೆದಂತ ಬೆಳೆಗೆ ಸೊಕ್ತ ಬೆಲೆ ಹಾಗೂ ಮಾರುಕಟ್ಟೆ ನೀಡಿದರೆ ರೈತನ ಆರ್ಥಿಕ ಪ್ರಗತಿ ಸಾಧ್ಯ. ಎತ್ತಿನ ಹೊಳೆ, ಅಪ್ಪರ್‌ ಭದ್ರದಂತ ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಿದರೆ ಅನ್ನದಾತನ ಬದುಕಿನಲ್ಲಿ ಭರವಸೆ ಮೂಡಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next