Advertisement
ಜಿಲ್ಲಾಡಳಿತವೇ ಜವಾಬ್ದಾರಿ: ಕೋಟಟೋಲ್ ಸಂಗ್ರಹ ವಿವಾದ ದಿನದಿಂದ ದಿನಕ್ಕೆ ಗೊಂದಲದ ಗೂಡಾಗುತ್ತಿರಲು ಜಿಲ್ಲಾಧಿಕಾರಿಯ ಆತುರದ ನಿರ್ಧಾರವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ನಿಷೇಧಾಜ್ಞೆ ಜಾರಿ ಮಾಡುವ ಆವಶ್ಯಕತೆ ಏನಿತ್ತು? ಉಸ್ತುವಾರಿ ಸಚಿವರು ವರದಿ ನೀಡುವಂತೆ ಸೂಚನೆ ನೀಡಿದ್ದರೂ ವರದಿ ಸತ್ಯಾಸತ್ಯತೆ ಪರಿಶೀಲಿಸದೆ ಟೋಲ್ ಸಂಗ್ರಹಕ್ಕೆ ಮುಂದಾದುದೇಕೆ? ಪಿಡಬ್ಲೂ éಡಿ ಸಚಿವ ಮಹಾದೇವಪ್ಪ ಅವರು ಫೆ. 13ರಂದು ಬೆಂಗಳೂರಿನಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳುವ ಮುನ್ನ ಜಿಲ್ಲಾಧಿಕಾರಿಗಳು ಏಕೆ ಆದೇಶ ನೀಡಿದ್ದಾರೆ? ಶಾಂತಿ ಕದಡಿದರೆ ಜಿಲ್ಲಾಡಳಿತವೇ ಜವಾಬ್ದಾರಿ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.