Advertisement

ಮಳೆಹಾನಿ ಪರಿಹಾರ ಶೀಘ್ರ ಕೊಡಿ

12:28 PM Jun 13, 2018 | Team Udayavani |

ಮೂಡಿಗೆರೆ: ಮಳೆಯಿಂದ ಹಾನಿಗೊಳಗಾದ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಶೀಘ್ರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

ಕಳೆದ ಇಪ್ಪತ್ತು ವರ್ಷಗಳ ನಂತರ ಈ ಬಾರಿ ಮುಂಗಾರು ದಾಖಲೆ ಪ್ರಮಾಣದಲ್ಲಿ ಸುರಿಯುತ್ತಿದ್ದು, ಅತಿವೃಷ್ಟಿ
ಪೀಡಿತ ಪ್ರದೇಶಗಳಾದ ಹಂತೂರು, ಕಣಚೂರು, ಉಗ್ಗೇಹಳ್ಳಿ ದೇವವೃಂದ, ಗೌಡಹಳ್ಳಿ, ಭೈರಾಪುರ, ಬೆಟ್ಟದಮನೆ
ಮುಂತಾದ ಭಾಗಗಳಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು.

ಉಗ್ಗೇಹಳ್ಳಿ ತಡೆಗೋಡೆ ಸಮೀಪ ಮಳೆನೀರು ಬಂದಿದ್ದು, ಉಗ್ಗೇಹಳ್ಳಿ ಕಾಲೋನಿ ಮರು ವಸತಿ ಕಲ್ಪಿಸಿಕೊಡಲು ಶೀಘ್ರ ಕ್ರಮ ಕೈಗೊಳ್ಳಬೇಕಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಹೇಮಾವತಿ ನದಿ ಪಾತ್ರ ಉಕ್ಕಿ ಹರಿಯುತ್ತಿದ್ದು, ಭತ್ತ, ಕಾಫಿ, ಕಾಳುಮೆಣಸು, ಮತ್ತು ತರಕಾರಿ ನಾಶವಾಗಿವೆ.ಅಲ್ಲದೆ ಗ್ರಾಮದಲ್ಲಿ ವಿದ್ಯುತ್‌
ಸಂಪರ್ಕ ಸಂಪೂರ್ಣ ಕಡಿತಗೊಂಡಿವೆ, ರಸ್ತೆಗಳು ಚರಂಡಿಗಳಾಗಿವೆ. ಸರ್ಕಾರಕ್ಕೆ ಕೂಡಲೇ ಅತಿವೃಷ್ಟಿ ಪರಿಹಾರ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

ನಂತರ ಅಂಗಡಿ ದೇವಸ್ಥಾನಕ್ಕೆ ತೆರಳಿ ಮಳೆ ಹನಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸುನೀಲ್‌ ನಿಡಗೂಡು, ರಘು ಜನ್ನಾಪುರ, ವಿನೋದ್‌ ಕಣಚೂರು, ಸಂದರ್ಶ್‌, ಚಂದ್ರು ಉಲ್ಲೇಮನೆ ಮತ್ತಿತರರು ಇದ್ದರು.

ದಾಖಲೆ ಮಳೆ: ದೇವವೃಂದ, ಕಣಚೂರು, ಗೌಡಹಳ್ಳಿ, ಊರುಬಗೆಯಲ್ಲಿ ಕಳೆದ 24 ಗಂಟೆಯಲ್ಲಿ 22 ಇಂಚಿಗೂ 
ಅಧಿಕ ಮಳೆಯಾಗಿದೆ. ಹೇಮಾವತಿ ಸೇರಿದಂತೆ ಈಚುವಳ್ಳಿ ಹಳ್ಳ, ಉಲಿಗೆ ಹಳ್ಳ ಸೇರಿದಂತೆ ಸಣ್ಣ ಪುಟ್ಟ ನದಿಗಳು ತುಂಬಿ ಹರಿಯುತ್ತಿದ್ದು, ಗದ್ದೆ ಬಯಲು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ.  ಮಳೆಯೊಂದಿಗೆ ಗುಡುಗು ಸಿಡಿಲು ಆರ್ಭಟಿಸಿದ್ದು ಇದರಿಂದ ನದಿ ಪಾತ್ರದ ಪಕ್ಕದ ಕೃಷಿ ಬೆಳೆಗಳು ಸೇರಿದಂತೆ ಮರಗಿಡಗಳನ್ನು ಕೊಚ್ಚಿಕೊಂಡು ಸಾಗುತ್ತಿದೆ. ಗುಡ್ಡ ಬೆಟ್ಟಗಳಿಂದ ಹರಿಯುವ ನೀರಿನ ರಭಸಕ್ಕೆ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ.

ಗೌಡಹಳ್ಳಿ ಸಮೀಪದ ಹೆಮ್ಮದಿ ಗ್ರಾಮದಲ್ಲಿ ನಾರಾಯಣ ಗೌಡ ಎಂಬುವವರ ಮನೆಗೋಡೆ ಕುಸಿದಿದೆ. ಮಳೆ ಸಂಪೂರ್ಣ ನಿಂತ ಮೇಲೆ ಅಂದಾಜು ದೊರಕಲಿದ್ದು, ಒಟ್ಟಾರೆ 2 ದಶಕಗಳ ನಂತರ ಮಳೆ ತನ್ನ ವೈಭವವನ್ನು ಮೆರೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next