Advertisement

ಮಾತೃಭಾಷೆ ಜತೆ ಇತರೆ ಭಾಷೆಗೂ ಆದ್ಯತೆ ನೀಡಿ: ಆರ್‌.ಬಿ.ತಿಮ್ಮಾಪೂರ

05:43 PM Aug 20, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ನನಗೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಸರಳ ಮತ್ತು ಸ್ಪಷ್ಟವಾಗಿ ಮಾತನಾಡಲು ಮತ್ತು ಬರೆಯಲು ಬಾರದೆ
ಇದ್ದುದರಿಂದ ನಾನು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಕಾರಣ ನಾನು ಶಿಕ್ಷಣ ಪಡೆಯುವಂತ ಸಂದರ್ಭದಲ್ಲಿ
ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ, ಈ ಭಾಷೆಗಳಲ್ಲಿ ಪರಿಣತಿ ಹೊಂದಬಹುದಾಗಿತ್ತು. ಈ ತೊಂದರೆಯಿಂದ ತಾವುಗಳು ಮುಕ್ತ
ರಾಗಬೇಕಾದರೆ ಇಂಗ್ಲಿಷ್‌ ಮತ್ತು ಹಿಂದಿ ಕಲಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

Advertisement

ನಗರದ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಹಳೆಯ (ಹಿರಿಯ) ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಘಗಳ ಪ್ರಸಕ್ತ ವಾರ್ಷಿಕ ಸಮಾವೇಶ 2023-24ರ ವೃತ್ತಿಪರ-ಮಾರ್ಗದರ್ಶನ ಹಾಗೂ ಸ್ಪಂದನ-ಪ್ರೇರಣ-ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನೊಬ್ಬ ಕಬಡ್ಡಿ ಕ್ರೀಡಾ ಪಟುವಾಗಿದ್ದರಿಂದ ಓದಿನ ಕಡೆಗೆ ಹೆಚ್ಚು ಗಮನ ಹರಿಸದೆ ಕುಸ್ತಿ ಕ್ರೀಡೆಗೆ ಪ್ರಥಮ ಆದ್ಯತೆ ನೀಡಿದ್ದೆ. 1989ರಲ್ಲಿ ನಾನು ಪ್ರಥಮ ಭಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿ ಸಿದಾಗ ತಾಲೂಕಿನಾದ್ಯಂತ ಕ್ರೀಡಾಪಟುಗಳು ನನ್ನ ಪರ ಪ್ರಚಾರ ಮಾಡಿ ಲೋಕಸಭಾ ಅಭ್ಯರ್ಥಿ ದಿ.ಎಸ್‌.ಟಿ.ಪಾಟೀಲ ಅವರಿಗಿಂತ ಹೆಚ್ಚಿನ ಮತ ಪಡೆದು ಕೊಂಡು ನಾನು ಪ್ರಥಮ ಭಾರಿಗೆ ಶಾಸಕನಾಗಿ ಆಯ್ಕೆಯಾದೆ ಎಂದರು.

ನಾನು ಶಾಸಕ, ಸಚಿವನಾಗಲು ಬಿವಿವಿ ಸಂಘ ಮತ್ತು ಎಸ್‌.ಆರ್‌.ಕಂಠಿ ಕಾಲೇಜಿನ ಗುರುಗಳನ್ನು ಮರೆಯುವುದಿಲ್ಲ. ಮಹಾವಿದ್ಯಾಲಯಕ್ಕೆ ಹಾಗೂ ಸಂಘಕ್ಕೆ ನಾನು ಚಿರಋಣಿಯಾಗಿರುವೆ ಎಂದರು. ಕಂಠಿ ಕಾಲೇಜಿನ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಹಾಗೂ ಹಳೆಯ ವಿದ್ಯಾರ್ಥಿ, ಕೆಪಿಎಸ್‌ಸಿ ಸದಸ್ಯ ಡಾ| ಎಮ್‌.ಎಸ್‌.ಹೆಗ್ಗಣ್ಣವರ, ಕಾಲೇಜಿನ ಹಳೆಯ ವಿದ್ಯಾರ್ಥಿನಿ ಆಶಾ ಜಗದೀಶ ಗುಡಗುಂಟಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಪದವಿ ಶಿಕ್ಷಣ ಪಡೆದುಕೊಳ್ಳಲು ಈ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಈ ಕಾಲೇಜಿನಲ್ಲಿಯೂ ದೊರೆಯಲಿ ಎಂಬ ಉದ್ದೇಶದಿಂದ ಸಂಘದ ಅಧ್ಯಕ್ಷ ಡಾ| ವೀರಣ್ಣ ಚರಂತಿಮಠ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ವ್ಯರ್ಥ ಕಾಲ ಕಳೆಯದೆ ಚೆನ್ನಾಗಿ ಓದಬೇಕೆಂದರು.

ಕಾಲೇಜಿನ ಹಳೆಯ ವಿದ್ಯಾರ್ಥಿ, ಯಡಹಳ್ಳಿ-ಇಂಗಳಗಿಯ ಅಡವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ
ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ  ದೇಣಿಗೆ ನೀಡಿದ ಹಳೆಯ ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಬಿವಿವಿ ಸಂಘದ ಕಾಲೇಜುಗಳ ಕಮಿಟಿ ಸದಸ್ಯ ರವೀಂದ್ರ ಸಾವಳಗಿಮಠ, ಪದನಿಮಿತ್ತ ಕಾರ್ಯದರ್ಶಿ ಡಾ| ಎಸ್‌.ಎನ್‌.ಗಾಂವಕರ, ನಿವೃತ್ತ ಪಾಚಾರ್ಯ ಪ್ರೊ.ಬಿ.ಆರ್‌.ಪಾಟೀಲ,
ಪ್ರಾಚಾರ್ಯ ಪ್ರೊ.ಎಂ.ವಿ.ಜಿಗಬಡ್ಡಿ, ಪಾಲಕರ ಸಂಘದ ಅಧ್ಯಕ್ಷ ಕಿರಣ ವ್ಹಿ. ಟಂಕಸಾಲಿ, ಪಾಲಕರ ಸಂಘದ ಅಧ್ಯಕ್ಷ ಕಿರಣ ವ್ಹಿ. ಟಂಕಸಾಲಿ, ಪಾಲಕರ ಹಾಗೂ ಹಳೆಯ ವಿದ್ಯಾರ್ಥಿಗಳ ಕಾಲೇಜು ಕಮಿಟಿಯ ಸಂಘಟನಾ ಕಾರ್ಯದರ್ಶಿ ಡಾ.ಎಂ.ಎಚ್‌. ಜೋಗಿ ಹಾಜರಿದ್ದರು.

Advertisement

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮಕೃಷ್ಣ ಟಿ.ಬುದ್ನಿ ಸ್ವಾಗತಿಸಿದರು, ಪಾಲಕರ ಹಾಗೂ ಹಳೆಯ ವಿದ್ಯಾರ್ಥಿಗಳ ಕಾಲೇಜು ಕಮಿಟಿ ಅಧ್ಯಕ್ಷ ವಿಶ್ವನಾಥ ಮುನವಳ್ಳಿ ಪರಿಚಯಿಸಿದರು. ನಿವೃತ್ತ ಪ್ರಾಧ್ಯಾಪಕ ಪಿ.ಬಿ.ಬಡಿಗೇರ ಪ್ರಾಸ್ತಾವಿಕವಾಗಿ
ಮಾತನಾಡಿದರು. ಪ್ರೊ| ಆರ್‌.ಆರ್‌. ಮಾಲಿಪಾಟೀಲ ನಿರೂಪಿಸಿದರು. ಪ್ರೊ| ಸತೀಶ ಸಾರವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next