Advertisement

ನಾರಾಯಣಗುರು ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿ

01:23 PM Jan 22, 2022 | Team Udayavani |

ಯಾದಗಿರಿ: ಬ್ರಹ್ಮಶ್ರೀ ನಾರಾಯಣಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ನಾರಾಯಣಗುರು ವಿಚಾರ ವೇದಿಕೆ ಯಾದಗಿರಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

Advertisement

ಇದೇ ವೇಳೆ ಮಾತನಾಡಿದ ಮುಖಂಡರು, ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಶಾಹಿ ವಿರುದ್ಧ ಸಿಡಿದೆದ್ದು ಸರ್ವಧರ್ಮ ಸಮಭಾವದ ನಿಲುವಿಗೆ ಅನುಗುಣವಾಗಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ದೇವಪ್ಪಗೌಡ ಗುತ್ತೇದಾರ ರಾಚನಳ್ಳಿ, ನಾಗರಾಜಗೌಡ ಮಾನಸಗಲ್‌, ಮಹೇಂದ್ರಕುಮಾರ ಅನಪೂರ, ಸೂರ್ಯಕಾಂತಗೌಡ ಕಟ್ಟಿಮನಿ, ರಾಘವೇಂದ್ರ ಸೈದಾಪುರ, ಶರಣು ಮಾಲಹಳ್ಳಿ, ಶಾಂತಗೌಡ, ಕೃಷ್ಣಯ್ಯ ಗುತ್ತೇದಾರ, ಪ್ರಕಾಶ ಬಳಿಚಕ್ರ, ರವಿಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next