ತೆಕ್ಕಟ್ಟೆ (ಕುಂಭಾಶಿ): ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಭಾರಿ, ವಿಧಾನ ಪರಿಷತ್‌ನ ವಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಫೆ. 25ರಂದು ಕುಂಭಾಶಿ ಆನೆಗುಡ್ಡೆ ವಿನಾಯಕ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರು ವಿಧಾನ ಪರಿಷತ್‌ನ ವಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ವಿಜಯಲಕ್ಷ್ಮೀ ದಂಪತಿಯನ್ನು ದೇಗುಲದ ವತಿಯಿಂದ ಶಾಲು ಹೊದೆಸಿ ಮಹಾಪ್ರಸಾದ ನೀಡಿದರು.
ವಿಧಾನ ಪರಿಷತ್‌ನ ವಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಪ್ರಸ್ತುತ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದ ಮೇಲೆ ನಡೆದ ಐಟಿ ದಾಳಿ ಸಂದರ್ಭ ಇಂಥದೊಂದು ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಸಚಿವರಿಂದ ಕೋಟ್ಯಂತರ ರೂ. ಕಪ್ಪ ಸಂದಾಯವಾಗಿರುವುದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ನಡೆಯ ದಿರುವಷ್ಟು ನೇರವಾಗಿ ದಾಖಲೆ ಸಮೇತ ಸಿಕ್ಕಿರುವ ಭ್ರಷ್ಟಾಚಾರ ಇದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕು. ಇಲ್ಲದಿದ್ದಲ್ಲಿ ರಾಜೀನಾಮೆ ಕೊಡುವವರೆಗೂ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭ ರಾಜೇಶ್ ಕಾವೇರಿ, ಬೇಳೂರು ಪ್ರವೀಣ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್ ಕುಂದಾಪುರ, ಸುರೇಶ್ ಶೆಟ್ಟಿ ಕಾಡೂರು, ಕೆ. ರಮಣ ಉಪಾಧ್ಯಾಯ, ಆನಂದರಾಮ್ ಉರಾಳ, ಕೆ. ಕೃಷ್ಣರಾಜ ಉಪಾಧ್ಯಾಯ ಮತ್ತು ಕೆ. ರವಿರಾಜ ಉಪಾಧ್ಯಾಯ, ಪ್ರತಾಪ್ ಶೆಟ್ಟಿ ಮೊಳಹಳ್ಳಿ, ಸುರೇಶ್ ಪೇತ್ರಿ, ಗೋಪಾಡಿ ಗಣೇಶ್ ಭಟ್, ಶ್ರೀನಿವಾಸ ಕುಂದರ್ , ಕಾಂತೇಶ್, ಶಾಲಿನಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.