Advertisement
“ನನಗೆ ಕನಿಷ್ಠ ಎರಡು ಏಕದಿನ ಸರಣಿಗಳಲ್ಲಿ ಮುಂದುವರಿಯುವ ಅವಕಾಶ ಲಭಿಸಿದ್ದರೆ ಇನ್ನಷ್ಟು ರನ್ ಗಳಿಸುತ್ತಿದ್ದೆ. ಅಕಸ್ಮಾತ್ ನಾಗ್ಪುರ ಟೆಸ್ಟ್‌ನಲ್ಲಿ ನಿವೃತ್ತಿಯಾಗದೇ ಇದ್ದಿದ್ದರೆ ಮುಂದಿನೆರಡು ಟೆಸ್ಟ್ ಸರಣಿಗಳಲ್ಲಿ ಖಂಡಿತವಾಗಿಯೂ ರನ್ ಮಾಡುತ್ತಿದ್ದೆ’ ಎಂದು ಬಂಗಾಲಿ ದೈನಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಹೇಳಿದ್ದಾರೆ.
“ಈಗಲೂ ರನ್ ಪೇರಿಸುವ ಆತ್ಮವಿಶ್ವಾಸ ನನ್ನಲ್ಲಿದೆ. ಆರಲ್ಲ, ಕೇವಲ ಮೂರು ತಿಂಗಳ ಅಭ್ಯಾಸ ಮಾಡಿ, ಕನಿಷ್ಠ ಮೂರು ರಣಜಿ ಪಂದ್ಯಗಳನ್ನಾಡುವ ಅವಕಾಶ ಲಭಿಸಿದರೆ ನಾನು ಖಂಡಿತವಾಗಿಯೂ ಟೆಸ್ಟ್ ಮತ್ತು ಏಕದಿನಗಳೆರಡರಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರನ್ ಗಳಿಸಬಲ್ಲೆ’ ಎಂದು ಗಂಗೂಲಿ ನುಡಿದರು. ಸದ್ಯ ಸೌರವ್ ಗಂಗೂಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಸಹೋದರ ಸ್ನೇಹಶಿಷ್ ಗಂಗೂಲಿ ಕೋಲ್ಕತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.