Advertisement
ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಪಡಿತರ ಆನ್‌ಲೈನ್ ಪ್ರಕ್ರಿಯೆ ರದ್ದತಿ ಬಗ್ಗೆ ರಾಜ್ಯದ ಎಲ್ಲ ತಾ.ಪಂ.ಗಳು ನಿರ್ಣಯ ತೆಗೆದುಕೊಂಡರಷ್ಟೇ ರದ್ದತಿ ಸಾಧ್ಯ. ಸರ್ವರ್ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗು ವುದು ಎಂದರು.
Related Articles
Advertisement
ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಮಾತನಾಡಿ, ಕೊಡಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕುದಿ ಗ್ರಾಮದ 5 ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಯವರ ನಡಾವಳಿಯಂತೆ ಪಹಣಿಯಲ್ಲಿ ಗ್ರಾ.ಪಂ.ಹೆಸರಿಗೆ ಕಾದಿರಿಸಿ ನಿವೇಶನ ರಚನೆ ಯಾಗಿದೆ. ಅಲ್ಲಿ ಮರ ಕಡಿಯಲು ಪಂಚಾಯತ್‌ನಿಂದ ಪತ್ರ ವ್ಯವಹಾರ ನಡೆಸಿದಾಗ ಡೀಮ್ಡ್ ಫಾರೆಸ್ಟ್ ಎಂದು ಹೇಳಿದ್ದರು. ಆದರೆ ಕುದಿ
ಗ್ರಾಮದ ಡೀಮ್ಡ್ ಫಾರೆಸ್ಟ್ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆಯವರ ಪಟ್ಟಿಯೊಂದಿಗೆ ತಾಳೆ ಮಾಡಿ ನೋಡಬೇಕಾಗಿದೆ. ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ರಾಜೀನಾಮೆ :
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ಪ್ರಭು ಅವರು ತಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೂ ಅರಣ್ಯ ಇಲಾಖೆಯ ನಿಲುವಿನ ಬಗ್ಗೆ ಬೇಸರಿಸಿದರು.
ಟೈಲರಿಂಗ್ ಯಂತ್ರ ವಿತರಣೆ :
ತಾಲೂಕಿನ ಗ್ರಾಮೀಣ ಪ್ರದೇಶದ ಪರಿಶಿಷ್ಟ ಪಂಗಡದ ವೃತ್ತಿನಿರತ ಕುಶಲಕರ್ಮಿಗಳಿಗೆ ಸಾಂಕೇತಿಕವಾಗಿ 2 ಮಂದಿ ಫಲಾನುಭವಿಗಳಿಗೆ ವಿದ್ಯುತ್‌ಚಾಲಿತ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ಆರ್.ಕೋಟ್ಯಾನ್, ಲೆಕ್ಕ ಸಹಾಯಕ ಮೆಲ್ವಿನ್ ಥೋಮಸ್ ಉಪಸ್ಥಿತರಿದ್ದರು.
ಕೋವಿಡ್ ಲಸಿಕೆ ಬಗ್ಗೆ ಹಿಂಜರಿಕೆ ಬೇಡ :
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಬ್ರಹ್ಮಾವರ, ಕುಂದಾಪುರ ಭಾಗದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಉಡುಪಿ ಹಾಗೂ ಕಾಪು ಭಾಗಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಈ ಬಗ್ಗೆ ಯಾವುದೇ ತಪ್ಪು ತಿಳಿವಳಿಕೆಗಳು ಬೇಡ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.ಉಳಿದಂತೆ ಯಾರೂ ಭಯಪಡುವ ಆವಶ್ಯಕತೆಯಿಲ್ಲ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ ಹೇಳಿದರು.