Advertisement
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಭಾಗ್ಯಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ದುಡಿಯುವಕೈಗಳಿಗೆ ಕೆಲಸ ಒದಗಿಸಲು ಉದ್ಯೋಗ ಭಾಗ್ಯ ಕಲ್ಪಿಸುವತ್ತ ಚಿತ್ತ ಹರಿಸಬೇಕು. ದುಡಿಯುವ ಶ್ರಮಿಕರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ಕನಿಷ್ಠ
ವೇತನ ಭಾಗ್ಯ ಕಲ್ಪಿಸಬೇಕು. ಇದರಿಂದ ದುರ್ಬಲ ವರ್ಗದ ಜನರು ಕೂಡ ಆರ್ಥಿಕ ಸಬಲೀಕರಣಕ್ಕೆ ಸಾಧ್ಯವಾಗಲಿದೆ ಎಂದರು.
ಎಲ್ಲೆಡೆ ಹೆಚ್ಚುತ್ತಿರುವ ಹೊರ ಗುತ್ತಿಗೆ ವ್ಯವಸ್ಥೆಯಿಂದ ಕಾರ್ಮಿಕರ ಶೋಷಣೆ ಮಿತಿ ಮೀರಿದ್ದು, ವೇತನ, ರಜೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿಲ್ಲ. ಪ್ರಶ್ನಿಸುವ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು. ಮತ್ತೂಂದೆಡೆ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ನಿರುದ್ಯೋಗಿಗಳು ಉದ್ಯೋಗ ದೊರೆತರೂ ಭವಿಷ್ಯ ರೂಪಿಸಿಕೊಳ್ಳಲು ಬಂಡವಾಳಶಾಹಿ ಜನರ ಕೈಗೊಂಬೆಯಂತೆ ಜೀವನ ನಡೆಸುವಂತೆ ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು. ಇಂಧನ ಇಲಾಖೆ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಎರಡು ದಶಕಗಳಿಂದ ಗುತ್ತಿಗೆ ಆಧಾರಿತ ಸೇವೆ ಸಲ್ಲಿಸುತ್ತಿರುವರನ್ನೇ ನೇಮಿಸಬೇಕು. ಇಲ್ಲವಾದಲ್ಲಿ ವಯೋಮಿತಿ ಮೀರುತ್ತಿರುವ ಈ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈಗಿರುವ ಸಿಬ್ಬಂದಿ ಸೇವೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನಲ್ಲಿ ಯಾವುದೇ ಕಾರ್ಮಿಕ 365 ದಿನ ಸೇವೆ ಸಲ್ಲಿಸಿದ್ದರೆ ಸೇವೆ ಕಾಯಂ ಮಾಡುವ ಕಾನೂನು ಜಾರಿಗೆ ಬಂದಿದೆ. ಅದೇ ಮಾದರಿ ಕಾನೂನು ರಾಜ್ಯದಲ್ಲೂ ಜಾರಿಗೆ ಬರಬೇಕು. ಗುತ್ತಿಗೆ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುವ ಕಾರ್ಮಿಕರ ಸೇವೆ ಕಾಯಂ ಮಾಡಬೇಕು ಎಂದರು.
Related Articles
Advertisement