Advertisement

“Hampi ಕನ್ನಡ ವಿವಿಗೆ ವಿದ್ಯುತ್‌ ಬಿಲ್‌ ಪಾವತಿಸಲು ಅನುದಾನ ನೀಡಿ’

08:47 PM Feb 19, 2024 | Team Udayavani |

ವಿಧಾನ ಪರಿಷತ್ತು: ವಿದ್ಯುತ್‌ ಬಿಲ್‌ ಕಟ್ಟದ ಪರಿಸ್ಥಿತಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಆ ವಿವಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್‌ನ ಉಮಾಶ್ರೀ ಸರ್ಕಾರವನ್ನು ಆಗ್ರಹಿಸಿದರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಾಡಿನ ಹೆಮ್ಮೆಯ ಕನ್ನಡ ವಿವಿ ಈಗ ಅನುದಾನವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಾಡಿನ ಏಕೈಕ ಭಾಷಾ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಶ್ವವಿದ್ಯಾನಿಲಯ ಇದೀಗ ವಿದ್ಯುತ್‌ ಬಿಲ್‌ ಪಾವತಿಸಲಾಗದ ಸ್ಥಿತಿಯಲ್ಲಿದೆ.

ಸುಮಾರು 1 ಕೋಟಿ ರೂ. ಗೂ ಅಧಿಕ ಬಿಲ್‌ ಪಾವತಿ ಮಾಡಬೇಕಾಗಿದ್ದು ವಿದ್ಯುತ್‌ ಇಲಾಖೆ ಅಧಿಕಾರಿಗಳು ಬಿಲ್‌ ಕಟ್ಟದಿದ್ದರೆ ವಿವಿಗೆ ನೀಡಿರುವ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಸರ್ಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಭೋಸರಾಜ್‌, ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆ ಸಚಿವರ ಗಮನಕ್ಕೆ ತರುವ ಭರವಸೆ ನೀಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next