Advertisement
ರಾಜ್ಯದಲ್ಲಿ ಈವರೆಗೆ ಒಂದೂವರೆ ಲಕ್ಷ ಡೋಸ್ ಗಳಿಗಿಂತಲೂ ಅಧಿಕ ಕೊರೊನಾ ಲಸಿಕೆ ವ್ಯರ್ಥ ವಾಗಿದೆ. ಇದನ್ನು ತಡೆಯಲು 40 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಬೇಕು ಎಂಬ ಆಗ್ರಹವನ್ನು ಬೆಂಬಲಿಸಿ ತಜ್ಞರು ಕೂಡ ಸರಕಾರಕ್ಕೆ ಪೂರಕ ಸಲಹೆ ನೀಡಿದ್ದಾರೆ.
Related Articles
Advertisement
ಅಮೆರಿಕದಲ್ಲಿ ಕೋವಿಡ್ ಲಸಿಕೆ ನೀಡಲು ನಿಗದಿ ಪಡಿಸಿ ರುವವರು ಬಾರದಿದ್ದರೆ ಅವರ ಲಸಿಕೆಯನ್ನು ಸ್ಥಳದಲ್ಲಿ ಲಭ್ಯವಿರುವ ಸಾರ್ವ ಜನಿಕರಿಗೆ ನೀಡಲಾಗುತ್ತದೆ. ಈ ಮೂಲಕ ಲಸಿಕೆ ವ್ಯರ್ಥ ವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಮ್ಮಲ್ಲಿಯೂ “ಲಸಿಕೆ ವ್ಯರ್ಥವಾಗುವಂತಿದ್ದರೆ ನಿಮ್ಮನ್ನು ಆಹ್ವಾನಿ ಸುತ್ತೇವೆ, ಬಂದು ಲಸಿಕೆ ಪಡೆಯಬಹುದು’ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಬಹುದಾಗಿದೆ. 60 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆಯುಳ್ಳವರು ಬಾರದಿದ್ದರೆ ಸಮೀಪದ ಸಾರ್ವಜನಿಕರನ್ನು ಆಹ್ವಾನಿಸಿ ಲಸಿಕೆ ನೀಡಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ ಡಾ| ಸುದರ್ಶನ್ ಬಲ್ಲಾಳ್ ಸಲಹೆ ನೀಡಿದ್ದಾರೆ.
ಸರ್ವಪಕ್ಷ ಸಭೆ ಕರೆಯಿರಿ :
ಕೋವಿಡ್ 2ನೇ ಅಲೆ ನಿಯಂತ್ರಿಸುವ ಕುರಿತು ಸರ್ವಪಕ್ಷ ಸಭೆ ಕರೆದು ಚರ್ಚಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ಜನಸಾಮಾನ್ಯರ ನಡವಳಿಕೆ ಬದ ಲಾಗಬೇಕು. ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ದರೆ ಅಪಾಯವಿದೆ ಎಂದಿದ್ದಾರೆ. ಸೋಂಕು ಹೆಚ್ಚಾದರೆ ಸರಕಾರ ಕೂಡ ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಸುರಕ್ಷಿತವಾಗಿದ್ದರೆ, ನಿಮ್ಮನ್ನು ನಂಬಿದ ಮನೆಯವರೂ ಸುರಕ್ಷಿತವಾಗಿರುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ತಜ್ಞರ ಪ್ರಮುಖ ಸಲಹೆಗಳು :
- ಭವಿಷ್ಯದಲ್ಲಿ ಎಲ್ಲರಿಗೂ ಲಸಿಕೆ ನೀಡಲೇಬೇಕು. ಶೀಘ್ರವಾಗಿ ಹೆಚ್ಚು ಮಂದಿಗೆ ಲಸಿಕೆ ನೀಡುವುದರಿಂದ ಅವರನ್ನು ಸೋಂಕಿನಿಂದ ರಕ್ಷಿಸಬಹುದು.
- ವಯಸ್ಕರು ಶ್ರಮಜೀವಿಗಳಾಗಿದ್ದು, ಆರ್ಥಿಕತೆಯ ಆಧಾರ ಸ್ತಂಭವಾಗಿದ್ದಾರೆ. ಅವರನ್ನು ಸೋಂಕಿನಿಂದ ರಕ್ಷಿಸಿಕೊಳ್ಳುವುದು ಸರಕಾರದ ಜವಾಬ್ದಾರಿ.
- ಲಸಿಕೆ ಕಡಿಮೆ ಇದ್ದಾಗ ಹಿರಿಯರಿಗೆ, ರೋಗಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸದ್ಯ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ಶೀಘ್ರ ಸಾರ್ವಜನಿಕರಿಗೂ ಲಸಿಕೆ ನೀಡಬೇಕು.
- ಕೋವಿಡ್ ಎರಡನೇ ಅಲೆ ಭೀತಿ ಇರುವ ರಾಜ್ಯಗಳಲ್ಲಾದರೂ ಎಲ್ಲರಿಗೂ ತುರ್ತಾಗಿ ಲಸಿಕೆ ನೀಡಬೇಕು.
- ಅದರಲ್ಲೂ 45ರಿಂದ 59 ವರ್ಷದ ಆರೋಗ್ಯ ಸಮಸ್ಯೆಯುಳ್ಳವರಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ಲಸಿಕೆ ಪಡೆಯುವ ಅವಕಾಶವನ್ನು ಎಲ್ಲರಿಗೂ ಒದಗಿಸಿದರೆ ವ್ಯರ್ಥವಾಗುವುದನ್ನು ಕಡಿಮೆ ಮಾಡಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.