ಸಿಂಧನೂರು: ಸರಕಾರದಿಂದಲೇ ಅತ್ಯುನ್ನತ ರೀತಿಯ ಕಟ್ಟಡವನ್ನು ಉದ್ಘಾಟಿಸಿ ವಸತಿ ಕಲ್ಪಿಸಲಾಗಿದೆ. ಪಿಯುಸಿ ನಂತರದ ವಿದ್ಯಾರ್ಥಿನಿಯರು ಜವಾಬ್ದಾರಿ ಅರಿತು ತಮ್ಮ ಪಾಲಕರಿಗೆ ಸಾಧನೆಯ ಉಡುಗೊರೆ ನೀಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಪದವಿ ಮಹಾವಿದ್ಯಾಲಯ ಎದುರಿನಲ್ಲಿ 3.49 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕಾರ ಮತ್ತು ವಿದ್ಯೆ ಅಮೂಲ್ಯ. ಇವೆರಡನ್ನು ವಿದ್ಯಾರ್ಥಿನಿಯರು ಗಳಿಸಬೇಕು. ಇದು ಸ್ಪರ್ಧಾತ್ಮಕ ಯುಗ. ತಾಂತ್ರಿಕವಾಗಿಯೂ ವಿದ್ಯಾರ್ಥಿನಿಯರು ಜ್ಞಾನವನ್ನು ಸಂಪಾದನೆ ಮಾಡಬೇಕು. ಅದರೊಟ್ಟಿಗೆ ಉತ್ತಮ ಸಾಧನೆ ಹೊಂದಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿ, ಹಿಂದಿನ ಕಾಲದಲ್ಲಿ ಸೌಲಭ್ಯಗಳು ಕಡಿಮೆ ಇದ್ದವು. ಇಂದು ಸಾಕಷ್ಟು ಅನುಕೂಲವಿದೆ. ಬೃಹತ್ ಕಟ್ಟಡದಲ್ಲೇ ನೆಲೆ ಕಲ್ಪಿಸಲಾಗಿದೆ. ಹಾಗೆ, ಅನೇಕ ಸೌಲಭ್ಯಗಳನ್ನು ಸರಕಾರ ಕೊಡುತ್ತಿದೆ. ಅದರ ಸದ್ಬಳಕೆಯಾಗಬೇಕಿದೆ. ಮೊಬೈಲ್‌ನಿಂದ ಸಮಯ ವ್ಯರ್ಥವೂ ಆಗುತ್ತದೆ ಎಂದರು.
ಇದನ್ನೂ ಓದಿ: ಕರಾಳ ಕಾಯಿದೆಗಳೇ ಕೃಷಿಗೆ ಮರಣ ಶಾಸನ
ತಹಶೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ಚಂದ್ರಶೇಖರ ಮೈಲಾರ್, ಮಲ್ಲಿಕಾರ್ಜುನ ಜಿನೂರು, ಸತ್ಯನಾರಾಯಣ ದಾಸರಿ, ಮುಖಂಡರಾದ ಚಂದ್ರುಭೂಪಾಲ ನಾಡಗೌಡ, ಎಂ.ಡಿ. ನದಿಮುಲ್ಲಾ, ನಿರುಪಾದಿ ಸುಕಾಲಪೇಟೆ, ಶಂಕರಶೆಟ್ಟಿ, ಅಲ್ಲಂಪ್ರಭು ಪೂಜಾರ್, ವಿರುಪಣ್ಣ ಮಾಡಸಿರವಾರ ಇದ್ದರು.