Advertisement

ನೊಂದವರಿಗೆ ಧೈರ್ಯದ ಹಣತೆ ನೀಡಿ

12:58 AM May 26, 2019 | Team Udayavani |

ಬೆಂಗಳೂರು: ಈಗಾಗಲೇ ನಡೆದಿರುವ ಮತೀಯ ಸಂಘರ್ಷ ಘಟನೆಗಳಲ್ಲಿ ಸಿಲುಕಿ ನೊಂದಿರುವ ಜೀವಿಗಳಿಗೆ ಧೈರ್ಯದ ಹಣತೆ ನೀಡಬೇಕಾಗಿದೆ ಎಂದು ವಿಮರ್ಶಕ ಡಾ.ರಂಗನಾಥ್‌ ಕಂಟನಕುಂಟೆ ಅಭಿಪ್ರಾಯಪಟ್ಟರು.

Advertisement

ರಾಜಾಜಿನಗರದ ಆಕೃತಿ ಪುಸ್ತಕ ಪ್ರಕಾಶನ ಮಳಿಗೆಯಲ್ಲಿ ಶನಿವಾರ ನಡೆದ ಲೇಖಕ ಡಾ. ಸುಭಾಷ್‌ ರಾಜಮಾನೆ ಅವರ “ಬದುಕಿನ ಅರ್ಥಗಳು ಹುಡುಕುತ್ತಾ’ ಅನುವಾದಿತ ಕೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಡಾಳಶಾಹಿಗಳ ಹಿತಾಸಕ್ತಿಯೇ, ಮತೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಈ ಬಗ್ಗೆ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ಗೋದ್ರಾ ಘಟನೆಯ ನಂತರ ಹಲವು ಮಂದಿ ನಲುಗಿ ಹೋಗಿದ್ದರು. ಆದರೂ ಇದಕ್ಕೆ ಬೆದರದ ಜೀವಿಗಳು ಇನ್ನೂ ಬದುಕಿದೆ ಎಂದು ಕೊಂಡು ಜೀವನ ರೂಪಿಸಿಕೊಂಡರು. ಇಂತಹ ಜೀವಿಗಳಿಗೆ ಮತ್ತೆ ಭಯ ಕಾಡುತ್ತಿದ್ದು, ಭಯದಲ್ಲೇ ಬದುಕು ಕಳೆಯುತ್ತಿರುವ ಮನಸುಗಳಿಗೆ ಧೈರ್ಯದ ಹಣತೆಯನ್ನು ನೀಡಬೇಕಾಗಿದೆ ಎಂದು ಹೇಳಿದರು.

ಜರ್ಮನಿಯ ಹಿಟ್ಲರ್‌ ರಕ್ತಕ್ರಾಂತಿಗೆ ಕಾರಣನಾದ. ಆ ವೇಳೆ ಹಲವು ಮಂದಿ ನಾನಾ ರೀತಿಯ ಚಿತ್ರಹಿಂಸೆ ಅನುಭವಿಸಿದರು. ಈ ಎಲ್ಲಾ ಘಟನೆಯನ್ನು “ಬದುಕಿನ ಅರ್ಥಗಳು ಹುಡುಕುತ್ತಾ..’ ಕೃತಿ ನೆನಪಿಸುತ್ತದೆ. ಜತೆಗೆ ಬದುಕಬೇಕೆಂಬ ಮಹಾತ್ವಾ ಕಾಂಕ್ಷೆಯನ್ನು ಕಟ್ಟಿಕೊಡುತ್ತದೆ. ಮುಂದೆ ಬರಬಹುದಾದ ಸಮಸ್ಯೆಗಳನ್ನು ನಿರ್ಭೀತಿಯಿಂದ ಎದುರಿಸುವ ಪ್ರೇರಣೆ ದಾರಿಯ ನ್ನು, ಈ ಪುಸ್ತಕ ನೀಡುತ್ತದೆ ಎಂದು ಹೇಳಿದರು.

ಜಗತ್ತು, ಹಿಂಸೆಯನ್ನು ಪ್ರೀತಿಯಿಂದ ಗೆಲ್ಲಬೇಕು. ಹಿಂಸೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂಬುವುದನ್ನು ಅರಿಯಬೇಕು.ಹಿಂಸೆ ಮಾಡುವವರ ಮಧ್ಯೆಯೂ ಹೇಗೆ ಪ್ರೀತಿಯಿಂದ ಬದುಕ ಬೇಕು ಎಂಬುವುದು ಸೇರಿದಂತೆ ಹಲವು ಅನುಪಮ ವಿಷಯಗಳನ್ನು ಲೇಖಕರು ಪುಸ್ತಕದಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ ಎಂದರು.

Advertisement

ವಿಯೆನ್ನಾದ ಮೂವರು ಮಹಾ ಮನೋವಿಜ್ಞಾನಿಗಳು ಕುರಿತು ಮಾತನಾಡಿದ ಲೇಖಕ ಮತ್ತು ಮನೋವಿಜ್ಞಾನಿ ಡಾ.ಎಂ. ಬಸವಣ್ಣ, ಮನೋವಿಜ್ಞಾನ ಸಾಹಿತ್ಯದ ಎಂದು ಭಾಗವಾಗಿದೆ ಎಂದರು. “ಬದುಕಿನ ಅರ್ಥಗಳು ಹುಡುಕುತ್ತಾ..’ ಪುಸ್ತಕದ ಲೇಖಕ ಡಾ.ಸುಭಾಷ್‌ ರಾಜಮಾನೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next