ಪಂಚಾಯಿತಿ ಕೂಡ ಇದೇ ಮಾದರಿ ಅನುಸರಿಸಲು ಸಿದ್ಧತೆ ನಡೆಸಿದೆ.
Advertisement
ಜಿಐಎಸ್ ಅನುಷ್ಠಾನದ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ತೆರಿಗೆ ಸಂಗ್ರಹದಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿರುವ ನಗರ ಜಿಲ್ಲೆಯ ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳನ್ನು ಈ ಪದ್ಧತಿ ವ್ಯಾಪ್ತಿಗೆ ತರಲು ಜಿ.ಪಂ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್ ತಾಲೂಕಿನ 25 ಗ್ರಾ.ಪಂಗಳನ್ನು ಜಿಐಎಸ್ ವ್ಯಾಪ್ತಿಗೆ ತರಲಾಗುತ್ತಿದೆ. ಈ ಪ್ರಯತ್ನ ಯಶಸ್ವಿ ಯಾದರೆ ಎಲ್ಲ ಪಂಚಾಯಿತಿಗಳಲ್ಲೂ ವ್ಯವಸ್ಥೆ ಜಾರಿಗೊಳಿಸುವುದಾಗಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ವ್ಯವಸ್ಥೆ ಜಾರಿಗೆ ಮೊದಲು ಗ್ರಾ.ಪಂ ವ್ಯಾಪ್ತಿಯ ಗಣಕೀಕೃತ ಆಸ್ತಿ ನಕ್ಷೆ ರೂಪಿಸಿ, ಅದರಂತೆ ಪ್ರತಿಯೊಂದು ಆಸ್ತಿಯ ಮಾಹಿತಿಯನ್ನೂ ಡಿಜಿಟಲೀಕರಣ ಮಾಡಲಾಗುತ್ತದೆ. ಜತೆಗೆ ಜಿಪಿಎಸ್ ಆಧಾರಿತ ಭಾವಚಿತ್ರದೊಂದಿಗೆ ಆಸ್ತಿ ಗುರುತಿಸಲಾಗುತ್ತದೆ. ಹಾಗೇ, ಸರ್ಕಾರದಿಂದ ಮಂಜೂರಾದ ನಿವೇಶನಗಳ ವಿವರ, ಒಂದೊಮ್ಮೆ ಅಲ್ಲಿ ಕಟ್ಟಡ ನಿರ್ಮಾಣವಾಗಿದ್ದರೆ ನಿರ್ಮಾಣದ ದಿನಾಂಕ, ಆಸ್ತಿ ಮಾಲೀಕರ ಮತ್ತು ಪರಿವರ್ತಿತ ಕೃಷಿ ಭೂಮಿ ಮಾಹಿತಿ, ಕಟ್ಟಡದ ಚೆಕ್‌ಬಂದಿಗಳ ಸಂಪೂರ್ಣ ವಿವರ ಕೂಡ ದೊರೆಯಲಿದೆ. ಅಷ್ಟೇ ಅಲ್ಲ, ಭೂ ಮಾಲೀಕರು ಪಾವತಿಸಬೇಕಿರುವ ಬಾಕಿ
ತೆರಿಗೆ ವಿವರ ಕೂಡ ಲಭ್ಯವಾಗಲಿದೆ.
Related Articles
ಬೆಂಗಳೂರು ಉತ್ತರ: ಚಿಕ್ಕಬಾಣಾವಾರ, ದಾಸನಪುರ, ದೊಡ್ಡಜಾಲ, ಚಿಕ್ಕಜಾಲ, ಸಾತನೂರು, ಕಡಬಗೆರೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ಚಿಕ್ಕಬಿದರಕಲ್ಲು
ಬೆಂಗಳೂರು ದಕ್ಷಿಣ: ಸೋಮನಹಳ್ಳಿ, ರಾಮೋಹಳ್ಳಿ, ಚೋಳನಾಯಕನಹಳ್ಳಿ, ಕುಂಬಳಗೋಡು
ಬೆಂಗಳೂರು ಪೂರ್ವ: ಅವಲಹಳ್ಳಿ, ಶೀಗೆಹಳ್ಳಿ, ಕಣ್ಣೂರು, ಬಿದರಹಳ್ಳಿ, ದೊಡ್ಡಗುಬ್ಬಿ ಆನೇಕಲ್ ತಾಲೂಕು: ಮಂಟಪ, ಹೆನ್ನಾಗರ, ಬಿದರಗುಪ್ಪೆ, ಶಾಂತಿಪುರ, ಹುಸ್ಕೂರು, ನೆರಳೂರು ಮತ್ತು ದೊಮ್ಮಸಂದ್ರ
Advertisement
ಭೌಗೋಳಿಕ ಮಾಹಿತಿ ಪದ್ಧತಿ ಜಾರಿಯಿಂದ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಆಸ್ತಿಗಳು ಒತ್ತುವರಿ ಯಾಗದಂತೆ ತಡೆಯಲು ಸಾಧ್ಯವಿದೆ. ಜಿ.ಪಂ ಆಸ್ತಿ ಕಬಳಿಕೆಯಾಗಿರುವುದು ಸಹ ಇದರಿಂದ ತಿಳಿಯಲಿದೆ. ಅಲ್ಲದೆ, ಜಿ.ಪಂ ಆಸ್ತಿ, ಕಟ್ಟಡಗಳು, ಸೇರಿ ಇನ್ನಿತರ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ತೆರಿಗೆ ಸಂಗ್ರಹ ವೃದ್ಧಿಗೂ ಜಿಐಎಸ್ ಸಹಕಾರಿ.ಎಂ.ಎಸ್.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಶೇ.24ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ಶೇ.76ರಷ್ಟು ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಐಎಸ್ ಆಧಾರಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದೇವೆ.
ಕೆ.ಜಿ.ಜಗದೀಶ್, ಸಹಾಯಕ ಯೋಜನಾಧಿಕಾರಿ ದೇವೇಶ ಸೂರಗುಪ್ಪ