Advertisement

Child Rape ಆರೋಪಿ ಬೇಕರಿ ಧ್ವಂಸ ಮಾಡಿದ ಅಯೋಧ್ಯೆ ಜಿಲ್ಲಾಡಳಿತ

12:20 AM Aug 04, 2024 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪ್ರಮುಖ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಬೇಕರಿಯನ್ನು ಬುಲ್ಡೋಜರ್‌ ಮೂಲಕ ತೆರ ವುಗೊಳಿಸಲಾಗಿದೆ.

Advertisement

ಕೆರೆಯೊಂದರ ಮೇಲೆ ಅಕ್ರಮ ವಾಗಿ ಅದನ್ನು ನಿರ್ಮಿಸಲಾಗಿತ್ತು. ಹೀಗಾಗಿ ಅದನ್ನು ಕೆಡವಿ ಹಾಕಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಸಿಎಂ ಯೋಗಿ ಅದಿತ್ಯನಾಥ್‌ ಅವರನ್ನು ಬಾಲಕಿಯ ತಾಯಿ ಗುರುವಾರ ಭೇಟಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಖಾನ್‌ ಮತ್ತು ಆತನ ಸಹಚರ 12 ವರ್ಷದ ಬಾಲಕಿ ಮೇಲೆ ಅತ್ಯಾ ಚಾರ ಎಸಗಿದ್ದಲ್ಲದೇ, ಅದನ್ನು ವೀಡಿಯೋ ಮಾಡಿ ದ್ದಾರೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತು. ಜು. 30ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next