Advertisement

ಬನ್ನೇರುಘಟ್ಟ ಉದ್ಯಾನಕ್ಕೆ ಜಿರಾಫೆ ಆಗಮನ

12:36 PM Apr 04, 2018 | |

ಆನೇಕಲ್‌: ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ವಿಶೇಷ ಅತಿಥಿ ಜಿರಾಫೆ ಆಗಮಿಸಿದೆ. ಇದರಿಂದ ಇಡೀ ಉದ್ಯಾನವನಕ್ಕೆ ಮತ್ತಷ್ಟು ಮೆರಗು ಬರಲಿದೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಎರಡೂವರೆ ವರ್ಷ ವಯಸ್ಸಿನ ಗೌರಿಯನ್ನು ಉದ್ಯಾನವನಕ್ಕೆ ಆಗಮಿಸಿರುವ ವಿಶೇಷ ಅತಿಥಿ. ಕೃಷ್ಣರಾಜ ಮತ್ತು ಲಕ್ಷ್ಮೀ ಜಿರಾಫೆಗೆ ಜನಿಸಿದ ಮರಿ ಇದಾಗಿದೆ.

Advertisement

ಜಿರಾಫೆ ಆಗಮನದಿಂದ ಸಂತಸಗೊಂಡ ಸಿಬ್ಬಂದಿ ಗೌರಿ ವಾಸಿಸುವ ಕ್ರಾಲ್‌ಗೆ ಪೂಜೆ ಮಾಡಿ, ಸಿಹಿ ವಿತರಿಸಿ ಸಂತಸ ಪಡುವುದರ ಮೂಲಕ ಜಿರಾಫೆಗೆ ಅದ್ಧೂರಿ ಸ್ವಾಗತ ಕೋರಿದರು. ಕಳೆದ ಮೂರು ವಾರಗಳಿಂದ ಮೈಸೂರಿನಿಂದ ಜಿರಾಫೆ ತರಲು ಯತ್ನ ನಡೆದಿತ್ತು. ಮೊದಲೇ ತೀರ್ಮಾನಿಸಿದಂತೆ ಬಬ್ಲಿ ಜಿರಾಫೆ ಕ್ರಾಲ್‌ನೊಳಗೆ ಬಂಧಿಸಲು ಅಧಿಕಾರಿ, ಸಿಬ್ಬಂದಿ ಎರಡು ವಾರಗಳು ಪ್ರಯತ್ನಿಸಿ ವಿಫ‌ಲವಾಗಿದ್ದರು. ಕೊನೆಗೆ ಬಬ್ಲಿ ಬದಲಾಗಿ ಗೌರಿ ಜಿರಾಫೆ ತರಲು ಮುಂದಾದರು.

ಅದರಂತೆ ಜಿರಾಫೆ ಸಾಗಿಸುವ ಕಾರ್ಯಚರಣೆ ಆರಂಭಿಸಿದ ಸಿಬ್ಬಂದಿಗೆ ಕೇವಲ ಮೂರು ಗಂಟೆಗಳ ಪ್ರತಯತ್ನದಲ್ಲೇ ಗೌರಿ ಕ್ರಾಲ್‌ನಲ್ಲಿ ಸೇರಿದಳು. ಅಲ್ಲಿಗೆ ಬನ್ನೇರುಘಟ್ಟಕ್ಕೆ ಜಿರಾಫೆ ಆಗಮನ ಖಚಿತವಾಯಿತು.

24 ಚಕ್ರಗಳ ದೊಡ್ಡ ಲಾರಿಯಲ್ಲಿ ಕ್ರಾಲ್‌: ನಾಲ್ಕು ಜೀಪ್‌ಗ್ಳು, ಉದ್ಯಾನವನ, ಕೆಪಿಟಿಸಿಎಲ್‌ ಸಿಬ್ಬಂದಿ, ಪೊಲೀಸ್‌ ಸಹಕಾರದೊಂದಿಗೆ ಅತ್ಯಂತ ಮುತುವರ್ಜಿಯಿಂದ ಉದ್ಯಾನವನಕ್ಕೆ ತರಲಾಗಿದೆ. 24 ಚಕ್ರಗಳ ದೊಡ್ಡ ಲಾರಿಯಲ್ಲಿ ಕ್ರಾಲ್‌ ಸಾಗಿಸಲಾಗಿದೆ. ಕ್ರೇನ್‌ ಮೂಲಕ ಟ್ರಾಲಿ ಇಳಿಸಲಾಯಿತು. 11ಅಡಿಯ ಜಿರಾಫೆಯನ್ನು 12ಷ7ಅಡಿಗಳ ವಿಸ್ತೀರ್ಣದ ಟ್ರಾಲಿ ತರಲಾಗಿದೆ. 

ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಗೋಕುಲ್‌ ಮಾತನಾಡಿ, ರಾಜ್ಯದಲ್ಲಿ ಇಲ್ಲಿವರೆಗೂ ಕೇವಲ ಮೈಸೂರು ಮೃಗಾಲಯದಲ್ಲಿ ಮಾತ್ರ ಜಿರಾಫೆ ನೋಡಲು ಸಿಗುತಿತ್ತು. ಬುಧವಾರದಿಂದ ಬನ್ನೇರುಘಟ್ಟದಲ್ಲೂ
ನೋಡಬಹುದಾಗಿದೆ. ಬೇಸಿಗೆ ರಜೆ ವೇಳೆ ಪ್ರವಾಸಿಗರಿಗೆ ಹೊಸ ಪ್ರಾಣಿಗಳನ್ನು ನೋಡಲು ಅವಕಾಶ ಕಲ್ಪಿಸಲಾಗುವುದುಎಂದರು.

Advertisement

ಉದ್ಯಾನವನದ ವೈದ್ಯಾಧಿಕಾರಿ ಉಮಾಶಂಕರ್‌ ಮಾತನಾಡಿ, ನಮ್ಮಲ್ಲಿದ್ದ ಬಸವಶಂಕರ, ರಾಮಸ್ವಾಮಿ ಎಂಬ ಇಬ್ಬರು ಜಿರಾಫೆ ನೋಡಿಕೊಳ್ಳಲು ತರಬೇತಿ ನೀಡಲಾಗಿದೆ ಎಂದರು. 

ಬಬ್ಲಿ ಮತ್ತು ಮೇರಿ ಎಂಬ ಎರಡು ಜಿರಾಫೆಗಳನ್ನು ಮೈಸೂರಿನಿಂದ ಬನ್ನೇರುಘಟ್ಟಕ್ಕೆ ನೀಡುಲು ಅನುಮತಿ
ನೀಡಲಾಗಿತ್ತು. ಆದರೆ ಬಬ್ಲಿ ಜಿರಾಫೆ ಕ್ರಾಲ್‌ ಒಳಗೆ ಬರಲು ಹೆದರಿದ್ದರಿಂದ ಸದ್ಯ ಗೌರಿ ಜಿರಾಫೆ ತರಿಸಿಕೊಳ್ಳ ಲಾಗಿದೆ.
ಕೆಲ ದಿನಗಳ ಬಳಿಕ ಮೇರಿ ಅಥವಾ ಬೇರೊಂದು ಜಿರಾಫೆ ತರಿಸಿಕೊಳ್ಳಲಾಗುವುದು. 
ಗೋಕುಲ್‌, ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next