Advertisement

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

03:32 PM Sep 20, 2024 | Team Udayavani |

ಬೀಜಿಂಗ್: ಚೀನಾದ ಶಾನ್‌ವೇ ಮೃಗಾಲಯಕ್ಕೆ ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ, ಇದೀಗ ಈ ಮೃಗಾಲಯಕ್ಕೆ ಎರಡು ಹೊಸ ಅತಿಥಿಗಳು ಬಂದಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ಪ್ರಚಾರ ಕೂಡ ಮಾಡಿದ್ದಾರೆ. ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ ಹೊಸ ಅತಿಥಿಯನ್ನು ವೀಕ್ಷಣೆ ಮಾಡಿದ್ದಾರೆ ಆದರೆ ಇದನ್ನು ವೀಕ್ಷಣೆ ಮಾಡಿದ ಪ್ರವಾಸಿಗರಿಗೆ ಇದರ ಹಾವಭಾವ ನೋಡಿ ಅದೇನೋ ಅನುಮಾನ ಕಾಡತೊಡಗಿದೆ.

Advertisement

ಹೌದು ಚೀನಾದ ಶಾನ್‌ವೇ ಮೃಗಾಲಯಕ್ಕೆ ಎರಡು ಪಾಂಡಾಗಳನ್ನು ತರಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಭಾರಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದ್ದಾರೆ ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಬಂದಿದ್ದಾರೆ ತಮ್ಮ ಮೊಬೈಲ್ ನಲ್ಲಿ ಪಾಂಡಾದ ಫೋಟೋ ಕ್ಲಿಕ್ಕಿಸಿದ್ದಾರೆ, ಆದರೆ ಅಲ್ಲೊಬ್ಬ ಪ್ರವಾಸಿಗನಿಗೆ ಅಲ್ಲಿರುವ ಪಾಂಡಾದ ಹಾವಭಾವದಲ್ಲಿ ಏನೋ ವ್ಯತ್ಯಾಸ ಕಾಣತೊಡಗಿದೆ. ಇದರಿಂದ ಅನುಮಾನಗೊಂಡ ಆತ ಮೃಗಾಲಯದ ಅಧಿಕಾರಿಗಳ ಬಳಿ ತೆರಳಿ ಪಾಂಡಾದ ಬಗ್ಗೆ ವಿಚಾರಿಸಿದ್ದಾನೆ. ಇದಕ್ಕೆ ಮೃಗಾಲಯದ ಅಧಿಕಾರಿಗಳು ಸಮರ್ಪಕವಾದ ಉತ್ತರವನ್ನು ಕೊಟ್ಟು ಕಳುಹಿಸಿದ್ದಾರೆ.

ಇದಾದ ಬಳಿಕ ಇದೇ ರೀತಿಯ ಅನುಮಾನ ಇನ್ನೋರ್ವ ಪ್ರವಾಸಿಗನಿಗೆ ಕಾಡತೊಡಗಿದೆ ಅಲ್ಲದೆ ಪಾಂಡಾದ ವರ್ತನೆ ನೋಡಿದರೆ ನಾಯಿಗಳು ಮಾಡುವ ವರ್ತನೆಯಂತೆ (ನಾಲಗೆ ಹೊರಗೆ ಹಾಕಿ ಉಸಿರಾಡುವುದು) ಕಂಡಿದೆ, ಇದರಿಂದ ಅನುಮಾನಗೊಂಡ ಪ್ರವಾಸಿಗ ಇತರರಲ್ಲೂ ವಿಷಯ ಪ್ರಸ್ತಾಪಿಸಿದ್ದಾನೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಪಾಂಡಾಗಳು ನಾಯಿಯಂತೆ ಬೌ.. ಬೌ.. ಎಂದು ಸದ್ದು ಮಾಡಿದೆ. ಇದಾದ ಬಳಿಕ ಇದು ಪಾಂಡಾ ಅಲ್ಲ ಬದಲಿಗೆ ನಾಯಿಗೆ ಬಣ್ಣ ಬಳಿದು ಪಾಂಡಾ ಎಂದು ಮೃಗಾಲಯದ ಅಧಿಕಾರಿಗಳು ಮೋಸ ಮಾಡಿರುವ ಸತ್ಯಾಂಶ ಹೊರಬಿದ್ದಿದೆ.

 

Advertisement

ಅಸಲಿಗೆ ಇದು ಉತ್ತರ ಚೀನಾದಿಂದ ಬಂದ ಸ್ಪಿಟ್ಜ್ ತಳಿಯ ನಾಯಿಗಳು ಎನ್ನಲಾಗಿದ್ದು ಇದನ್ನು ತಂದ ಮೃಗಾಲಯದ ಅಧಿಕಾರಿಗಳು ಇದಕ್ಕೆ ಪಾಂಡಾ ರೀತಿ ಬಣ್ಣ ಬಳಿದು ಮೃಗಾಲಯದಲ್ಲಿ ಇರಿಸಿ ಪ್ರವಾಸಿಗರಿಗೆ ಪಾಂಡಾ ಎಂದು ನಂಬಿಸಿ ಮೋಸ ಮಾಡಿದ್ದಾರೆ.

ಮೃಗಾಲಯದ ಅಧಿಕಾರಿಗಳ ಮೋಸ ಬಯಲಿಗೆ ಬರುತ್ತಿದ್ದಂತೆ ಪ್ರವಾಸಿಗರು ತಮ್ಮ ಹಣ ವಾಪಾಸ್ ನೀಡುವಂತೆ ಒತ್ತಾಯಿಸಿದ್ದಾರೆ.

ಸದ್ಯ ಚೀನಾ ಮೃಗಾಲಯದ ಮೋಸದಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next