Advertisement

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

12:38 PM Sep 07, 2024 | Team Udayavani |

ಸಿನಿಮಾ ಎಂಬುದು ದೊಡ್ಡ ಕಲಾ ಪ್ರಪಂಚ, ಇದರ ಹಿಂದೆ ನೂರಾರು ಜನ ಶ್ರಮವಹಿಸುತ್ತಾರೆ. ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಿನಿಮಾರಂಗವನ್ನು ದೂಷಿಸುವುದು ಸರಿಯಲ್ಲ ಎಂದು ನಟ ರಮೇಶ್‌ ಅರವಿಂದ ಹೇಳಿದರು.

Advertisement

ಮೀಟೂ ವಿವಾದ ಹಾಗೂ ಸಿನಿರಂಗದಲ್ಲಿ ಮಹಿಳೆಯರ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದ ಕುರಿತು ತಮ್ಮ ಹೊಸ ಚಿತ್ರ ರಾಮ್‌ ಮುಹೂರ್ತದಲ್ಲಿ ಮಾತನಾಡಿದ ಅವರು, ಕೇವಲ ಚಿತ್ರರಂಗ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸುರಕ್ಷತೆ, ಸಮಾನತೆ ಅವಶ್ಯಕ. ಮೊದಲಿಗೆ ಅವರಿಗೆ ಗೌರವ, ಅವರ ಕೌಶಲ್ಯಕ್ಕೆ ತಕ್ಕಂತೆ ವೇತನ ನೀಡಬೇಕು. ಮೇಲಾಗಿ ಕಾರ್ಯಕ್ಷೇತ್ರದಲ್ಲಿ ಆತ್ಮ ಗೌರವಕ್ಕೆ ಧಕ್ಕೆ ಬರುವಂತೆ ಯಾವುದೇ ಘಟನೆ ನಡೆಯಬಾರದು. ಸಿನಿಮಾ ಸೇರಿದಂತೆ ಅದು ಯಾವುದೇ ಕ್ಷೇತ್ರವಾದರೂ ಸರಿ, ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ಸನ್ನಿವೇಶಗಳು ಎದುರಾದರೆ, ಅದರ ಕುರಿತು ಧ್ವನಿ ಎತ್ತಬೇಕು. ಹೀಗೆ ಯಾರೇ ಧ್ವನಿ ಎತ್ತಿದರೂ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅನ್ಯಾಯ ವಾದವರಿಗೆ ನ್ಯಾಯ ಸಿಗಲೇಬೇಕು. ಸಿನಿಮಾ ಎಂದರೆ ಸೃಜನಶೀಲ ತೆಯ ದೊಡ್ಡ ಕಲೆ. ಒಂದು ಸಿನಿಮಾ ಹಿಂದೆ ನೂರಾರು ಕಲಾವಿದರು, ತಂತ್ರಜ್ಞರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೆಲವರಿಂದ ಆದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ಸಮಂಜಸವಲ್ಲ. ಈ ಶತಮಾನದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ, ಸಮಾನತೆ ಸಿಕ್ಕಿದೆ ಎಂದು ಹೇಳಿದರು.

ಸಹಿ ಜತೆ ಜವಾಬ್ದಾರಿಯೂ ಬೇಕು :

ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ, ಸಮಾನತೆ ಸಿಗಲೇಬೇಕು. ಮನವಿ ಪತ್ರಕ್ಕೆ ಕೇವಲ ಸಹಿ ಮಾಡಿದರಷ್ಟೇ ಸಾಲದು. ಅದರ ಹಿಂದೆ ದೊಡ್ಡ ಜವಾಬ್ದಾರಿ ಇರುತ್ತೆ ಎಂದು ನಟ ರಕ್ಷಿತ್‌ ಶೆಟ್ಟಿ ಹೇಳಿದರು.

ಫೈರ್‌ ಸಂಘ ಸರ್ಕಾರಕ್ಕೆ ಮನವಿ ನೀಡಿದ ಕುರಿತು ಮಾತನಾಡಿದ ಅವರು, ಈ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮನವಿ ಪತ್ರಕ್ಕೆ ಸಹಿ ಹಾಕುವುದು ದೊಡ್ಡ ವಿಷಯವಲ್ಲ. ಅಲ್ಲೊಂದು ಜವಾಬ್ದಾರಿ ಇರುತ್ತೆ. ಸಾಕಷ್ಟು ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ. ನಾನು ಸಹಿ ಹಾಕಿ ಮತ್ತೆ ಸಿನಿಮಾದಲ್ಲಿ ಬಿಝಿಯಾದರೆ ಅದಕ್ಕೆ ನ್ಯಾಯ ಕೊಡಲು ಆಗುವುದಿಲ್ಲ. ಫೈರ್‌ ಸಂಘದ ಉದ್ದೇಶ ಚೆನ್ನಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next