ರಾಮನಗರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಅನಾವರಣಗೊಳ್ಳುತ್ತಿದ್ದು, ದೇಶದ ವಿವಿಧೆಡೆಯಿಂದ ಉಡುಗೊರೆಗಳನ್ನು ಕಳುಹಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ಮೂಲ ಬುಡಕಟ್ಟು ಸಮುದಾಯವಾಗಿರುವ ಇರುಳಿಗರು ಬಿದಿರಿನ ಪಲ್ಲಕ್ಕಿಯನ್ನು ಉಡುಗೊರೆ ಯಾಗಿ ನೀಡುತ್ತಿದ್ದಾರೆ. ಶ್ರೀರಾಮ ದೇವರ ಉತ್ಸವದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲು ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್ ಸೂಚನೆಯಂತೆ ಮಾಗಡಿ ತಾಲೂಕಿನ ಜೋಡು ಕಟ್ಟೆ ಗ್ರಾಮದ ಇರುಳಿಗ ಆದಿವಾಸಿಗಳು ಬಿದಿರಿನ ಪಲ್ಲಕ್ಕಿಯನ್ನು ಸಿದ್ಧಪಡಿಸಿದ್ದು, 15 ದಿನಗಳ ಕಾಲ 5 ಮಂದಿ ಸಿದ್ಧಪಡಿಸಿರುವ ಬಿದಿರು ಪಲ್ಲಕ್ಕಿಯನ್ನು ಅಯೋಧ್ಯೆಗೆ ಕಳುಹಿಸಲಾಗಿದೆ.
48 ದಿನ ಪೂಜೆಯಲ್ಲಿ ಬಳಕೆ
ರಾಮ ಮಂದಿರ ದಲ್ಲಿ ಶ್ರೀರಾಮ ದೇವರ ಪ್ರತಿಮೆ ಪ್ರತಿ ಷ್ಠಾಪನೆಯಾದ ಬಳಿಕ 48 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ.ಈ ಪೂಜೆ ಯ ವೇಳೆ ಪ್ರತಿದಿನ ಸೀತಾರಾಮರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಿದ್ದು, ಈ ಮೆರವಣಿಗೆ ಕಾರ್ಯಕ್ಕೆ ಬಳಕೆ ಮಾಡಲು ಬಿದಿರಿನ ಪಲ್ಲಕ್ಕಿ ನಿರ್ಮಿಸಲಾಗಿದೆ. 48 ದಿನದ ಉತ್ಸವದಲ್ಲಿ ಬಿದಿರಿನ ಪಲ್ಲಕ್ಕಿ ಬಳಕೆಯಾಗಲಿದೆ.
ಬಿದಿರಿನ ಪಲ್ಲಕ್ಕಿ ನಿರ್ಮಾಣದಲ್ಲಿ ಇರುಳಿಗ ಸಮುದಾಯದವರು ಪರಿಣತರಾಗಿರುವ ಕಾರಣ ಈ ಜವಾಬ್ದಾರಿಯನ್ನು ಇವರಿಗೆ ವಹಿಸ ಲಾಗಿದೆ. ಸುಮಾರು 20ಕ್ಕೂ ಹೆಚ್ಚು ಬಿದಿರಿನ ಬೊಂಬುಗಳನ್ನು ಬಳಕೆ ಮಾಡಿ ಪಲ್ಲಕ್ಕಿ ಸಿದ್ಧಪಡಿಸಿದ್ದು, ಇದನ್ನು ಇರುಳಿಗ ಸಮು ದಾಯದಲ್ಲಿ ಪರಿಣತರಾದ ಮಹ ದೇವಯ್ಯ, ರಾಜು, ಪುಟ್ಟಪ್ಪ, ರಾಮ ಮತ್ತು ಬಾಲರಾಜು ಎಂಬವರು ಸಿದ್ಧಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮದಲ್ಲಿ ರೈತ ಬಸನಗೌಡ ಜಂತ್ಲಿ ಅವರ ಜಮೀನಿನಲ್ಲಿ ಖಾಸಗಿ ಕಂಪೆನಿಯು ಮೆಕ್ಕೆಜೋಳದ ಇಳುವರಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಿಸಿ ಗಮನ ಸೆಳೆದಿದೆ.