ಇಂದಿರಾಪುರಂ(ಲಕ್ನೋ): ಕುಖ್ಯಾತ ಗ್ಯಾಂಗ್ ಸ್ಟರ್, ಭೂ ಮಾಫಿಯಾದ ಕಿಂಗ್ ಪಿನ್ ಸುಭಾಶ್ ಯಾದವ್ ನಿವಾಸದ ಮೇಲೆ ಗಾಜಿಯಾಬಾದ್ ಪೊಲೀಸರು ಶನಿವಾರ(ಸೆಪ್ಟೆಂಬರ್ 19, 2020) ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ವರದಿ ತಿಳಿಸಿದೆ.
ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಹಲವಾರು ಆರೋಪಗಳಲ್ಲಿ ಯಾದವ್ ಶಾಮೀಲಾಗಿರುವುದಾಗಿ ವರದಿ ಹೇಳಿದೆ. ದಾಳಿಯಲ್ಲಿ ಸುಭಾಶ್ ಯಾದವ್ ಗೆ ಸೇರಿದ್ದ 1.5ರಿಂದ 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಾಜಿಯಾಬಾದ್ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಕಾರುಗಳ ಸೇರಿದಂತೆ ಚರ ಮತ್ತು ಸ್ಥಿರಾಸ್ತಿ ಸೇರಿದೆ.
ಇಂದಿರಾಪುರಂ ಇನ್ಸ್ ಪೆಕ್ಟರ್ ಅವರು ಕ್ರಿಮಿನಲ್ ಕಾಯ್ದೆಯನ್ವಯ ಸುಭಾಶ್ ಯಾದವ್ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ: ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!
ಯಾದವ್ ವಿರುದ್ಧ ದೆಹಲಿ-ಎನ್ ಸಿಆರ್ ಪ್ರದೇಶದ ಹಲವಾರು ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಅಧಿಕ ಎಫ್ ಐಆರ್ ದಾಖಲಾಗಿರುವುದಾಗಿ ವರದಿ ತಿಳಿಸಿದೆ. ಸುಭಾಶ್ ಯಾದವ್ ಮತ್ತು ಪುತ್ರ ಮೋನಿಲ್ ಯಾದವ್ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.