Advertisement
ಜೂ. 4ರಂದು ಸಂಜೆ ಘಾಟ್ಕೊàಪರ್ ಪಶ್ಚಿಮದ ಅಸಲ್ಪಾದ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ 21ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ನಡೆದ ದಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ದೈವ ದೇವರ ಮೇಲೆ ಅಪಾರ ಭಕ್ತಿ-ನಂಬಿಕೆ ಇರುವುದರಿಂದಲೇ ಎಲ್ಲಿ ತುಳುನಾಡ ಜನತೆ ನೆಲೆಸುತ್ತಾರೋ ಅಲ್ಲೂ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಿ ಭಕ್ತಿಯನ್ನು ವೃದ್ಧಿಸಿ ಅಭಿವೃದ್ಧಿಯನ್ನು ಕಾಣುತ್ತಿದಾxರೆ. ಆ ಮೂಲಕ ಸಾಧನೆಯನ್ನು ಮಾಡುತ್ತಾ ಜೀವನ ಪಾವನಗೊಳಿಸುತ್ತಾರೆ. ಮಾನಸಿಕ ನೆಮ್ಮದಿ ಹಾಗೂ ಆತ್ಮವಿಶ್ವಾಸದ ವೃದ್ಧಿಗೆ ಮನುಷ್ಯನಿಗೆ ದೇವಸ್ಥಾನಗಳ ಅಗತ್ಯವಿದೆ. ಅಂತಹ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. ಮಂದಿರದ ಯೋಜಿತ ಕಾರ್ಯಯೋಜನೆಗಳು ಸಫಲತೆಯನ್ನು ಕಾಣಲಿ ಎಂದು ಹಾರೈಸಿದರು.
Related Articles
Advertisement
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಪಿ. ಕೋಟ್ಯಾನ್, ಉಪಾಧ್ಯಕ್ಷ ಸತೀಶ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಪಿ. ಕೋಟ್ಯಾನ್, ಕೋಶಾಧಿಕಾರಿ ವಿಕ್ರಂ ಸುವರ್ಣ, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಧ್ಯಕ್ಷ ಕರ್ನೂರು ಮೋಹನ್ ರೈ, ಸಂಚಾಲಕ ಸುನೀಲ್ ಅಮೀನ್ ಹಾಗೂ ಮಹಿಳಾ ಮಂಡಳಿ, ಪೂಜಾ ಸಮಿತಿ ಮತ್ತು ಶ್ರೀ ಗೀತಾಂಬಿಕಾ ಭಜನಾ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. 21ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಜೂ. 8ರಂದು ಸಂಜೆ 6ರಿಂದ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ ಗಂಗಾಧರ ಪಯ್ಯಡೆ ಪ್ರಾಯೋಜಕತ್ವದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಜಾಂಬಾವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಶತಮಾನದ ಹಿಂದೆ ಮುಂಂಬಯಿ ಸೇರಿದ ನಮ್ಮ ಪೂರ್ವಜರು ಒಳ್ಳೆಯ ಸದುದ್ದೇಶದಿಂದ ದೇವಸ್ಥಾನಗಳನ್ನು, ಧಾರ್ಮಿಕ ಕೇಂದ್ರಗಳನ್ನು ಕಟ್ಟಿ ಬೆಳೆಸಿದ್ದಾರೆ. ಶ್ರೀ ಗೀತಾಂಬಿಕಾ ಕ್ಷೇತ್ರಕ್ಕೆ ಸುಮಾರು ಐದೂವರೆ ದಶಕಗಳ ಇತಿಹಾಸವಿದೆ. ದೂರದೃಷ್ಟಿತ್ವವುಳ್ಳ ನಮ್ಮ ಹಿರಿಯರು ಸಂಘಟಿತರಾಗಿ ನಮ್ಮ ಧಾರ್ಮಿಕ ಪರಂಪರೆ, ಕಲೆ, ಸಂಸ್ಕೃತಿ ಉಳಿದು ಬೆಳೆಯಬೇಕೆಂಬ ಉದ್ದೇಶದಿಂದ ಶ್ರೀ ಗೀತಾಂಬಿಕೆಯ ಆರಾಧನೆಯೊಂದಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿದಾxರೆ. ಈ ಪರಿಸರದಲ್ಲಿ ಧಾರ್ಮಿಕ ಕೇಂದ್ರದೊಂದಿಗೆ ಯಕ್ಷಗಾನ ಮಂಡಳಿ, ಶಾಲೆಯನ್ನು ನಮ್ಮ ಹಿರಿಯರು ಕಟ್ಟಿ ಬೆಳೆಸಿ ಸಮಾಜಕ್ಕೆ ನೀಡಿದ್ದಾರೆ. ಅಂದು ನಮ್ಮ ಹಿರಿಯರು ಕಟ್ಟಿ ಬೆಳೆಸಿದ ದೇವಸ್ಥಾನಗಳು ಜೀರ್ಣಾವಸ್ಥೆಯಲ್ಲಿದ್ದಾಗ ಅದನ್ನು ದುರಸ್ತಿ ಇಲ್ಲವೇ ಜೀಣೊìàದ್ಧಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಕೆಲವೊಂದು ಅಭಿವೃದ್ಧಿಪರ ಕಾರ್ಯಗಳು ನಡೆಯಲಿವೆ. ಅದಕ್ಕೆ ಭಕ್ತರೆಲ್ಲರೂ ಸಹಕರಿಸಿ ಶ್ರೀ ಗೀತಾಂಬಿಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು-ಕಡಂದಲೆ ಸುರೇಶ್ ಭಂಡಾರಿ
ಅಧ್ಯಕ್ಷರು , ಶ್ರೀ ಗೀತಾಂಬಿಕಾ ಸೇವಾ ಸಮಿತಿ ಘಾಟ್‌ಕೋಪರ್ ಚಿತ್ರ-ವರದಿ : ರೊನಿಡಾ ಮುಂಬಯಿ.