Advertisement
ವೇದಮೂರ್ತಿ ಶ್ರೀ ಶಂಕರನಾರಾ ಯಣ ತಂತ್ರಿ ಡೊಂಬಿವಲಿ ಇವರ ನೇತೃತ್ವದಲ್ಲಿ ಉತ್ಸವವು ಜರಗಲಿದ್ದು, ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಅದ್ಯ ಗಣಯಾಗ, ತೋರಣ ಮುಹೂರ್ತ, ಪೂರ್ವಾಹ್ನ 9.30ರಿಂದ ಪರಿವಾರ ದೇವತೆಗಳ ನವಕ ಕಲಶ ಹಾಗೂ ದೇವಿಗೆ 25 ಕಲಶದ ಕಲಶಪೂರಣ, ಪಂಚಾ ಮೃತ ಅಭಿಷೇಕ, ಪರಿವಾರ ದೇವತೆಗಳ ಅಭಿಷೇಕ, ದೇವಿಗೆ ಪ್ರಧಾನ ಹೋಮ, ಪಧಾನ ಕಲಶಾ ಭಿಷೇಕ, ಮಧ್ಯಾಹ್ನ 12ರಿಂದ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
Related Articles
ಕಾರಣಿಕ ಕ್ಷೇತ್ರ ಎಂದೇ ಬಿಂಬಿತ ಗೊಂಡಿರುವ ಶ್ರೀ ಗೀತಾಂಬಿಕೆಯ ಸಾನ್ನಿಧ್ಯದಲ್ಲಿ ಪ್ರತಿದಿನ ತ್ರಿಕಾಲ ಪೂಜೆ ಬ್ರಾಹ್ಮಣೋತ್ತರಿಂದ ನಡೆದು ಬಂದಿದೆ. ಪ್ರತಿ ಶುಕ್ರವಾರ ಸಂಜೆ ಭಜನೆ, ಮಹಾ ಪೂಜೆ, ಹೂವಿನ ಪೂಜೆ ಹಾಗೂ ದೇವಿ ದರ್ಶನ ನಡೆಯುತ್ತಿದೆ. ಮಂಗಳ ವಾರ ನಾಗ ದೇವರಿಗೆ ತನು ತಂಬಿಲ ಪೂಜೆ ಬೆಳಗ್ಗಿನ ಸಮಯದಲ್ಲಿ ನೆರವೇರುತ್ತಿದೆ. ಭಕ್ತಾದಿಗಳ ಅನುಕೂ ಲತೆ ಪ್ರಕಾರ ದೇವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಮಹಾ ಪೂಜೆ, ನವಗ್ರಹ ಶಾಂತಿ ಹಾಗೂ ಇತರ ಪೂಜೆಗಳು ನಡೆಯುತ್ತಿದೆ. ವಿಶೇಷ ವಾಗಿ ಬ್ರಹ್ಮಕಲಶೊತ್ಸವದ ವರ್ಷಾವಧಿ ಪೂಜೆ, ನಾಗರ ಪಂಚಮಿಯಂದು ಮುಂಜಾನೆ ನಾಗಪೂಜೆ ಹಾಗೂ ಸಂಧ್ಯಾಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ವಾರ್ಷಿಕ ಪೂಜೆಯನ್ನು ಆಚರಿಸಲಾಗುತ್ತಿದೆ. 1965ರಲ್ಲಿ ಮಂದಿರದಲ್ಲಿ ಮೂಳೂರು ಸಂಜೀವ ಕಾಂಚನ ಹಾಗೂ ಇತರರ ಸಹಕಾರದಿಂದ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಮಂದಿರದ ಇನ್ನೊಂದು ಅಂಗವಾಗಿ ಸ್ಥಾಪನೆಗೊಂಡಿದೆ ಮಂಡ ಳಿಯು ಮುಂಬಯಿಯ ಹಲವು ಭಾಗಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಶ್ರೀ ಗೀತಾಂಬಿಕಾ ಮಂದಿರದ ಹೆಸರು ಎಲ್ಲಾ ಕಡೆ ಪಸರಿಸುವಲ್ಲಿ ಮಾದರಿ ಯಾಗಿದೆ.
Advertisement
ಕಾರ್ಯಕಾರಿ ಸಮಿತಿ ಸದ್ಯ ಮಂದಿರದ ಅಧ್ಯಕ್ಷ ಸ್ಥಾನವನ್ನು ಊರಿನ ಹಾಗೂ ಮುಂಬಯಿಯ ಚಿರಪರಿಚಿತ ಕಡಂದಲೆ ಸುರೇಶ್ ಭಂಡಾರಿ ಅಲಂಕರಿಸಿದರೆ, ದಿವ್ಯ ಸಾಗರ್ ಸಮೂಹದ ನಿರ್ದೇಶಕ ಮುದ್ರಾಡಿ ದಿವಾಕರ್ ಶೆಟ್ಟಿ ಅವರು ಗೌರವಾಧ್ಯಕ್ಷರಾಗಿ, ಧರ್ಮಪಾಲ್ ಎಸ್. ಕೊಟ್ಯಾನ್ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ವಿಕ್ರಮ್ ಸುವರ್ಣ ಅವರು ಗೌರವ ಕೋಶಾ ಧಿಕಾರಿಯಾಗಿ, ಸಿಎ ಬಿಪಿನ್ ಶೆಟ್ಟಿ ಅವರು ಆಂತರಿಕ ಲೆಕ್ಕಪತ್ರ ಪರಿಶೋಧಕರಾಗಿ, ಸುರೇಶ್ ಕೋಟ್ಯಾನ್ ಇವರು ಕಾರ್ಯಾಧ್ಯಕ್ಷರಾಗಿ, ಸತೀಶ್ ಶೆಟ್ಟಿ ಮತ್ತು ಇರುವೈಲು ದಾಮೋದರ್ ಶೆಟ್ಟಿ ಇವರು ಉಪಾಧ್ಯಕ್ಷರುಗಳಾಗಿ, ಜಯರಾಮ್ ರೈ ಇವರು ಉಪ ಗೌರವಾಧ್ಯಕ್ಷರಾಗಿ, ವಿಠಲ್ ಶೆಟ್ಟಿ, ಬೆಳುವಾಯಿ ಮತ್ತು ಸಂಜೀವ ಪೂಜಾರಿ ಇವರು ಉಪ ಕಾರ್ಯಾಧ್ಯಕ್ಷರಾಗಿ ಹಾಗೂ ನಿತಿನ್ ಜಾಧವ್ ಇವರು ಜತೆ ಕೋಶಾ ಧಿಕಾರಿಯಾಗಿ ಶ್ರಮಿಸುತ್ತಿ ದ್ದಾರೆ. ಕರ್ಮಾರು ಮೋಹನ್ ರೈ, ಪ್ರಕಾಶ್ ಶೆಟ್ಟಿ ಸುರತ್ಕಲ್, ಕುಕ್ಕುಂದೂರು ಕರುಣಾಕರ ಶೆಟ್ಟಿ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ. ಉದ್ಯಮಿ ಮಾಧವ್ ಶೆಟ್ಟಿ ಆಡಳಿತ ಸಮಿತಿಗೆ ಮಾರ್ಗದರ್ಶಕರಾಗಿ ಸಹಕರಿಸುತ್ತಿದ್ದಾರೆ. ಅವ್ಯಾಹತವಾಗಿ ದೈನಂದಿನ ತ್ರಿಕಾಲ ಪೂಜೆಯನ್ನು ಮಂದಿರದ ಪ್ರಧಾನ ಅರ್ಚಕ ರಘುಪತಿ ಭಟ್ ನೆರವೇರಿಸುತ್ತಿದ್ದಾರೆ. ಮೇಳದ ಉಸ್ತುವಾರಿ
ಸದ್ಯ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಮೂಳೂರು ಸಂಜೀವ ಕಾಂಚನ್, ಗೌರವಾಧ್ಯಕ್ಷ ರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಅಧ್ಯಕ್ಷರಾಗಿ ಕರ್ನೂರು ಮೋಹನ್ ರೈ, ಕಾರ್ಯಾಧ್ಯಕ್ಷರಾಗಿ ಇರುವೈಲು ದಾಮೋದರ ಶೆಟ್ಟಿ, ಕಾರ್ಯದರ್ಶಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಸಂಚಾ ಲಕರಾಗಿ ಸುನಿಲ್ ಅಮೀನ್, ವ್ಯವಸ್ಥಾಪಕರಾಗಿ ಪ್ರಭಾಕರ್ ಕುಂದರ್ ಹಾಗೂ ಗೋವಿಂದ ಸಫಲಿಗ, ಸಲಹೆಗಾರರಾಗಿ ಮಾನಾಡಿ ಸದಾನಂದ ಶೆಟ್ಟಿ ಮತ್ತು ಭೋಜ ಬಂಗೇರ, ಕೆ. ಕೆ. ದೇವಾಡಿಗ ಇವರು ಸಹಕರಿಸುತ್ತಿದ್ದಾರೆ. ಶಾಶ್ವತ ಪೂಜೆ
ಮಂದಿರದಲ್ಲಿ ಶಾಶ್ವತ ಪೂಜೆಯು ನಡೆಯುತ್ತಿದ್ದು ಆಸಕ್ತಿ ಭಕ್ತಾದಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ ಆ ಪೂಜೆಯನ್ನು ಅವರು ಹೇಳಿದ ದಿನಾಂಕದಲ್ಲಿ ಮಾಡಲಾಗುತ್ತಿದೆ. ಆಯಾ ದಿನದ ಪೂಜೆಯನ್ನು ಬರೆದವರು ಸಾಯಂಕಾಲ ಅಥವಾ ಬೆಳಗ್ಗೆ ಬಂದು ಪ್ರಸಾದ ಪಡಕೊಳ್ಳಬಹುದು ಅಥವಾ ಬರಲು ಅನನುಕೂಲವಿದ್ದಲ್ಲಿ ಗಂಧ ಪ್ರಸಾದವನ್ನು ಭಕ್ತರ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಚಿತ್ರ/ಮಾಹಿತಿ: ರೋನ್ಸ್ ಬಂಟ್ವಾಳ್