Advertisement

ಘಾಟ್‌ಕೋಪರ್‌ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ

04:16 PM May 02, 2019 | Team Udayavani |

ಮುಂಬಯಿ: ಘಾಟ್‌ಕೋಪರ್‌ ಪಂತ್‌ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ಮೇ 1ರಂದು ಪ್ರಾರಂಭಗೊಂಡಿದ್ದು, ಮೇ 3ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಪ್ರತೀ ದಿನ ಮಹಾಪೂಜೆ, ಮಂಗಳಾರತಿ, ಚಂಡಿಕಾ ಹೋಮ, ದುರ್ಗಾಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ, ಪ್ರಸಾದ ವಿತರಣೆ ನಡೆಯಲಿದೆ. ಮೇ 3 ರಂದು ಭಜನಾ ಕಾರ್ಯಕ್ರಮ, ರಾತ್ರಿ ಭಂಡಾರ, ಮಹಾ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ.

ಉತ್ಸವದ ಅಂಗವಾಗಿ ಶೋಭಾಯಾತ್ರೆಯು ನಡೆಯಲಿದ್ದು, ಊರಿನ ಕಲಾವಿದರಿಂದ ಹುಲಿವೇಷ ಸೇರಿದಂತೆ ವಿವಿಧ ಜಾನಪದ ನೃತ್ಯಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಪ್ರಧಾನ ಅರ್ಚಕ ಗುರು ಭಟ್‌ ಅವರ ಮುಂದಾಳತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗುತ್ತಿವೆ. ಸ್ಥಳೀಯ ನಗರ ಸೇವಕಿ ರಾಖೀ ಜಾಧವ್‌ ಸಾಲ್ಯಾನ್‌, ಸತೀಶ್‌ ಸಾಲ್ಯಾನ್‌, ಶಶಿಪೂಜಾರಿ, ನವೀನ್‌ ಶೆಟ್ಟಿ ಇನ್ನಬಾಳಿಕೆ, ಮೋಹನ್‌ ಪಾಲನ್‌ ಮೊದಲಾದವರ ಸಹಕಾರದೊಂದಿಗೆ ಉತ್ಸವವು ಅದ್ದೂರಿಯಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next