Advertisement
1955ರಲ್ಲಿ ತೆರೆಕಂಡಿದ್ದ ಯರಗುಡಿಪಾಟಿ ವರದಾ ರಾವ್ ಅವರ ನಿರ್ದೇಶನದ ಭಾಗ್ಯಚಕ್ರ ಸಿನಿಮಾದಲ್ಲಿ “ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ” ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆಯಾಗಿದೆ. ಬಳಿಕ ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ(ವೀರಕೇಸರಿ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ(ಸತ್ಯಹರಿಶ್ಚಂದ್ರ), ಶಿವಶಂಕರಿ ಶಿವಾನಂದನ ಲಹರಿ, ಮೆಲ್ಲುಸಿರೇ ಸವಿ ಗಾನ, ಎದೆ ಝಲ್ಲನೆ ಹೂವಿನ ಬಾಣ(ವೀರಕೇಸರಿ) ಓಹಿಲೇಶ್ವರ ಸಿನಿಮಾದ ಈ ದೇಹದಿಂದ ದೂರನಾದೆ ಏಕೆ ಆತ್ಮನೆ..ಹೀಗೆ ಘಂಟಸಾಲ ಅವರ ಕಂಠಸಿರಿಯಲ್ಲಿ ನಮ್ಮನ್ನು ಇಂದಿಗೂ ಕಾಡುವ ಹಾಡುಗಳು ಹತ್ತು ಹಲವು!
Related Articles
Advertisement
ಭಿಕ್ಷೆ ಬೇಡಿ ಗಾನಗಂಧರ್ವ ಪಟ್ಟವೇರಿದ್ದ ಘಂಟಸಾಲ !
ಹಿಂದುಗಳಿಗೆ ತಿರುಮಲ ವೆಂಕಟೇಶ್ವರ ದೇವರು..ಅದೇ ರೀತಿ ದೇವರ ಹೆಸರನ್ನೇ ಇಟ್ಟುಕೊಂಡಿದ್ದ ವೆಂಕಟೇಶ್ವರ ರಾವ್ ಅಲಿಯಾಸ್ ಘಂಟಸಾಲ! ತೆಲುಗು ಮಾತನಾಡುವ ಸಂಗೀತ ಪ್ರಿಯರು, ಅದರಲ್ಲೂ ಈಗಿನ ಹೊಸ ಪೀಳಿಗೆಯ ಹಿನ್ನೆಲೆ ಗಾಯಕರು, ಸಂಗೀತಗಾರರಿಗೆ ಘಂಟಸಾಲ ಸಂಗೀತದ ದೇವರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಸಂಗೀತ ಲೋಕವನ್ನಾಳಿದ್ದ ಘಂಟಸಾಲ ಇಷ್ಟೆಲ್ಲಾ ಹೆಸರು ಸಂಪಾದಿಸಲು ಪಟ್ಟ ಪಾಡು ಹೇಗಿತ್ತು ಗೊತ್ತಾ?
ವೆಂಕಟೇಶ್ವರ ರಾವ್ ಅವರ ಜೀವನಗಾಥೆ ಯಾವುದೇ ಕಾದಂಬರಿಗಿಂತ ಹೆಚ್ಚು ರೋಚಕವಾಗಿದೆ. 1922ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡಾ ತಾಲೂಕಿನ ಚೌಟಪಲ್ಲಿ ಗ್ರಾಮದಲ್ಲಿ ಜನಿಸಿದ್ದರು. ಆದರೆ ಚೌಟಪಲ್ಲಿಗೂ, ಸಮೀಪದ ಘಂಟಸಾಲ ಎಂಬ ಊರಿಗೂ ಯಾವುದೇ ಸಂಬಂಧವಿಲ್ಲವಂತೆ. ಹಿರಿಯರು ಇದ್ದರು ಎಂಬ ಕಾರಣಕ್ಕೆ ಘಂಟಸಾಲ ಎಂಬ ಹೆಸರನ್ನು ಇಟ್ಟಿದ್ದರಂತೆ. ತಂದೆ ಸೂರ್ಯನಾರಾಯಣ ರಾವ್ ಕೂಡಾ ಪ್ರಸಿದ್ಧ ಗಾಯಕರಾಗಿದ್ದರು. ಎಳೆವೆಯಲ್ಲಿಯೇ ವೆಂಕಟೇಶ್ವರ ಅವರು ತಂದೆ ಜೊತೆ ಹಾಡುವ ಅವಕಾಶ ಸಿಕ್ಕಿತ್ತು. ಇದರಿಂದಾಗಿ ಅವರ ಸಂಗೀತಾಸಕ್ತಿಗೆ ಪ್ರೋತ್ಸಾಹ ಸಿಕ್ಕಂತಾಗಿತ್ತು. ಆದರೆ ವಿಧಿ ವಿಪರ್ಯಾಸ ವೆಂಕಟೇಶ್ವರ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡುಬಿಟ್ಟಿದ್ದರು! ತದನಂತರ ಚಿಕ್ಕಪ್ಪನ ಜೊತೆ ವೆಂಕಟೇಶ್ವರ ದಿನ ಕಳೆಯತೊಡಗಿದ್ದರು.
ಏತನ್ಮಧ್ಯೆ ಪುಟ್ಟ ಬಾಲಕ ವೆಂಕಟೇಶ್ವರನಿಗೆ ಸಂಗೀತದ ಮೇಲಿನ ಅದಮ್ಯ ಪ್ರೀತಿ, ಆಸಕ್ತಿ ದಿನೇ, ದಿನೇ ಹೆಚ್ಚಾಗತೊಡಗಿತ್ತು. ತಾನು ಸಂಗೀತಗಾರನಾಗಲೇಬೇಕೆಂಬ ಹಠಕ್ಕೆ ಬಿದ್ದ ವೆಂಕಟೇಶ್ವರ 11ನೇ ವಯಸ್ಸಿಗೆ ಚಿಕ್ಕಪ್ಪನ ಮನೆಯಿಂದ ಓಡಿ ಹೋಗಿಬಿಟ್ಟಿದ್ದರು. ನೇರ ವಿಜಯನಗರಂಗೆ ಬಂದಿದ್ದ ಅವರು ಮಹಾರಾಜ ಸಂಗೀತ ಮತ್ತು ನೃತ್ಯಕಲಾ ಕಾಲೇಜಿಗೆ ಸೇರಿಕೊಂಡುಬಿಟ್ಟಿದ್ದರಂತೆ!
ಅಂದ ಹಾಗೆ ಕೈಯಲ್ಲಿ ಕಾಸಿಲ್ಲದೆ ಬದುಕೋದು ಹೇಗೆ? ಸಂಗೀತ ಶಾಲೆಗೆ ಫೀಸ್ ಕಟ್ಟುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಬೀದಿಯಲ್ಲಿ ಸಂಗೀತ ಹೇಳುತ್ತ ಭಿಕ್ಷೆ ಬೇಡುತ್ತಾ, ವಾರಾನ್ನ, ಭಿಕ್ಷಾನ್ನಗಳ ಮೊರೆ ಹೋಗಿದ್ದರಂತೆ! ಇಂತಹ ಕಷ್ಟದ ನಡುವೆಯೂ ಸಂಗೀತ ಕಲಿಯುವುದನ್ನು ಘಂಟಸಾಲ ಮುಂದುವರಿಸಿದ್ದರು! ಕೊನೆಗೆ ಪ್ರಾಂಶುಪಾಲರಾದ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರನ್ನು ಭೇಟಿ ಮಾಡುವಲ್ಲಿ ಯಶಸ್ವಿಯಾಗಿಬಿಟ್ಟಿದ್ದರು. ತದನಂತರ ಸಂಗೀತ ಕಾಲೇಜಿಗೆ ಪ್ರವೇಶ ಪಡೆದಿದ್ದರಂತೆ! ಕಾಲೇಜಿನಲ್ಲಿ ಸಂಗೀತ ವಿದ್ವಾನ್ ಪದವಿ ಪಡೆದ ನಂತರ ಘಂಟಸಾಲ ಅವರಿಗೆ ಕೆಲಕಾಲ ಆಕಾಶವಾಣಿಯಲ್ಲಿ ಹಾಡುವ ಅವಕಾಶ ದೊರಕಿತ್ತು. ಆಲ್ ಇಂಡಿಯಾ ರೇಡಿಯೋ ಮೂಲಕ ಅವರು ಅದಾಗಲೇ ಜನಮನ ಗೆದ್ದುಬಿಟ್ಟಿದ್ದರು. ಆದರೆ ಎಚ್ ಎಂವಿ ಸಂಸ್ಥೆ ಘಂಟಸಾಲ ಅವರ ಧ್ವನಿ ಸರಿಯಿಲ್ಲ ಎಂದು ಹೇಳಿ ತಿರಸ್ಕರಿಸಿತ್ತು!
ಬದುಕಿನ ಜಂಜಾಟಗಳ ನಡುವೆಯೇ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಗೆ ಧುಮುಕಿದ್ದರು. ಬ್ರಿಟಿಷರ ಕೈಗೆ ಸೆರೆ ಸಿಕ್ಕ ಯುವಕ ಘಂಟಸಾಲ ಅವರು ಬಳ್ಳಾರಿಯ(ಅಂದು ಆಂಧ್ರಪ್ರದೇಶದ ಭಾಗವಾಗಿತ್ತು) ಜೈಲಿನಲ್ಲಿ 18 ತಿಂಗಳು ಕಾಲ ಜೈಲುವಾಸ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಘಂಟಸಾಲ ಅವರ ಬದುಕಿನಲ್ಲೊಂದು ತಿರುವು ಸಿಕ್ಕಂತಾಗಿತ್ತು. ಹೌದು ಆ ಕಾಲದ ಖ್ಯಾತ ಗಾಯಕ ಸಾಮುದ್ರಾಲಾ ರಾಘವಾಚಾರ್ಯ ಅವರು ಘಂಟಸಾಲ ಅವರ ಸಂಗೀತದ ಮಾಧುರ್ಯ, ಪ್ರತಿಭೆಯನ್ನು ಗುರುತಿಸಿ ಸಿನಿಮಾ ರಂಗಕ್ಕೆ ಪರಿಚಯಿಸಿಕೊಟ್ಟಿದ್ದರು! ಅದಕ್ಕೆ ಕಾರಣವಾಗಿದ್ದು ಪತ್ನಿ ಸಾವಿತ್ರಿ, ಯಾಕೆಂದರೆ ಸಾಮುದ್ರಲಾ ಅವರ ಊರು ಪೆಡಾಪುಲಿವಾರ್ರೂ.(ಘಂಟಸಾಲ, ಸಾವಿತ್ರಿ ದಂಪತಿಗೆ ನಾಲ್ಕು ಹೆಣ್ಣು, ನಾಲ್ಕು ಗಂಡು ಮಕ್ಕಳು).