Advertisement
ಫೆ. 28ರಂದು ಸಂಜೆ ಘನ್ಸೋಲಿ ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಸಂಸ್ಥೆಯ 16ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಈ ಕ್ಷೇತ್ರದ ಅಧ್ಯಕ್ಷರ ಘನ ನೇತೃತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಎಲ್ಲರೂ ಸಂಘಟಿತರಾಗಿ ದುಡಿಯು ತ್ತಿರುವುದರಿಂದಲೇ ಈ ಕ್ಷೇತ್ರ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದೆ. ಅಧ್ಯಕ್ಷರಲ್ಲಿ ಬಂಗಾರದ ವರ್ಚಸಿದ್ದು, ಯಾವುದೇ ಚಂಚಲತೆಯನ್ನು ಹೊಂದದೆ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅವರ ಆದರ್ಶ ಗುಣಗಳಿಂದಲೇ ಅವರು ಕೈಹಿಡಿದ ಕಾರ್ಯ ಯಶಸ್ವಿಯಾಗುತ್ತಿದೆ. ಅವರ ಸತತ ಪ್ರಯತ್ನದಿಂದಲೇ ನಮಗೆ ಜಾಗ ದೊರೆತಿದೆ. ಅವರ ಮುಂದಿನ ಕನಸಿನ ಯೋಜನೆಯಾದ ಸಭಾಭವನ ನಿರ್ಮಾಣ ಕಾರ್ಯ ಖಂಡಿತವಾಗಿಯೂ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶ ಯವಿಲ್ಲ. ಅದಕ್ಕೆ ದಾನಿಗಳ ಸಹಕಾರ ಅಗತ್ಯವಿದೆ ಎಂದರು.
Related Articles
Advertisement
ಇನ್ನೋರ್ವ ಅತಿಥಿ ಸುರೇಶ್ ಜಿ. ಶೆಟ್ಟಿ ಮಾತನಾಡಿ ಅಣ್ಣಿ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ಈ ಕ್ಷೇತ್ರವ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿ ನಿರಂತರ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ನಡೆಯುತ್ತಾ ಇದೆ. ಮುಂದಿನ ಯೋಜನೆಗೆ ನಾವೆಲ್ಲರೂ ಒಂದಾಗಿ ಕೈಜೋಡಿಸೋಣ ಎಂದರು.ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಮಾತನಾಡಿ, 5 ದಿನಗಳ ಉತ್ಸವವು ವಿಜೃಂಭಣೆಯಿಂದ ಜರಗಿದೆ. ದೇವರ ಉತ್ಸವದ ಜತೆಗೆ ನಮಗೂ ಸಂಭ್ರಮದ ಜಾತ್ರೆಯಾಗಿದೆ. ಈ ಕ್ಷೇತ್ರ ತುಂಬಾ ಹೆಸರುವಾಸಿಯಾಗಿದೆ. ಇದಕ್ಕೆ ಕಾರಣ ಸಂಸ್ಥೆಯ ಅಧ್ಯಕ್ಷರು. ಅವರು ತಮ್ಮ ಪದಾಧಿಕಾರಿಗಳ ಜತೆಗೆ ಹೊಂದಾಣಿಕೆಯಿಂದ ಇರುವುದರಿಂದಲೇ ಸಾಧ್ಯವಾಗಿದೆ. ಶಂಕರ ಶೆಟ್ಟಿ ಅವರ ಸಹಕಾರದಿಂದ ನಮ್ಮ ಭವನದ ಯೋಜನೆ ಯಶಸ್ವಿಯಾಗುವುದರಲ್ಲಿ ಸಂಶ ಯವಿಲ್ಲ ಎಂದು ಹೇಳಿದರು. ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ಅನಂತರ ಬಾಲಚಂದ್ರ ರೈ ವರುಣ್ ಹೊಟೇಲ್ ಕಲಂಬೊಲಿ ಇವರ ಸೇವೆಯ ರೂಪದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅನ್ನಸಂತರ್ಪಣೆ ನಡೆಯಿತು. ಕಳೆದ 35 ವರ್ಷಗಳಿಂದ ತಾಯಿ ಮೂಕಾಂಬಿಕೆಯ ಸೇವೆ ಮಾಡುವ ಭಾಗ್ಯ ನೀವು ನೀಡಿದ್ದೀರಿ. ಇಲ್ಲಿನ ವಾರ್ಷಿಕೋತ್ಸವ ಎಂದರೆ ಘನ್ಸೋಲಿ ಉತ್ಸವ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸೇವೆ ಮಾಡುವವರು ಎಲ್ಲರೂ ಒಳ್ಳೆಯ ಜನರೇ ದೊರಕಿದ್ದಾರೆ. ಅದರ ಜತೆಗೆ ದಾನಿಗಳು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ. ತಾಯಿ ಮೂಕಾಂಬಿಕೆ ಅನ್ನಪೂರ್ಣೇಶ್ವರಿ ರೂಪ ಆದ್ದರಿಂದ ಇಲ್ಲಿ ನಿರಂತರ ಅನ್ನಸಂತರ್ಪಣೆ ನಡೆಯುತ್ತಿದೆ. ಅದೇ ರೀತಿ ಕಲಾಪ್ರಿಯೆ. ಆದ್ದರಿಂದ ನಿರಂತರ ಯಕ್ಷಗಾನ ಸೇವೆ ನಡೆಯುತ್ತಿದೆ. ನಮ್ಮ ದೇವಾಲ ಯದ ಎರಡು ಅಂಗಸಂಸ್ಥೆ ಮುಖಾಂತರ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಉಪಸಮಿತಿಯ ಯುವ ಸದಸ್ಯರು ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಭಾ ಭವನದ ನಿರ್ಮಾಣ ಕಾರ್ಯಕ್ಕೆ ಸಹಕಾರದ ಅಗತ್ಯವಿದೆ. – ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ಮಂದಿರ ಘನ್ಸೋಲಿ