Advertisement

ಘನ್ಸೋಲಿ ಮೂಕಾಂಬಿಕಾ ಚಾರಿಟೆಬಲ್‌ ಮಂಡಲದಿಂದ ಆರೋಗ್ಯ ತಪಾಸಣಾ ಶಿಬಿರ

03:41 PM Mar 17, 2017 | |

ಮುಂಬಯಿ: ಮನುಷ್ಯ ಜೀವನದಲ್ಲಿ ಯಶಸ್ಸನ್ನು  ಸಾಧಿಸಬೇಕಾದರೆ  ಅವರ  ಯೋಗ ಭಾಗ್ಯ, ಆರೋಗ್ಯ ಹಾಗೂ ಪ್ರಯತ್ನ ಮುಖ್ಯವಾಗಿರಬೇಕು. ಆದರೆ ಆರೋಗ್ಯವಿಲ್ಲದ ಮಾನವನಿಗೆ ಮೂರು ವಿಷಯಗಳು ಅವನ ಜೀವನದ ಶ್ರೇಯಸ್ಸಿಗೆ ಸಂಗಾತಿಯಾಗಲಾರವು. ನಾವು ಕೆಲವೊಮ್ಮೆ ಅತಿಯಾದ ಸಂಪತ್ತನ್ನು ಗಳಿಸುವ ಲಾಲಸೆಯಿಂದ ನಮ್ಮ ಆರೋಗ್ಯದತ್ತ ಗಮನ ಹರಿಸುವುದಿಲ್ಲ. ಆದರೆ ಜೀವನಾಂತ್ಯದಲ್ಲಿ ನಾವು ಗಳಿಸಿದ ಹಣವನ್ನು ನಮ್ಮ ಆರೋಗ್ಯವನ್ನು ಸರಿಪಡಿಸಲು ಸಂಪೂರ್ಣವಾಗಿ ವ್ಯಯಿಸುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನ ಕೇವಲ ಮೆದುಳು ಕೆಲಸ ಮಾಡುವುದೇ ವಿನಃ ಅವನ ದೇಹ ಮಾಡುವುದಿಲ್ಲ. ಆದ್ದರಿಂದಲೇ ಮನುಷ್ಯ ಕಿರಿಯ ಹರೆಯದಲ್ಲೇ ನಾನಾ ವಿಧದ  ಕಾಯಿಲೆಗಳಿಗೆ ಬಲಿಯಾಗುತ್ತಾನೆ. ಇಂದಿನ ಕಾಲದಲ್ಲಿ ಪ್ರತಿಯೋರ್ವ ಮನುಷ್ಯನು ಆರೋಗ್ಯವನ್ನು ಕಾಪಾಡುವ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಮಾತ್ರವಲ್ಲದೆ ಕಡಿಮೆ ಎಂದರೂ ಪ್ರತಿ ವರ್ಷಕ್ಕೊಮ್ಮೆ ತನ್ನ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಲೇಬೇಕು ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.

Advertisement

ಮಾ. 12ರಂದು ಪೂರ್ವಾಹ್ನ 10ರಿಂದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಆವರಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳ ಹಾಗೂ ಲಯನ್ಸ್‌ ಕ್ಲಬ್‌ ಆಫ್‌ ಐರೋಲಿ ಜಂಟಿಯಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರದ ತುಳು-ಕನ್ನಡಿಗರ ಹಿತದೃಷ್ಟಿಯಿಂದ ಸಂಸ್ಥೆಯು ಪ್ರತಿ ವರ್ಷ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಸಹಕರಿಸುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಲಯನ್ಸ್‌ ಕ್ಲಬ್‌ ಆಫ್‌ ಐರೋಲಿಯ ಅಧ್ಯಕ್ಷೆರೂಪಾ  ಸಂತೋಷ್‌  ಶೆಟ್ಟಿ     ಮಾತನಾಡಿ, ಶಿಬಿರಕ್ಕೆ  ಸಹಕರಿ ಸಿದ ಎಲ್ಲಾ ವೈದ್ಯರಿಗೆ, ಲಯನ್ಸ್‌ ಕ್ಲಬ್‌ನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ವೇದಿಕೆಯಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳದ ಅಧ್ಯಕ್ಷೆ ಜಗದೀಶ್‌ ಶೆಟ್ಟಿ ನಂದಿಕೂರು, ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಮೂಕಾಂಬಿಕಾ ದೇವಾಲಯದ ಕೋಶಾಧಿಕಾರಿ ಶೇಖರ್‌ ದೇವಾಡಿಗ, ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿಯ ನವಿಮುಂಬಯಿ ಸಮನ್ವಯಕರಾದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ಲಯನ್ಸ್‌ ಕ್ಲಬ್‌ನ ಪ್ರಾದೇಶಿಕ ವಲಯದ ಮುಖ್ಯಸ್ಥ ಶ್ರೀ ಮೂರ್ತಿ, ಮಾಜಿ ಅಧ್ಯಕ್ಷ ಸಂಜೀವ ಸೂರ್ಯವಂಶಿ ಹಾಗೂ ಉಪಾಧ್ಯಕ್ಷ ರಾಜೇಶ್‌ ಬಿ. ಶೆಟ್ಟಿ ಅವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ನಿರ್ವಹಿಸಿದರು.
ನೂರಾರು ಮಂದಿ ತುಳು-ಕನ್ನಡಿಗರು, ಅನ್ಯಭಾಷಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಡಾ| ಕುಡಾಬೆ, ಡಾ| ಪಲ್ಲವಿ ದಲಾಲ್‌, ಡಾ| ಪ್ರಮೋದ್‌ ಸಾಬ್ಲೆ, ಡಾ| ನೀತಾ ರಾಮಿನಲ್‌, ಡಾ| ನಲೀಮ್‌ ಹಾಗೂ ಇತರ ಸಿಬಂದಿಗಳು ಪಾಲ್ಗೊಂಡು ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next